ಮುಂಬೈ ( ಮಹಾರಾಷ್ಟ್ರ ) : ಮುಂಬೈ ಪೊಲೀಸರು ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ (Taarak Mehta Ka Ooltah Chashmah ) ಕಾರ್ಯಕ್ರಮದ ನಿರ್ಮಾಪಕ ಅಸಿತ್ ಮೋದಿ, ಈ ತಂಡದ ಸೊಹೈಲ್ ರಮಣಿ ಮತ್ತು ಕಾರ್ಯಕಾರಿ ನಿರ್ಮಾಪಕ ಜತಿನ್ ಬಜಾಜ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾರಕ್ ಮೆಹ್ತಾ ಕಾ ಊಲ್ಟಾ ಚಶ್ಮಾ ತಂಡದಲ್ಲೇ ಕೆಲಸ ಮಾಡುವ ಒಬ್ಬರು ಈ ಸಂಬಂಧ ದೂರು ಸಲ್ಲಿಸಿದ್ದು, ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 354 ಮತ್ತು 509 ರ ಅಡಿ ಸ್ಥಳೀಯ ಪೊವೈ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ದೈಹಿಕವಾಗಿ ಸಹಕರಿಸುವಂತೆ ಬೇಡಿಕೆ ಇಟ್ಟ ಆರೋಪ : ಕಳೆದ ತಿಂಗಳು, ಜನಪ್ರಿಯ ನಟಿಯು ಅಸಿತ್ ಮೋದಿ, ಸೊಹೈಲ್ ರಮಣಿ ಮತ್ತು ಜತಿನ್ ಬಜಾಜ್ ವಿರುದ್ಧ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳಕ್ಕಾಗಿದ್ದೇನೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊವೈ ಪೊಲೀಸರು ನಟಿಯ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದಾರೆ. ಅಸಿತ್ ಮೋದಿ ಈ ಹಿಂದೆ ಹಲವು ಬಾರಿ ದೈಹಿಕವಾಗಿ ಸಹಕರಿಸುವಂತೆ ಬೇಡಿಕೆ ಇಟ್ಟಿದ್ದರು ಎಂದು ನೊಂದ ನಟಿ ಆರೋಪಿಸಿದ್ದಾರೆ.
ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದೆ : ಆರಂಭದಲ್ಲಿ, ನನ್ನ ಕೆಲಸವನ್ನು ಕಳೆದುಕೊಳ್ಳುವ ಭಯದಿಂದ ನಾನು ಅವರ ಎಲ್ಲ ಬೇಡಿಕೆಗಳನ್ನು ನಿರ್ಲಕ್ಷಿಸಿದೆ. ಯಾವುದಕ್ಕೂ ಪ್ರತಿಕ್ರಿಯೆ ಕೊಡಲಿಲ್ಲ. ಆದರೆ ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ ಎಂದು ನಟಿ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ನಿರ್ಮಾಪಕರ ಜೊತೆ ಕೆಲಸ ಮಾಡುತ್ತಿರುವ ನಟಿ ಮಾಡಿರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಪೊವೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ಮೆಗಾ ಫ್ಯಾಮಿಲಿಯಲ್ಲಿ ಸಂಭ್ರಮ.. ತಂದೆ - ತಾಯಿ ಆದ ರಾಮಚರಣ್ - ಉಪಾಸನಾ ದಂಪತಿ
ನಿರ್ಮಾಪಕರ ಮೇಲೆ ನಟಿ ಸಾರ್ವಜನಿಕವಾಗಿ ಆರೋಪ ಮಾಡಿದ್ದಾರೆ. ಪೊವೈ ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 354 ಮತ್ತು 509 ರ ಅಡಿ ಎಫ್‌ಐಆರ್ ದಾಖಲಿಸಲಾಗಿದೆ. ಕಳೆದ 15 ವರ್ಷಗಳಿಂದ ಜನಪ್ರಿಯ ಟಿವಿ ಧಾರಾವಾಹಿಯೊಂದಿಗೆ ನಾನು ಸಂಬಂಧ ಹೊಂದಿದ್ದೇನೆ. 2021 ಮತ್ತು 2023ರ ನಡುವೆ ಲೈಂಗಿಕ ಕಿರುಕುಳದ ಘಟನೆಗಳು ನಡೆದಿವೆ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಫೋಟೋ: ತೆಲುಗು ಧಾರಾವಾಹಿಗಳಲ್ಲಿ ಕನ್ನಡದ ನಟಿಮಣಿಯರ ಮಿಂಚಿಂಗ್!
ಪೊಲೀಸ್ ತನಿಖೆ ಚುರುಕು : ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟಿ ಈ ಬಗ್ಗೆ ಆರೋಪಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಟಿಯ ತುಟಿಗಳ ಬಗ್ಗೆ ಅನುಚಿತವಾದ ಕಾಮೆಂಟ್‌ಗಳನ್ನು ಮಾಡುವ ನಿರ್ಮಾಪಕ ಅವರನ್ನು ತಬ್ಬಿಕೊಳ್ಳಲು ಬಯಸುತ್ತಾರೆ ಎಂಬ ಆರೋಪವೂ ಇದೆ. ಈ ಆರೋಪಗಳ ಬಗ್ಗೆ ಪ್ರಸ್ತುತ ಪೊಲೀಸರು ತನಿಖೆ ಕೈಗೊಂಡಿದ್ದಾರೆ.