ತಿರುಚ್ಚಿ(ತಮಿಳುನಾಡು): ಇಲ್ಲಿನ ಭೀಮ್ನಗರದ ವಕೀಲ ಗೋಪಿ ಕಣ್ಣನ್ ಅವರನ್ನ ಭಾನುವಾರ ಬೆಳಗ್ಗೆ ಅಪರಿಚಿತರ ಗುಂಪೊಂದು ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.
ತಿರುಚ್ಚಿಯ ವಕೀಲನಾಗಿ ಸೇವೆ ಸಲ್ಲಿಸುತ್ತಿದ್ದ ಗೋಪಿ ಕಣ್ಣನ್ ಮೇಲೆ ಈ ದಾಳಿ ನಡೆದಿದೆ. ಮನೆಯ ಮುಂದೆ ಮಗಳೊಂದಿಗೆ ಆಟವಾಡುತ್ತಿದ್ದ ವೇಳೆ ಏಕಾಏಕಿ ಹಲ್ಲೆ ನಡೆಸಿರುವ ಗುಂಪು ಚಾಕುವಿನಿಂದ ಇರಿದು ಕೊಲೆ ಮಾಡಿದೆ. ಇದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಇದನ್ನೂ ಓದಿ: ಕೋವಿಡ್ ಸೋಂಕಿಗೊಳಗಾದ ಪೋಷಕರು: ಆರು ತಿಂಗಳ ಮಗುವಿನ ರಕ್ಷಣೆಗೆ ಮುಂದಾದ ಪೊಲೀಸ್!
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಅಪರಾಧಿಗಳ ಹುಡುಕಾಟದಲ್ಲಿ ನಿರಂತರಾಗಿದ್ದಾರೆ. ಗೋಪಿ ಕಣ್ಣನ್ ತನ್ನ ಮಗಳಿಗೆ ಬೈಸಿಕಲ್ ಸವಾರಿ ಮಾಡುವುದನ್ನು ಹೇಳಿಕೊಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಐವರು ಅವರ ಮೇಲೆ ದಾಳಿ ನಡೆಸಿದ್ದಾರೆ.