ನವದೆಹಲಿ: ಪ್ರೇಯಸಿಯನ್ನ 35 ಪೀಸ್ ಮಾಡಿ ಕೊಲೆ ಮಾಡಿದ್ದ ಹಂತಕ ಅಫ್ತಾಬ್ ಅಮೀನ್ ಪೂನಾವಾಲಾನ ಸುಳ್ಳು ಪತ್ತೆ ಪರೀಕ್ಷೆ ಇಂದು ಕೂಡ ಮುಂದುವರಿದಿದ್ದು, ದೆಹಲಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪೊಲೀಸ್ ಕಸ್ಟಡಿಯಿಂದ ಬಿಗಿಭದ್ರತೆಯಲ್ಲಿ ಕರೆತರಲಾಯಿತು.
ನಿನ್ನೆ ಸಂಜೆ ಪಾಲಿಗ್ರಾಫ್(ಸುಳ್ಳು ಪತ್ತೆ) ಪರೀಕ್ಷೆಗೆಂದು ಅಫ್ತಾಬ್ನನ್ನು ಕರೆದೊಯ್ಯುವಾಗ ಎಫ್ಎಸ್ಎಲ್ ಕಚೇರಿಯ ಮುಂದೆ ಜಮಾಯಿಸಿದ್ದ ಹಿಂದುಪರ ಸಂಘಟನೆಯ ಕಾರ್ಯಕರ್ತರು ಹಂತಕನಿದ್ದ ವಾಹನದ ಮೇಲೆ ಆಯುಧಗಳಿಂದ ದಾಳಿ ಮಾಡಿದ್ದರು. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಬಳಿಕ ಇಬ್ಬರನ್ನು ಪೊಲೀಸರು ಬಂಧಿಸಿದ್ದರು.
-
#WATCH | Delhi: Shraddha murder accused Aftab being taken back from Forensic Science Laboratory (FSL), where he was brought for a Polygraph test today pic.twitter.com/Bofsjrc9St
— ANI (@ANI) November 29, 2022 " class="align-text-top noRightClick twitterSection" data="
">#WATCH | Delhi: Shraddha murder accused Aftab being taken back from Forensic Science Laboratory (FSL), where he was brought for a Polygraph test today pic.twitter.com/Bofsjrc9St
— ANI (@ANI) November 29, 2022#WATCH | Delhi: Shraddha murder accused Aftab being taken back from Forensic Science Laboratory (FSL), where he was brought for a Polygraph test today pic.twitter.com/Bofsjrc9St
— ANI (@ANI) November 29, 2022
ಕೊಲೆ ಪ್ರಕರಣದಲ್ಲಿ ಹಂತಕ ನೀಡುತ್ತಿರುವ ಹೇಳಿಕೆಗಳು ಎಷ್ಟು ಸತ್ಯ ಎಂಬುದನ್ನು ದೃಢೀಕರಿಸಲು ದೆಹಲಿ ಪೊಲೀಸರು ಕೋರ್ಟ್ ಅನುಮತಿಯ ಮೇರೆಗೆ ಸುಳ್ಳು ಪತ್ತೆ ಪರೀಕ್ಷೆ ನಡೆಸುತ್ತಿದ್ದಾರೆ. ಇದಾದ ಬಳಿಕ ನಾರ್ಕೊಟಿಕ್ ಪರೀಕ್ಷೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಓದಿ: ಶ್ರದ್ಧಾ ಹಂತಕನಿದ್ದ ವಾಹನದ ಮೇಲೆ ಹಿಂದು ಸೇನಾನಿಗಳ ದಾಳಿ, ಇಬ್ಬರು ವಶ