ETV Bharat / bharat

Maharashtra-Tripura Violence..ಬಿಜೆಪಿ ವಿರುದ್ಧ ಸಿಟ್ಟಾದ ಶಿವಸೇನೆ..ಮಣಿಪುರ ಹಿಂಸಾಚಾರ ಮಹಾರಾಷ್ಟ್ರದ ಮೇಲೆ ಯಾಕೆ ಪರಿಣಾಮ ಬೀರುತ್ತಿದೆ ಎಂದು ಪ್ರಶ್ನೆ! - ಶಿವಸೇನೆ

ಅಮರಾವತಿಯಲ್ಲಿ ಗಲಭೆ ನಡೆಸಲು ಅವರಿಗೆ ಅಧಿಕಾರ ಕೊಟ್ಟವರು ಯಾರು? ಬೆಂಬಲ ಒದಗಿಸಿದವರು ಯಾರು? ಹೆಗಲಿಗೆ ಬಂದೂಕು ಹಾಕಿಕೊಂಡು ವಾತಾವರಣ ಹಾಳು ಮಾಡುತ್ತಿರುವವರು ಯಾರು? ಧರ್ಮದ ಪರವಾಗಿ ಹೋರಾಡುವ ಮೂಲಕ ಮಹಾರಾಷ್ಟ್ರದ ವಾತಾವರಣ ನಿಜವಾಗಿಯೂ ಹದಗೆಡುತ್ತಿದೆಯೇ? ಎಂದು ಸಾಮ್ನಾ ಸಂಪಾದಕೀಯದಲ್ಲಿ ಪ್ರಶ್ನಿಸಲಾಗಿದೆ..

ಶಿವಸೇನೆ
ಶಿವಸೇನೆ
author img

By

Published : Nov 15, 2021, 2:48 PM IST

Updated : Nov 16, 2021, 11:45 AM IST

ಮುಂಬೈ(ಮಹಾರಾಷ್ಟ್ರ) : ತ್ರಿಪುರಾ ಹಿಂಸಾಚಾರವನ್ನು (Tripura Violence) ಖಂಡಿಸಿ ಮಹಾರಾಷ್ಟ್ರದಲ್ಲಿ ನಿರಂತರವಾಗಿ ಗಲಭೆ-ಹಿಂಸಾಚಾರ ಹೆಚ್ಚುತ್ತಿದೆ. ಈ ಬಗ್ಗೆ ಶಿವಸೇನೆ (Shiv Sena) ತನ್ನ ಮುಖವಾಣಿ 'ಸಾಮ್ನಾ' (Saamna) ಪತ್ರಿಕೆಯ ಸಂಪಾದಕೀಯದಲ್ಲಿ ಬರೆದುಕೊಂಡಿದೆ.

ರಾಝಾ ಅಕಾಡೆಮಿ (Raza Academy) ಪರವಾಗಿ ಕೆಲವರು ದನಿ ಎತ್ತಿದ್ದಾರೆ. ಆದರೆ, ರಾಝಾ ಅಕಾಡೆಮಿಯಂತಹ ಸಂಸ್ಥೆಗಳು ಯಾವುದೇ ಮುಸ್ಲಿಂ ಸಮುದಾಯವನ್ನು (Muslim Community) ಪ್ರತಿನಿಧಿಸುತ್ತಿಲ್ಲ. ಹೀಗಾಗಿ, ರಾಝಾ ಅಕಾಡೆಮಿಗೆ ಗಲಭೆ ಎಬ್ಬಿಸುವ ಅಧಿಕಾರವಿಲ್ಲ. ಈ ಸಂಘಟನೆಯಿಂದಾಗಿ ತ್ರಿಪುರಾದಲ್ಲಿನ ಘಟನೆಗಳು ಮಹಾರಾಷ್ಟ್ರದ ಮೇಲೆ ಪರಿಣಾಮ ಬೀರುತ್ತಿವೆ ಎಂದು ಶಿವಸೇನೆ ಕಿಡಿಕಾರಿದೆ.

ರಾಝಾ ಅಕಾಡೆಮಿ, ಇದು 1978ರಲ್ಲಿ ಸಯ್ಯದ್​ ನೂರಿ ಸ್ಥಾಪಿಸಿದ ಮಹಾರಾಷ್ಟ್ರದ ಮುಸ್ಲಿಂ ಮೂಲಭೂತವಾದಿ ಸಂಘಟನೆಯಾಗಿದೆ. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಹಿಂಸಾಚಾರ ಆತಂಕಕಾರಿ. ಜಗತ್ತಿನಲ್ಲಿ ಮುಸಲ್ಮಾನರ ವಿಷಯದಲ್ಲಿ ಏನಾದರೂ ಗಲಾಟೆ ನಡೆದರೆ, ಈ ಸಂಘಟನೆ ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ವಿರೋಧಿಸಲು ಪ್ರಾರಂಭಿಸುತ್ತದೆ.

ಅಮರಾವತಿಯಲ್ಲಿ ಗಲಭೆ ನಡೆಸಲು ಅವರಿಗೆ ಅಧಿಕಾರ ಕೊಟ್ಟವರು ಯಾರು? ಬೆಂಬಲ ಒದಗಿಸಿದವರು ಯಾರು? ಹೆಗಲಿಗೆ ಬಂದೂಕು ಹಾಕಿಕೊಂಡು ವಾತಾವರಣ ಹಾಳು ಮಾಡುತ್ತಿರುವವರು ಯಾರು? ಧರ್ಮದ ಪರವಾಗಿ ಹೋರಾಡುವ ಮೂಲಕ ಮಹಾರಾಷ್ಟ್ರದ ವಾತಾವರಣ ನಿಜವಾಗಿಯೂ ಹದಗೆಡುತ್ತಿದೆಯೇ? ಎಂದು ಸಾಮ್ನಾ ಸಂಪಾದಕೀಯದಲ್ಲಿ ಪ್ರಶ್ನಿಸಲಾಗಿದೆ.

ಇದನ್ನೂ ಓದಿ: Maharashtra Violence: ಮಹಾರಾಷ್ಟ್ರದಲ್ಲಿ ಕೆಲ ಸಂಘಟನೆಗಳು ಕರೆ ನೀಡಿದ್ದ ಬಂದ್​ನಲ್ಲಿ ಹಿಂಸಾಚಾರ..

ಉತ್ತರಪ್ರದೇಶ ಸೇರಿದಂತೆ 4-5 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ದೇಶದಲ್ಲಿ ಹಿಂದೂಗಳಿಗೆ ಅಪಾಯ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆಯಾಗುತ್ತಿದ್ದರೆ, ತ್ರಿಪುರಾದಲ್ಲಿ ಮಾತ್ರ ಏಕೆ ಕಳವಳ ವ್ಯಕ್ತವಾಗಿದೆ? ಉತ್ತರ ಪ್ರದೇಶ, ಮಧ್ಯಪ್ರದೇಶ, ಕರ್ನಾಟಕ, ಹರಿಯಾಣ, ಬಿಹಾರಗಳಲ್ಲಿ ಹಿಂದೂಗಳು ಕೋಪಗೊಳ್ಳುವುದಿಲ್ಲವೇ? ತ್ರಿಪುರಾದಲ್ಲಿ ಕಿಡಿ ಕಾರಲು ಪ್ರಮುಖ ಕಾರಣವೆಂದರೆ, ಉತ್ತರ ಭಾರತದಲ್ಲಿರುವ ಈ ಪುಟ್ಟ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ವಿಫಲವಾಗಿದೆ, ಅಲ್ಲಿ ಬಿಜೆಪಿಯ ಜನಪ್ರಿಯತೆ ಕುಸಿಯುತ್ತಿದೆ ಎಂದಾಗಿದೆ. ಹೀಗಂತ ಸಾಮ್ನಾ ಸಂಪಾದಕೀಯದಲ್ಲಿ ಶಿವಸೇನಾ ಬರೆದುಕೊಂಡಿದೆ.

Last Updated : Nov 16, 2021, 11:45 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.