ETV Bharat / bharat

ಸಿಧು ಮೂಸೆ ವಾಲಾ ಹತ್ಯೆ ಪ್ರಕರಣ : ಆರೋಪಿ ರೇಖಿ ವೈದ್ಯನಿಗೆ ಜೈಲಿನಲ್ಲಿ ಥಳಿತ, ಸ್ಥಳಾಂತರ - Sandeep Kekra has been sent to Muktsar Jail after his police remand ended

ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರ ಹತ್ಯೆ ಸಂಬಂಧ ಬಂಧಿತನಾಗಿರುವ ರೇಖಿ ಅಭ್ಯಾಸಕಾರ ಸಂದೀಪ್ ಕೇಕ್ರಾ ಅವರನ್ನು ಜೈಲಿನಲ್ಲಿ ಥಳಿಸಲಾಗಿದೆ.

ಸಿಧು ಮುಸೇವಾಲಾ  ಹತ್ಯೆಯ ಆರೋಪಿ ರೇಖಿ ವೈದ್ಯನಿಗೆ ಜೈಲಿನಲ್ಲಿ ಥಳಿತಸಲಾಗಿದೆ
ದ ಸಿಧು ಮುಸೇವಾಲಾ ಹತ್ಯೆಯ ಆರೋಪಿ ರೇಖಿ ವೈದ್ಯನಿಗೆ ಜೈಲಿನಲ್ಲಿ ಥಳಿತಸಲಾಗಿದೆ
author img

By

Published : Jun 19, 2022, 4:48 PM IST

ಚಂಡೀಗಢ: ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರ ಹತ್ಯೆ ಸಂಬಂಧ ಬಂಧಿತನಾಗಿರುವ ರೇಖಿ ಅಭ್ಯಾಸಕಾರ ಸಂದೀಪ್ ಕೇಕ್ರಾ ಅವರನ್ನು ಜೈಲಿನಲ್ಲಿ ಥಳಿಸಲಾಗಿದೆ ಎನ್ನಲಾಗಿದೆ. ಜೈಲಿನಲ್ಲಿ ಬಾಂಬಿಬಾ ಗ್ಯಾಂಗ್ ಥಳಿಸಿದೆ. ಇದಾದ ನಂತರ, ಜೈಲು ಅಧಿಕಾರಿಗಳು ತಕ್ಷಣವೇ ಅವರನ್ನು ಗೋಯಿಂದ್ವಾಲ್ ಸಾಹಿಬ್ ಜೈಲಿಗೆ ವರ್ಗಾಯಿಸಿದರು ಎಂದು ಹೇಳಲಾಗುತ್ತಿದೆ. ಆದರೆ ಪೊಲೀಸರು ಈ ಘಟನೆಯನ್ನು ನಿರಾಕರಿಸಿದ್ದಾರೆ.

ಹೊಣೆ ಹೊತ್ತ ಬಂಬಿಹಾ ಗ್ಯಾಂಗ್: ಜೈಲಿನಲ್ಲಿ ಸಂದೀಪ್ ಕೆಕ್ರಾ ಅವರನ್ನು ಥಳಿಸಲಾಗಿದೆ ಎಂದು ದಾವೀಂದರ್ ಬಂಬಿಹಾ ಗುಂಪು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಹೊಣೆ ಹೊತ್ತುಕೊಂಡಿದೆ. ಅಷ್ಟೇ ಅಲ್ಲ, ಆತನನ್ನು ಕೊಲ್ಲಬೇಕಿತ್ತು. ಆದರೆ, ಆತ ಬದುಕಿದ್ದಾನೆ ಎಂದೂ ಸಹ ಉಲ್ಲೇಖಿಸಲಾಗಿದೆ.

ಸಿಧು ಮುಸೇವಾಲಾ  ಹತ್ಯೆಯ ಆರೋಪಿ ರೇಖಿ ವೈದ್ಯನಿಗೆ ಜೈಲಿನಲ್ಲಿ ಥಳಿತಸಲಾಗಿದೆ
ಸಿಧು ಮುಸೇವಾಲಾ ಹತ್ಯೆಯ ಆರೋಪಿ ರೇಖಿ ವೈದ್ಯನಿಗೆ ಜೈಲಿನಲ್ಲಿ ಥಳಿತಸಲಾಗಿದೆ

ಈ ಬಗ್ಗೆ ಬಾಂಬಿಹಾ ಗ್ಯಾಂಗ್ ಬೆದರಿಕೆ ಹಾಕಿದ್ದು, ಸಿದ್ದು ಮೂಸೆ ವಾಲಾ ಹಂತಕರನ್ನು ಬಿಡುವುದಿಲ್ಲ, ಜೈಲಿಗೆ ಯಾರೇ ಬಂದರೂ ಇದೇ ರೀತಿ ನಡೆಸಿಕೊಳ್ಳಲಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

ಕೊಲೆಯಾದ ದಿನ ಸಂದೀಪ್ ಕೇಕ್ರಾ ಮೂಸೆ ವಾಲಾ ಮನೆಗೆ ಹೋಗಿದ್ದ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಅಲ್ಲಿ ಟೀ ಕುಡಿದು ನಂತರ ಮೂಸೆ ವಾಲಾ ಜೊತೆ ಸೆಲ್ಫಿ ತೆಗೆದುಕೊಂಡಿದ್ದನಂತೆ. ಇದಾದ ನಂತರ ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್‌ಗೆ ಈತ ಮಾಹಿತಿ ನೀಡಿದ್ದನಂತೆ.

ಇದನ್ನೂ ಓದಿ : ಯುಪಿಯಲ್ಲಿ ಎಲ್ಲೆಲ್ಲೂ 'ಬುಲ್ಡೋಜರ್' ಸದ್ದು.. ವಧುವಿನ ಮನೆಗೆ ವರ ತಲುಪಿದ್ದೂ ಇದರಲ್ಲೇ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.