ETV Bharat / bharat

ಶಶಿ ತರೂರ್​ ಎಡವಟ್ಟು: ಸುಮಿತ್ರಾ ಮಹಾಜನ್​​​ ಸಾವಿನ ಸುಳ್ಳು ಸುದ್ದಿ ಟ್ವೀಟ್​ ಮಾಡಿ ಡಿಲಿಟ್​ ಮಾಡಿದ ಕೈ ನಾಯಕ

author img

By

Published : Apr 23, 2021, 2:05 PM IST

ಸುಳ್ಳು ಸುದ್ದಿಯನ್ನು ನಿಜವೆಂದು ನಂಬಿ ಸುಮಿತ್ರಾ ಮಹಾಜನ್ ಅವರು ನಿಧನರಾಗಿದ್ದಾರೆಂದು ಟ್ವೀಟ್​ ಮಾಡಿದ್ದ ಶಶಿ ತರೂರ್, ಅನೇಕರು ಈ ವಿಚಾರ ಸತ್ಯವಲ್ಲ ಎಂದು ಪ್ರತಿಕ್ರಿಯಿಸುತ್ತಿದ್ದಂತೆಯೇ ತಮ್ಮ ಟ್ವೀಟ್​ ಅಳಿಸಿಹಾಕಿ ಕ್ಷಮೆ ಕೇಳಿದ್ದಾರೆ.

Tharoor deletes tweet on Sumitra Mahajan after BJP leaders say she is fine
ಸುಮಿತ್ರಾ ಮಹಾಜನ್​​​ ಸಾವಿನ ಸುಳ್ಳು ಸುದ್ದಿ ಟ್ವೀಟ್​ ಮಾಡಿ ಡಿಲೀಟ್​ ಮಾಡಿದ ಶಶಿ ತರೂರ್​

ನವದೆಹಲಿ: ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ನಿಧನರಾಗಿದ್ದಾರೆಂದು ಟ್ವೀಟ್​ ಮಾಡಿದ್ದ ಕಾಂಗ್ರೆಸ್​ ನಾಯಕ ಶಶಿ ತರೂರ್, ಅದು ಸುಳ್ಳು ಸುದ್ದಿ ಎಂದು ತಿಳಿಯುತ್ತಿದ್ದಂತೆಯೇ ಡಿಲಿಟ್​ ಮಾಡಿದ್ದಾರೆ.

ಶಶಿ ತರೂರ್ ಟ್ವೀಟ್​ ಮಾಡುತ್ತಿದ್ದಂತೆಯೇ ಬಿಜೆಪಿ ನಾಯಕ ಕೈಲಾಶ್​ ವಿಜಯವರ್ಗಿಯಾ ಸೇರಿದಂತೆ ಅನೇಕರು ಈ ವಿಚಾರ ಸತ್ಯವಲ್ಲ. ಮಹಾಜನ್ ಅವರು ಆರೋಗ್ಯವಾಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು. ಇದರಿಂದ ಎಚೆತ್ತುಕೊಂಡ ತರೂರ್​ ತಕ್ಷಣವೇ ಟ್ವೀಟ್​ ಅಳಿಸಿ ಹಾಕಿದ್ದರು.

Tharoor deletes tweet on Sumitra Mahajan after BJP leaders say she is fine
ಶಶಿ ತರೂರ್ ಟ್ವೀಟ್​

"ಈ ಸುದ್ದಿ ವಿಶ್ವಾಸಾರ್ಹ ಮೂಲದಿಂದ ಬಂದಿದ್ದೆಂದು ನಾನು ನಂಬಿ ಟ್ವೀಟ್​ ಮಾಡಿದ್ದೆ. ಇದೀಗ ಟ್ವೀಟ್​ ಅಳಿಸಿ ಹಾಕಲು ಸಂತಸವೆನಿಸುತ್ತಿದೆ. ಯಾರೋ ಇಂತಹ ಸುದ್ದಿಗಳನ್ನು ಸೃಷ್ಟಿ ಮಾಡುತ್ತಾರೆಂದರೆ ಆಶ್ಚರ್ಯವೆನಿಸುತ್ತದೆ" ಎಂದು ಶಶಿ ತರೂರ್ ಟ್ವಿಟರ್​ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಕೈಲಾಶ್​ ವಿಜಯವರ್ಗಿಯಾ ಅವರಿಗೂ ಧನ್ಯವಾದ ತಿಳಿಸಿ, ಸುಮಿತ್ರಾ ಮಹಾಜನ್ ಅವರು ಆರೋಗ್ಯದಿಂದ ದೀರ್ಘಕಾಲ ಬದುಕಲಿ ಎಂದು ಹೇಳಿದ್ದಾರೆ. ಅಲ್ಲದೇ ಮಹಾಜನ್ ಅವರ ಪುತ್ರನಿಗೆ ದೂರವಾಣಿ ಕರೆ ಮಾಡಿ ಕ್ಷಮೆಯಾಚಿಸಿರುವುದಾಗಿ ತಿಳಿಸಿದ್ದಾರೆ.

Spoke to Sumitra Mahajan ji's son to convey my sincere apologies at last night's misinformation. He was most gracious & understanding. Delighted to hear she is very much better. Expressed my best wishes to her & her family.

— Shashi Tharoor (@ShashiTharoor) April 23, 2021 " class="align-text-top noRightClick twitterSection" data=" ">

ಈ ಬಳಿಕ ಸುಮಿತ್ರಾ ಮಹಾಜನ್ ಅವರ ಪುತ್ರ ವಿಡಿಯೋ ಮಾಡಿ, ನಮ್ಮ ತಾಯಿ ಆರೋಗ್ಯವಾಗಿದ್ದು, ಅವರ ಬಗ್ಗೆ ಹರಡಿರುವ ಸುಳ್ಳು ಸುದ್ದಿಗಳಿಗೆ ಉತ್ತರಿಸದಂತೆ ಜನರನ್ನು ಒತ್ತಾಯಿಸಿದ್ದಾರೆ.

ನವದೆಹಲಿ: ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ನಿಧನರಾಗಿದ್ದಾರೆಂದು ಟ್ವೀಟ್​ ಮಾಡಿದ್ದ ಕಾಂಗ್ರೆಸ್​ ನಾಯಕ ಶಶಿ ತರೂರ್, ಅದು ಸುಳ್ಳು ಸುದ್ದಿ ಎಂದು ತಿಳಿಯುತ್ತಿದ್ದಂತೆಯೇ ಡಿಲಿಟ್​ ಮಾಡಿದ್ದಾರೆ.

ಶಶಿ ತರೂರ್ ಟ್ವೀಟ್​ ಮಾಡುತ್ತಿದ್ದಂತೆಯೇ ಬಿಜೆಪಿ ನಾಯಕ ಕೈಲಾಶ್​ ವಿಜಯವರ್ಗಿಯಾ ಸೇರಿದಂತೆ ಅನೇಕರು ಈ ವಿಚಾರ ಸತ್ಯವಲ್ಲ. ಮಹಾಜನ್ ಅವರು ಆರೋಗ್ಯವಾಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು. ಇದರಿಂದ ಎಚೆತ್ತುಕೊಂಡ ತರೂರ್​ ತಕ್ಷಣವೇ ಟ್ವೀಟ್​ ಅಳಿಸಿ ಹಾಕಿದ್ದರು.

Tharoor deletes tweet on Sumitra Mahajan after BJP leaders say she is fine
ಶಶಿ ತರೂರ್ ಟ್ವೀಟ್​

"ಈ ಸುದ್ದಿ ವಿಶ್ವಾಸಾರ್ಹ ಮೂಲದಿಂದ ಬಂದಿದ್ದೆಂದು ನಾನು ನಂಬಿ ಟ್ವೀಟ್​ ಮಾಡಿದ್ದೆ. ಇದೀಗ ಟ್ವೀಟ್​ ಅಳಿಸಿ ಹಾಕಲು ಸಂತಸವೆನಿಸುತ್ತಿದೆ. ಯಾರೋ ಇಂತಹ ಸುದ್ದಿಗಳನ್ನು ಸೃಷ್ಟಿ ಮಾಡುತ್ತಾರೆಂದರೆ ಆಶ್ಚರ್ಯವೆನಿಸುತ್ತದೆ" ಎಂದು ಶಶಿ ತರೂರ್ ಟ್ವಿಟರ್​ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಕೈಲಾಶ್​ ವಿಜಯವರ್ಗಿಯಾ ಅವರಿಗೂ ಧನ್ಯವಾದ ತಿಳಿಸಿ, ಸುಮಿತ್ರಾ ಮಹಾಜನ್ ಅವರು ಆರೋಗ್ಯದಿಂದ ದೀರ್ಘಕಾಲ ಬದುಕಲಿ ಎಂದು ಹೇಳಿದ್ದಾರೆ. ಅಲ್ಲದೇ ಮಹಾಜನ್ ಅವರ ಪುತ್ರನಿಗೆ ದೂರವಾಣಿ ಕರೆ ಮಾಡಿ ಕ್ಷಮೆಯಾಚಿಸಿರುವುದಾಗಿ ತಿಳಿಸಿದ್ದಾರೆ.

  • Spoke to Sumitra Mahajan ji's son to convey my sincere apologies at last night's misinformation. He was most gracious & understanding. Delighted to hear she is very much better. Expressed my best wishes to her & her family.

    — Shashi Tharoor (@ShashiTharoor) April 23, 2021 " class="align-text-top noRightClick twitterSection" data=" ">

ಈ ಬಳಿಕ ಸುಮಿತ್ರಾ ಮಹಾಜನ್ ಅವರ ಪುತ್ರ ವಿಡಿಯೋ ಮಾಡಿ, ನಮ್ಮ ತಾಯಿ ಆರೋಗ್ಯವಾಗಿದ್ದು, ಅವರ ಬಗ್ಗೆ ಹರಡಿರುವ ಸುಳ್ಳು ಸುದ್ದಿಗಳಿಗೆ ಉತ್ತರಿಸದಂತೆ ಜನರನ್ನು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.