ETV Bharat / bharat

'ಭಾರತದ ಮೇಲೆ ಹಮಾಸ್​ ಮಾದರಿ ದಾಳಿ': ಖಲಿಸ್ತಾನಿ ಉಗ್ರ ಗುರುಪತ್ವಂತ್​ ಪನ್ನು ಬೆದರಿಕೆ - ಹಮಾಸ್​ ಮಾದರಿ ದಾಳಿ

ಎನ್​ಐಎ ಹಿಟ್​ ಲಿಸ್ಟ್​ನಲ್ಲಿರುವ ಖಲಿಸ್ತಾನ್​ ಉಗ್ರ ಗುರುಪತ್ವಂತ್​​​ ಪನ್ನುನ್, ಇಸ್ರೇಲ್​ ಮೇಲೆ ಹಮಾಸ್​ ಮಾಡಿರುವ ದಾಳಿಯಂತೆ ಭಾರತದ ಮೇಲೂ ದಾಳಿಯ ಬೆದರಿಕೆ ಹಾಕಿದ್ದಾನೆ. ಈ ಹಿಂದೆ ಕ್ರಿಕೆಟ್‌ ವಿಶ್ವಕಪ್​ಗೆ ಈತ ಬೆದರಿಕೆ ಹಾಕಿದ್ದ.

ಗುರುಪತ್ವಂತ್​ ಪನ್ನುನ್ ಬೆದರಿಕೆ
ಗುರುಪತ್ವಂತ್​ ಪನ್ನುನ್ ಬೆದರಿಕೆ
author img

By ETV Bharat Karnataka Team

Published : Oct 10, 2023, 9:55 PM IST

ನವದೆಹಲಿ: ವಿಶ್ವಕಪ್​ಗೆ ಬೆದರಿಕೆ ಹಾಕಿ ಭೀತಿ ಮೂಡಿಸಿದ್ದ ಸಿಖ್ಸ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಭಯೋತ್ಪಾದಕ ಗುಂಪಿನ ಮುಖ್ಯಸ್ಥ ಗುರುಪತ್ವಂತ್​​​ ಪನ್ನುನ್ ಇದೀಗ, ಇಸ್ರೇಲ್​ ಮೇಲೆ ಹಮಾಸ್​ ಮಾಡಿದ ದಾಳಿಯಂತೆ ಭಾರತದ ಮೇಲೆ ದಾಳಿ ಮಾಡಲಾಗುವುದು ಎಂದು ಮತ್ತೊಂದು ಬೆದರಿಕೆ ಹಾಕಿದ್ದಾನೆ.

ಕೆನಡಾದಲ್ಲಿದ್ದುಕೊಂಡು ಸಿಖ್ಸ್ ಫಾರ್ ಜಸ್ಟಿಸ್ ಭಯೋತ್ಪಾದಕ ಸಂಘಟನೆಯ ಪರವಾಗಿ ಕೆಲಸ ಮಾಡುತ್ತಿರುವ, ಖಲಿಸ್ತಾನಿ ನಾಯಕನಾಗಿ ಗುರುತಿಸಿಕೊಂಡಿರುವ ಪನ್ನುನ್​ ಮಂಗಳವಾರ ವಿಡಿಯೋ ಹರಿಬಿಟ್ಟಿದ್ದಾನೆ. ಅದರಲ್ಲಿ ಭಾರತದ ಮೇಲೆ ಹಮಾಸ್ ಮಾದರಿಯ ದಾಳಿಯ ಬೆದರಿಕೆ ಒಡ್ಡಿದ್ದಾನೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಇತ್ತೀಚಿನ ವಿಡಿಯೋದಲ್ಲಿ ದೇಶದ ಜನರಿಗೆ 'ಬುಲೆಟ್​ ಅಥವಾ ಬ್ಯಾಲೆಟ್​' ಆಯ್ಕೆ ನೀಡಿದ್ದಾನೆ.

ಪ್ರಧಾನಿ ಮೋದಿ ಅವರು ಪ್ಯಾಲೆಸ್ಟೀನ್-ಇಸ್ರೇಲ್ ಸಂಘರ್ಷದಿಂದ ಪಾಠ ಕಲಿಯಬೇಕು. ಹಿಂಸೆ, ಹಿಂಸೆಯನ್ನೇ ಹುಟ್ಟುಹಾಕುತ್ತದೆ. ಭಾರತ ಪಂಜಾಬ್ ಅನ್ನು ಆಕ್ರಮಿಸಿಕೊಳ್ಳಲು ನೋಡಿದರೆ, ಹಿಂಸೆಯ ಮೂಲಕವೇ ಪ್ರತಿಕ್ರಿಯಿಸಲಾಗುವುದು. ಇದಕ್ಕೆ ಮೋದಿ ಮತ್ತು ಭಾರತವೇ ಹೊಣೆ. ಸಿಖ್​ ಸಂಘಟನೆಯು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿದೆ. ಪಂಜಾಬ್‌ನ ವಿಮೋಚನೆಯ ಕಾಲ ಬಂದಿದೆ. ದೇಶದ ಜನರೇ ನಿಮ್ಮ ಮುಂದೆ ಎರಡು ಆಯ್ಕೆಗಳಿವೆ. ಒಂದು ಬ್ಯಾಲೆಟ್ ಮತ್ತೊಂದು ಬುಲೆಟ್. ನೀವೇ ಆಯ್ಕೆ ಮಾಡಿಕೊಳ್ಳಿ ಎಂದು ವಿಡಿಯೋದಲ್ಲಿ ಬೆದರಿಕೆ ಒಡ್ಡುವಂತೆ ಬಡಬಡಿಸಿದ್ದಾನೆ.

ಹಮಾಸ್​ ಮಾದರಿ ದಾಳಿ : ಇಸ್ರೇಲ್​ ಮೇಲೆ ಹಮಾಸ್​ ಉಗ್ರರು ವಾಯು, ಜಲ, ನೆಲದ ಮೂಲಕ ದಾಳಿ ನಡೆಸಿದ್ದನ್ನು ಉಲ್ಲೇಖಿಸಿರುವ ಉಗ್ರರ ನಾಯಕ ಪನ್ನುನ್​, ಖಲಿಸ್ತಾನಕ್ಕಾಗಿ ಭಾರತದ ಮೇಲೆ ಎಸ್​​ಎಫ್​ಜೆ ಹಮಾಸ್​ ರೀತಿ ದಾಳಿ ಮಾಡಲಿದೆ. ಪಂಜಾಬ್​ ಅನ್ನು ಮುಕ್ತಮಾಡುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದ್ದಾನೆ.

ವಿಶ್ವಕಪ್​ಗೆ ಬೆದರಿಕೆ ಒಡ್ಡಿದ್ದ ಪನ್ನುನ್​: ಸಿಖ್ ಫಾರ್ ಜಸ್ಟಿಸ್ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್​, ಈ ಹಿಂದೆ ಏಕದಿನ ಕ್ರಿಕೆಟ್​ ವಿಶ್ವಕಪ್​ಗೆ ಬೆದರಿಕೆ ಹಾಕಿದ್ದ. ಆಡಿಯೋ ಸಂದೇಶವನ್ನು ಹರಿಬಿಟ್ಟಿದ್ದ ಆತ, ನಿಜ್ಜರ್ ಹತ್ಯೆಗೆ ನೀವು ಬುಲೆಟ್​ ಬಳಸಿದ್ದೀರಿ, ನಿಮ್ಮ ಹಿಂಸೆಯ ವಿರುದ್ಧ ನಾವು ಪ್ರತೀಕಾರ ತೀರಿಸಿಕೊಳ್ಳಲಿದ್ದೇವೆ. ಭಾರತದಲ್ಲಿ ನಡೆಯೋದು ವಿಶ್ವ ಕ್ರಿಕೆಟ್ ಕಪ್ ಅಲ್ಲ. ಅದು ವಿಶ್ವ ಭಯೋತ್ಪಾದಕ ಕಪ್‌ ಆಗಲಿದೆ ಎಂದು ಬೆದರಿಕೆ ಸಂದೇಶ ರವಾನಿಸಲಾಗಿತ್ತು.

ಭಯೋತ್ಪಾದನಾ ನಿಗ್ರಹ ದಳಕ್ಕೆ (ಎನ್​ಐಎ) ಬೇಕಾಗಿರುವ ಪನ್ನುನ್​ 2019 ರಿಂದ ತಲೆಮರೆಸಿಕೊಂಡಿದ್ದಾನೆ. ಭಯೋತ್ಪಾದಕ ಕೃತ್ಯ ಮತ್ತು ಚಟುವಟಿಕೆಗಳಿಗೆ ಉತ್ತೇಜನ ನೀಡುವ ಆರೋಪ ಈತನ ಮೇಲಿದೆ.

ಇದನ್ನೂ ಓದಿ: 'ವಿಶ್ವಕಪ್​ ಅಲ್ಲ, ಭಯೋತ್ಪಾದಕ ಕಪ್​ ನಡೆಯುತ್ತೆ': ಕ್ರಿಕೆಟ್​​ ಪಂದ್ಯಾವಳಿಗೆ ಖಲಿಸ್ತಾನಿ ಉಗ್ರರ ಬೆದರಿಕೆ, ಬಿಗಿಭದ್ರತೆ ಹೆಚ್ಚಳ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.