ETV Bharat / bharat

ಪ್ರತ್ಯೇಕವಾದಿ ಸಿದ್ಧಾಂತ: ಕಾಶ್ಮೀರದ ಕಾನೂನು ಕಾಲೇಜು ಪ್ರಾಂಶುಪಾಲ ವಜಾ - Sheikh Showkat sacked

ಭಾರತದಲ್ಲಿದ್ದುಕೊಂಡು ಪಾಕಿಸ್ತಾನದ ಪ್ರತ್ಯೇಕವಾದಿ ಸಂಘಟನೆ ಸಿದ್ಧಾಂತ ಅನುಕರಣೆ ಮಾಡ್ತಿದ್ದ ಪ್ರಾಂಶುಪಾಲನೋರ್ವನನ್ನ ಅಮಾನತು ಮಾಡಲಾಗಿದೆ.

Sheikh Showkat sacked as law college principal

author img

By

Published : Apr 11, 2022, 7:24 PM IST

ಶ್ರೀನಗರ(ಜಮ್ಮು): ಕಾಶ್ಮೀರದ ಪ್ರಮುಖ ಕಾನೂನು ಕಾಲೇಜಿನ ಪ್ರಾಂಶುಪಾಲ ಶೇಖ್ ಶೌಕತ್​ ಹುಸೇನ್ ಅವರನ್ನು ಪ್ರಿನ್ಸಿಪಾಲ​ ಹುದ್ದೆಯಿಂದ ವಜಾಗೊಳಿಸಲಾಗಿದೆ. ಪಾಕಿಸ್ತಾನದ ಬೆಂಬಲಿತ ಪ್ರತ್ಯೇಕವಾದಿ ಸಂಘಟನೆ ಸಿದ್ಧಾಂತ ಅನುಕರಣೆ ಮಾಡ್ತಿದ್ದ ಕಾರಣ ಅವರನ್ನು ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.

2016ರಲ್ಲಿ ಡಾ. ಶೇಖ್ ಶೌಕತ್​ ಅವರು ಸೈಯದ್ ಅಲಿ ಶಾ ಗೀಲಾನಿ, ಅರುಂಧತಿ ರಾಯ್, ಪ್ರೊ.ಎಸ್‌.ಆರ್.ಗೀಲಾನಿ ಜೊತೆಗೆ ದೆಹಲಿಯಲ್ಲಿ ನಡೆದ ಸಮಾವೇಶವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಭಾರತ ವಿರೋಧಿ ಭಾಷಣ ಮಾಡಿದರು. ಶ್ರೀನಗರದ ಬರ್ಜಲ್ಲಾದ ನಿವಾಸಿಯಾಗಿರುವ ಇವರು, ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಪ್ರಮುಖ ಕಾನೂನು ತಜ್ಞರಾಗಿದ್ದಾರೆ.

ಇದನ್ನೂ ಓದಿ: ಮಗ ಸತ್ತನೆಂದು ಅಂತ್ಯಸಂಸ್ಕಾರ ನಡೆಸಿದ ತಾಯಿ: 12 ವರ್ಷಗಳ ನಂತರ ಮನೆಗೆ ಬಂದ ಯುವಕ

ಜಮ್ಮು-ಕಾಶ್ಮೀರ ಅಧಿಕಾರಿಗಳು ಇವರು ಪಡೆದುಕೊಳ್ಳುತ್ತಿದ್ದ ಸರ್ಕಾರದ ಪ್ರಯೋಜನ ಹಾಗೂ ಪಿಂಚಣಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಪ್ರತಿ ತಿಂಗಳು 1 ಲಕ್ಷ ರೂಪಾಯಿ ಸಂಬಳ ಹಾಗೂ ಇಲ್ಲಿಯವರೆಗೆ 3.3 ಕೋಟಿ ರೂ. ಹೆಚ್ಚುವರಿ ಭತ್ಯೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.