ಕನ್ಯಾಕುಮಾರಿ (ತಮಿಳುನಾಡು): ಬಸ್ನಿಂದ ಕಂಡಕ್ಟರ್ ಆಕಸ್ಮಿಕವಾಗಿ ಉರುಳಿ ಬಿದ್ದಿದ್ದು, ಇದನ್ನು ಚಾಲಕ ಗಮನಿಸದೇ ಬಸ್ ಅನ್ನು ಸುಮಾರು 5 ಕಿಲೋಮೀಟರ್ ತೆಗೆದುಕೊಂಡು ಹೋದ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ನಡೆದಿದೆ.
ವಡಕಂಕುಲಂ ಮತ್ತು ನಾಗರಕೋಯಿಲ್ ಮಾರ್ಗದಲ್ಲಿ ಘಟನೆ ಸಂಭವಿಸಿದ್ದು, ಚಲಿಸುತ್ತಿರುವ ಬಸ್ನಿಂದ ಕಂಡಕ್ಟರ್ ಮಹಾಲಿಂಗಂ ಉರುಳಿ ಬಿದ್ದಿದ್ದನು. ಸುಮಾರು ಐದು ಕಿಲೋಮೀಟರ್ಗಳ ನಂತರ ಕಂಡಕ್ಟರ್ ಇಲ್ಲದಿರುವುದನ್ನು ಕಂಡ ಸಾರ್ವಜನಿಕರು ಚಾಲಕನನ್ನು ವಿಚಾರಿಸಿದಾಗ ಅನಾಹುತ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಭಕ್ತನ ಪಂಚೆಯಲ್ಲಿ ಅಡಗಿತ್ತು ಪುರಾತನ ಪಂಚಲೋಹ ವಿಗ್ರಹ !
ಬಸ್ ಅನ್ನು ವಾಪಸ್ ತೆಗೆದುಕೊಂಡು ಹೋದ ಚಾಲಕ ರಸ್ತೆಯ ಪಕ್ಕದಲ್ಲಿ ಗಾಯಗಳಾಗಿ ಬಿದ್ದಿದ್ದ ಮಹಾಲಿಂಗಂನನ್ನು ಆಸ್ಪತ್ರೆಗೆ ಸೇರಿಸಿದ್ದಾನೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.