ETV Bharat / bharat

11ಕೆವಿ ವಿದ್ಯುತ್ ತಂತಿ ಬಿದ್ದು, ಇಬ್ಬರು ಬೈಕ್ ರೈಡರ್​ಗಳ ಸಜೀವ ದಹನ

ಸಿರೋಹಿ ಜಿಲ್ಲೆಯ ಮೌಂಟ್ ಅಬು ಬಳಿಯ ಅಲ್ಸುಬಾದಲ್ಲಿ ಮುಂಜಾನೆ 4.30ರ ಸುಮಾರಿಗೆ ದುರ್ಘಟನೆಯೊಂದು ನಡೆದಿದ್ದು, ಇಬ್ಬರು ಬೈಕ್​ ರೈಡರ್​ಗಳು ಸಜೀವ ದಹನವಾದರು.

shocking-incident-in-mount-abu-sirohi-two-bike-riders-burnt-alive
11ಕೆವಿ ವಿದ್ಯುತ್ ತಂತಿ ಬಿದ್ದು, ಇಬ್ಬರು ಬೈಕ್ ರೈಡರ್​ಗಳ ಸಜೀವ ದಹನ
author img

By

Published : Oct 6, 2021, 11:07 AM IST

Updated : Oct 6, 2021, 12:30 PM IST

ಸಿರೋಹಿ(ರಾಜಸ್ಥಾನ): 11 ಕಿಲೋ ವೋಲ್ಟ್​​ ಸಾಮರ್ಥ್ಯದ ವಿದ್ಯುತ್ ತಂತಿ ಬಿದ್ದು ಇಬ್ಬರು ಯುವಕರು ಸಜೀವ ದಹನವಾದ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯ ಮೌಂಟ್ ಅಬುವಿನಲ್ಲಿ ನಡೆದಿದೆ. ವಿದ್ಯುತ್ ಸ್ಥಗಿತಗೊಳಿಸಿ, ಬೆಂಕಿ ನಂದಿಸುವ ವೇಳೆಗೆ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಲಭ್ಯವಾದ ಮಾಹಿತಿಯ ಪ್ರಕಾರ, ಜಿಲ್ಲೆಯ ಮೌಂಟ್ ಅಬು ಬಳಿಯ ಅಲ್ಸುಬಾದಲ್ಲಿ ಮುಂಜಾನೆ 4.30ರ ಸುಮಾರಿಗೆ ಘಟನೆ ನಡೆದಿದೆ. ಬೈಕ್​ನಲ್ಲಿ ತೆರಳುತ್ತಿದ್ದ ಇಬ್ಬರು ವ್ಯಕ್ತಿಗಳ ಮೇಲೆ 11 ಕಿಲೋ ವೋಲ್ಟ್​​ ವಿದ್ಯುತ್​ ಹರಿಯುತ್ತಿದ್ದ ತಂತಿಯೊಂದು ಬಿದ್ದಿದೆ.

ಇಬ್ಬರು ಬೈಕ್ ರೈಡರ್​ಗಳ ಸಜೀವ ದಹನ

ಇದರಿಂದಾಗಿ ಬೈಕ್​ಗೆ ಬೆಂಕಿ ಹೊತ್ತಿಕೊಂಡಿದ್ದು, ಇಬ್ಬರೂ ಯುವಕರು ಬೆಂಕಿಗೆ ಸಿಲುಕಿದ್ದಾರೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಮಾತ್ರವಲ್ಲದೇ ವಿದ್ಯುತ್ ಸ್ಥಗಿತಗೊಳಿಸಿ ಬೆಂಕಿಯನ್ನು ನಂದಿಸಲು ಯತ್ನಿಸಿದ್ದಾರೆ. ಈ ವೇಳೆಗೆ ಯುವಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಶವಾಗಾರಕ್ಕೆ ಇಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಲಖಿಂಪುರಕ್ಕೆ ತೆರಳಲು ರಾಹುಲ್‌ ಗಾಂಧಿ ನಿಯೋಗಕ್ಕೆ ಅನುಮತಿ ನಿರಾಕರಿಸಿದ ಯುಪಿ ಸರ್ಕಾರ

Last Updated : Oct 6, 2021, 12:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.