ETV Bharat / bharat

ಸಿಎಂ ಮೋಹನ್ ಯಾದವ್ ಬೆಂಗಾವಲು ವಾಹನದಲ್ಲಿ ಭದ್ರತಾ ಲೋಪ: ಭದ್ರತಾ ತಂಡದಲ್ಲಿ ಖಾಕಿ ಸಮವಸ್ತ್ರ ಧರಿಸಿದ ಪಾನಮತ್ತ ವ್ಯಕ್ತಿ ಯಾರು?

ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಮಧ್ಯಪ್ರದೇಶದ ಶಹದೋಲ್ ತಲುಪುವ ಮುನ್ನವೇ ಅವರ ಭದ್ರತೆಯಲ್ಲಿ ಭಾರಿ ಲೋಪವಾಗಿದೆ. ಭದ್ರತಾ ಕಾರ್ಯದಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ ಪಾನಮತ್ತ ವ್ಯಕ್ತಿ ನಕಲಿ ಪೊಲೀಸ್​ ಸಿಬ್ಬಂದಿ ಎಂಬುದು ತಿಳಿದು ಬಂದಿದೆ.

author img

By ETV Bharat Karnataka Team

Published : Jan 13, 2024, 10:11 PM IST

Shahdol Security Lapse Mohan Yadav  Fake police in Shahdol CM meeting  ಭದ್ರತಾ ಲೋಪ  ಸಿಎಂ ಮೋಹನ್ ಯಾದವ್  ಖಾಕಿ ಸಮವಸ್ತ್ರ ಧರಿಸಿ ಪಾನಮತ್ತ ವ್ಯಕ್ತಿ
ಸಿಎಂ ಮೋಹನ್ ಯಾದವ್ ಬೆಂಗಾವಲು ವಾಹನದಲ್ಲಿ ಭದ್ರತಾ ಲೋಪ: ಭದ್ರತಾ ತಂಡದಲ್ಲಿ ಖಾಕಿ ಸಮವಸ್ತ್ರ ಧರಿಸಿ ಪಾನಮತ್ತ ವ್ಯಕ್ತಿ ಯಾರು?

ಶಹದೋಲ್ (ಮಧ್ಯಪ್ರದೇಶ): ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಶನಿವಾರ ಶಹದೋಲ್ ಜಿಲ್ಲೆಯ ಪ್ರವಾಸದಲ್ಲಿದ್ದರು. ಭದ್ರತೆಯಲ್ಲಿ ಯಾವುದೇ ಲೋಪವಾಗದಂತೆ ಅವರ ಭೇಟಿಗೆ ಸಂಬಂಧಿಸಿದಂತೆ ಸಾಕಷ್ಟು ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಮೂಲೆ ಮೂಲೆಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಆದರೆ, ಮುಖ್ಯಮಂತ್ರಿ ಆಗಮನದ ಮುನ್ನವೇ ಗಂಭೀರ ಭದ್ರತಾ ಲೋಪವಾಗಿದೆ. ಸಿಎಂ ಮೋಹನ್ ಯಾದವ್ ಸಭೆ ನಡೆಸಲಿದ್ದ ಪಾಲಿಟೆಕ್ನಿಕ್ ಮೈದಾನದಲ್ಲಿ ಭದ್ರತಾ ಸಿಬ್ಬಂದಿ ನಡುವೆಯೇ ನಕಲಿ ಕಾನ್ಸ್​​ಟೇಬಲ್​ ನುಸುಳಿ ಬಂದಿದ್ದಾನೆ. ಆ ನಕಲಿ ಕಾನ್ಸ್​ಟೇಬಲ್​ ಕಾರ್ಯಕ್ರಮದಲ್ಲಿ ಎಲ್ಲೆಡೆ ಸುತ್ತಾಡಿದ್ದಾನೆ. ಅಷ್ಟೇ ಅಲ್ಲ, ಸಿಎಂ ಇರುವ ಜಾಗಕ್ಕೂ ತಲುಪಿದ್ದನು.

ಸಮವಸ್ತ್ರದಲ್ಲಿರುವ ಪಾನಮತ್ತ ಯಾರು?: ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಇಂದು ಶಹದೋಲ್ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಈ ಘಟನೆ ಬೆಳಕಿಗೆ ಬಂದ ನಂತರ ಪೊಲೀಸ್ ಇಲಾಖೆ ತೀವ್ರ ಆತಂಕಕ್ಕೆ ಒಳಗಾಗಿತ್ತು. ಪೊಲೀಸ್ ಸಮವಸ್ತ್ರದಲ್ಲಿ ಪಾನಮತ್ತ ಅಪರಿಚಿತ ವ್ಯಕ್ತಿಯೊಬ್ಬ ಭದ್ರತಾ ಸಿಬ್ಬಂದಿಯ ನಡುವೆ ಹೇಗೆ ಪ್ರವೇಶಿಸಿದ ಎಂಬುದೇ ಈಗ ಎಲ್ಲರಲ್ಲಿ ಮೂಡಿರುವ ಪ್ರಶ್ನೆಯಾಗಿದೆ.

ಈ ಪಾನಮತ್ತ ವ್ಯಕ್ತಿ ಪೊಲೀಸ್ ಸಮವಸ್ತ್ರ ಧರಿಸಿ ಸಿಎಂ ಕಾರ್ಯಕ್ರಮದ ಸ್ಥಳಕ್ಕೆ ತೆರಳಬೇಕಿದ್ದ ಜಾಗಕ್ಕೆ ತಲುಪಿದ್ದಲ್ಲದೇ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಮಕ್ಕಳ ನಡುವೆ ನಶೆಯಲ್ಲಿ ಗೇಟ್ ಪ್ರವೇಶಿಸಿದ್ದಾನೆ. ಮಾಧ್ಯಮದವರನ್ನು ನೋಡಿದ ತಕ್ಷಣ ಪೊಲೀಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿ ಏಕಾಏಕಿ ಓಡಿ ಹೋಗಲಾರಂಭಿಸಿದ್ದನು.

ನಕಲಿ ಪೊಲೀಸ್ ಏಕಾಏಕಿ ಓಡಿಹೋಗಲು ಪ್ರಾರಂಭಿಸಿದ್ದೇಕೆ?: ಮಾಧ್ಯಮದವರನ್ನು ನೋಡಿದ ತಕ್ಷಣ ಆ ವ್ಯಕ್ತಿ ಏಕಾಏಕಿ ಓಡಿ ಹೋಗಲಾರಂಭಿಸಿದ್ದನು. ಮಾಧ್ಯಮದವರು ಆತನನ್ನು ಯಾರು ಎಂದು ಕೇಳಿದಾಗ ಜನರು ವಿಡಿಯೋ ಮಾಡಲು ಪ್ರಾರಂಭಿಸಿದಾಗ ಆತ ಅಲ್ಲಿಂದ ಓಡಿ ಹೋಗಿದ್ದಾನೆ. ಈತ ಯಾರು ಎಂದು ಪೊಲೀಸರನ್ನು ಕೇಳಲಾಯಿತು. ಆದರೆ, ಅವರಲ್ಲಿ ಯಾರೂ ಕೂಡ ಸರಿಯಾಗಿ ಉತ್ತರಿಸಲಿಲ್ಲ. ಪೊಲೀಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿ ನಶೆಯಲ್ಲಿ ಇದ್ದನು. ಆತ ಮಧ್ಯಪ್ರದೇಶ ಪೊಲೀಸರ ರಿಬ್ಬನ್ ಕೂಡ ಧರಿಸಿದ್ದನು.

ಕೆಲವು ಪೊಲೀಸರು ಆತನನ್ನು ಕೋತ್ವಾರ್ ಎಂದು ಕರೆಯುತ್ತಿದ್ದರೆ, ಕೆಲವು ಪೊಲೀಸರು ಆತ ಯಾರೆಂದು ನಮಗೆ ತಿಳಿದಿಲ್ಲ ಎಂದು ತಿಳಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಗೇಟ್ ಉಸ್ತುವಾರಿ ಟಿ.ಐ. ರಘುವಂಶಿ, ‘ಆ ವ್ಯಕ್ತಿ ಯಾರು ಎಂಬ ಬಗ್ಗೆ ಮಾಹಿತಿ ಇಲ್ಲ. ನನ್ನ ತಂಡದಲ್ಲಿ ಒಂಬತ್ತು ಜನರಿದ್ದಾರೆ. ಆದರೆ, ಆ ಅಪರಿಚಿತ ವ್ಯಕ್ತಿ ನಮಗೆ ತಿಳಿದಿಲ್ಲ'' ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅವಧಿ ಮೀರಿ ಪಾರ್ಟಿ: ತನಿಖಾ ವರದಿ ಕೇಳಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.