ETV Bharat / bharat

'ಒನ್ ಟೈಂ ಪಾಸ್​ವರ್ಡ್​' ಹಂಚಿದ್ರೇ.. ನಿಮ್ಮ ಖಾತೆಗೆ ಕನ್ನ ಗ್ಯಾರಂಟಿ

ಸೈಬರ್ ಅಪರಾಧಿಗಳಿಗೆ ಆನ್‌ಲೈನ್‌ನಲ್ಲಿ ಮೋಸ ಮಾಡಲು ಒಟಿಪಿ ದೊಡ್ಡ ಅಸ್ತ್ರ. ಜನರು ಯಾವುದೇ ಸಂದರ್ಭದಲ್ಲಿ ಒಟಿಪಿಯನ್ನು ಹಂಚಿಕೊಳ್ಳದಿದ್ರೆ, ಅವರು ಆನ್‌ಲೈನ್ ವಂಚನೆಗೆ ಬಲಿಯಾಗುವುದನ್ನು ತಪ್ಪಿಸಬಹುದು..

author img

By

Published : Jan 2, 2021, 11:54 AM IST

ಒಟಿಪಿ
OTP

ಚಂಡೀಗಢ್ : ಹರಿಯಾಣದ ಗೋಹಾನಾದಲ್ಲಿ ಗ್ರಾಮಸ್ಥನೊಬ್ಬನ ಖಾತೆಯಿಂದ ಆನ್‌ಲೈನ್‌ನಲ್ಲಿ ವಂಚನೆ ಮಾಡಿ ಸುಮಾರು 1.45 ಲಕ್ಷ ರೂಪಾಯಿಗೆ ಕನ್ನ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ. ಈತ ತನ್ನ ಒಟಿಪಿಯನ್ನು ಆರೋಪಿಗಳೊಂದಿಗೆ ಹಂಚಿಕೊಂಡಿರುವುದೇ ಹಣ ಕಳೆದುಕೊಳ್ಳಲು ಪ್ರಮುಖ ಕಾರಣ.

ಇಂತಹ ಮೋಸ ಹೊಗುವ ಪ್ರಕರಣವೇನು ಮೊದಲಲ್ಲ. ಈ ಹಿಂದೆ ಸಹಾ ಒಟಿಪಿ(ಒನ್​ ಟೈಂ ಪಾಸ್​ವರ್ಡ್​) ಹಂಚಿಕೊಂಡ ನಂತರದಲ್ಲಿ ಜನರ ಖಾತೆಗಳಿಂದ ಹಣ ಮಾಯವಾದ ಅನೇಕ ಪ್ರಕರಣ ಮುನ್ನೆಲೆಗೆ ಬಂದಿವೆ.

ಒಟಿಪಿ ಶೇರ್​ ವಂಚನೆಗೆ ಹೇಗೆ ಕಾರಣವಾಗಬಹುದು?: ಈ ನಿಟ್ಟಿನಲ್ಲಿ ಪ್ರಸಿದ್ಧ ಸೈಬರ್ ತಜ್ಞ ರಾಜೇಶ್ ರಾಣಾ ಅವರು ಈಟಿವಿ ಭಾರತ್​ನೊಂದಿಗೆ ಮಾತನಾಡಿ, ವಂಚಕರ ಮೊದಲ ಗುರಿ ವ್ಯಕ್ತಿಯ ಒಟಿಪಿ ಪಡೆಯುವುದು. ಯಾಕೆಂದರೆ, ಒಟಿಪಿ ಪಡೆದ ನಂತರ ಅವರು ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಎಲ್ಲಾ ಹಣ ಹಿಂಪಡೆಯಬಹುದು.

ದುರಾಸೆಗೊಳಗಾಗಿ ಒಟಿಪಿಯನ್ನು ಹಂಚಿಕೊಳ್ಳಬೇಡಿ : ಇದಕ್ಕಾಗಿ ಸೈಬರ್ ಅಪರಾಧಿಗಳು ವಿವಿಧ ರೀತಿಯ ಆಮಿಷಗಳನ್ನು ಒಡ್ಡುತ್ತಾರೆ. ಹಾಗೆ ಜನರಿಗೆ ತಮ್ಮ ಖಾತೆಯಲ್ಲಿ ದೊಡ್ಡ ಮೊತ್ತವನ್ನು ಜಮಾ ಮಾಡಲು ಕೇಳಲಾಗುತ್ತದೆ. ಆ ಬಳಿಕ ತಮ್ಮ ಕ್ರೆಡಿಟ್ ಕಾರ್ಡ್ ಅಥವಾ ಅವರ ಡೆಬಿಟ್ ಕಾರ್ಡ್ ನವೀಕರಿಸುವ ಬಗ್ಗೆ ಮಾತನಾಡುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ತಮ್ಮ ಖಾತೆ ಮತ್ತು ಡೆಬಿಟ್ ಕಾರ್ಡ್‌ನ ನಿರ್ಬಂಧಿಸಲಾಗಿದೆ ಎಂದು ಹೇಳುವ ಮೂಲಕ ಜನರನ್ನು ವಂಚಿಸಿ ತಮ್ಮ ಒಟಿಪಿ ಪಡೆಯುತ್ತಾರೆ.

ಒಟಿಪಿ ಶೇರ್​ ಏನನ್ನೂ ಮಾಡಲು ಸಾಧ್ಯವಾಗಲ್ಲ : ಗೋಹಾನಾ ಪ್ರಕರಣದಲ್ಲಿ ಆರೋಪಿ ತನ್ನ ಖಾತೆಗೆ ಹಣ ಹಾಕುವಂತೆ ಕೇಳಿಕೊಂಡಿದ್ದಾನೆ. ವಂಚನೆಗೊಳಗಾದಾತ ತನ್ನ ಒಟಿಪಿಯನ್ನು ಆರೋಪಿಗಳೊಂದಿಗೆ ಹಂಚಿಕೊಂಡಿದ್ದಾನೆ. ತಕ್ಷಣವೇ ಆತನ ಖಾತೆಯಿಂದ ಹಣ ಮಾಯವಾಗಿದೆ.

ಒಟಿಪಿ ವಂಚನೆ ಕುರಿತಾಗಿ ಮಾಹಿತಿ ನೀಡಿದ ಸೈಬರ್ ತಜ್ಞ ರಾಜೇಶ್ ರಾಣಾ

ಯಾಕೆಂದರೆ, ಒಟಿಪಿ ಹಂಚಿಕೊಂಡ ಬಳಿಕ ಆತ ಅವನ ಪೇಟಿಎಂ ಖಾತೆಯನ್ನು ವಂಚಕನ ಖಾತೆಗೆ ಲಿಂಕ್ ಮಾಡುತ್ತಾನೆ. ಈ ವಿಧಾನದ ಬಳಿಕ ಹಣ ವರ್ಗಾಯಿಸುವುದು ತುಂಬಾ ಸುಲಭ. ಅಂತಹ ಪರಿಸ್ಥಿತಿಯಲ್ಲಿ, ವಂಚನೆಗೊಳಗಾದವರು ಪಾಸ್​ವರ್ಡ್​ ಬದಲಾಯಿಸುವುದರಿಂದ ವಂಚಕರಿಗೆ ಏನನ್ನೂ ಮಾಡಲು ಸಾಧ್ಯವಿಲ್ಲ.

ಆದ್ರೂ ಜನರು ತಮ್ಮ ಒಟಿಪಿ ಪಾಸ್‌ವರ್ಡ್‌ನ ಯಾರೊಂದಿಗೂ ಹಂಚಿಕೊಳ್ಳಬಾರದು ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು ಎಂದು ಸೈಬರ್ ತಜ್ಞರು ಹೇಳಿದ್ದಾರೆ. ಒಟಿಪಿ ಹಂಚಿಕೊಳ್ಳುವುದು ಅಂದರೆ ಮೋಸಕ್ಕೆ ಬಲಿಯಾಗುವುದು. ಯಾರಾದ್ರೂ ನಿಮಗೆ ಯಾವುದೇ ಹಣ ಬರುವಂತಹ ಆಸೆ ಆಮಿಷ ನೀಡಿದ್ರೂ, ನಿಮ್ಮ ಒಂದು ಬಾರಿಯ ಪಾಸ್‌ವರ್ಡ್‌ನ ನೀವು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದರು.

ಇದನ್ನೂ ಓದಿ: ಒಳ ಉಡುಪಿನಲ್ಲಿ ಪೇಸ್ಟ್​ ರೂಪದ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿ ಅಂದರ್​

ಸೈಬರ್ ಅಪರಾಧಿಗಳಿಗೆ ಆನ್‌ಲೈನ್‌ನಲ್ಲಿ ಮೋಸ ಮಾಡಲು ಒಟಿಪಿ ದೊಡ್ಡ ಅಸ್ತ್ರವಾಗಿದೆ. ಜನರು ಯಾವುದೇ ಸಂದರ್ಭದಲ್ಲಿ ಒಟಿಪಿಯನ್ನು ಹಂಚಿಕೊಳ್ಳದಿದ್ರೆ, ಅವರು ಆನ್‌ಲೈನ್ ವಂಚನೆಗೆ ಬಲಿಯಾಗುವುದನ್ನು ತಪ್ಪಿಸಬಹುದು.

ಈವರೆಗೆ ಇಂತಹ ನೂರಾರು ಪ್ರಕರಣ ವರದಿಯಾಗಿವೆ. ಇದರ ಹೊರತಾಗಿಯೂ, ಜನರು ಸೈಬರ್ ಅಪರಾಧಿಗಳ ಮರುಳು ಮಾತಿಗೆ ತಮ್ಮ ಒಟಿಪಿ ಹಂಚಿಕೊಳ್ಳುತ್ತಾರೆ. ಅದರ ಪರಿಣಾಮಗಳನ್ನು ಬಳಿಕ ಅವರು ಎದುರಿಸಬೇಕಾಗುತ್ತದೆ. ಹಾಗಾಗಿ, ನಿಮ್ಮ ಒಟಿಪಿಗೆ ನೀವೇ ಜವಾಬ್ದಾರರು. ಜಾಗೃತವಾಗಿರಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.