ETV Bharat / bharat

ಮದುವೆಯಾಗುವುದಾಗಿ ನಂಬಿಸಿದ ಆರೋಪ.. ಕಾಂಗ್ರೆಸ್ ಶಾಸಕರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ

author img

By

Published : Oct 11, 2022, 9:06 PM IST

ಮಹಿಳೆಯೊಬ್ಬರಿಗೆ ಮದುವೆಯಾಗುವುದಾಗಿ ಹಲವು ಬಾರಿ ಲೈಂಗಿಕ ಶೋಷಣೆ ನಡೆಸಿರುವ ಆರೋಪದ ಮೇರೆಗೆ ಕೇರಳದ ಪೆರುಂಬವೂರು ಯುಡಿಎಫ್​ ಶಾಸಕ ಎಲ್ಡೋಸ್​ ಕುನ್ನಪಿಲ್ಲಿ ವಿರುದ್ದ ಜಾಮೀನು ರಹಿತ ಸೆಕ್ಷನ್​ಗಳ ಅಡಿ ಪ್ರಕರಣ ದಾಖಲಾಗಿದೆ.

ಯುಡಿಎಫ್​ ಶಾಸಕ ಎಲ್ಡೋಸ್​ ಕುನ್ನಪಿಲ್ಲಿ
ಯುಡಿಎಫ್​ ಶಾಸಕ ಎಲ್ಡೋಸ್​ ಕುನ್ನಪಿಲ್ಲಿ

ತಿರುವನಂತಪುರಂ(ಕೇರಳ): ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಿದ ಹಿನ್ನೆಲೆ ತಿರುವನಂತಪುರಂನ ಕೋವಲಂ ಪೊಲೀಸರು ಕಾಂಗ್ರೆಸ್ ಮುಖಂಡ ಮತ್ತು ಪೆರುಂಬವೂರು ಯುಡಿಎಫ್ ಶಾಸಕ ಎಲ್ದೋಸ್ ಕುನ್ನಪಿಲ್ಲಿ ವಿರುದ್ಧ ಜಾಮೀನು ರಹಿತ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ.

ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಮಹಿಳೆ, ಶಾಸಕ ತಮ್ಮನ್ನು ಮದುವೆಯಾಗುವುದಾಗಿ ಹಲವು ಬಾರಿ ಲೈಂಗಿಕ ಶೋಷಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮ ಮೇಲೆ ಹಲ್ಲೆ ಮಾಡಿದ ಶಾಸಕನ ವಿರುದ್ಧ ಮಹಿಳೆ ದೂರು ಕೂಡ ನೀಡಿದ್ದರು. ಶೀಘ್ರದಲ್ಲೇ ಶಾಸಕರನ್ನು ಬಂಧಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೋವಲಂ ಪೊಲೀಸರು ಐಪಿಸಿ ಸೆಕ್ಷನ್ 359 (ಅಪಹರಣ), 443 (ಅತಿಕ್ರಮಣ) ಮತ್ತು 354 (ಮಹಿಳೆಗೆ ಆಕೆಯ ನಮ್ರತೆಯನ್ನು ಆಕ್ರೋಶಗೊಳಿಸುವ ಉದ್ದೇಶದಿಂದ ಕ್ರಿಮಿನಲ್ ಫೋರ್ಸ್) ಅಡಿ ಪ್ರಕರಣ ದಾಖಲಿಸಿದ್ದಾರೆ.

ಮಹಿಳೆಯನ್ನು ಕೋವಲಂ ಠಾಣೆಗೆ ಕರೆಸಿ, ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಮಹಿಳೆ ಎರ್ನಾಕುಲಂನ ಪೆರುಂಬವೂರ್‌ನಿಂದ ನಾಪತ್ತೆಯಾದ ನಂತರ ಮಹಿಳೆಯ ಸ್ನೇಹಿತ ವಂಚಿಯೂರ್ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದರು. ನಂತರ ಪೊಲೀಸರು ಅವರನ್ನು ಕೋವಲಂನಲ್ಲಿ ಪತ್ತೆಹಚ್ಚಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ.

ಓದಿ: ನಿಲ್ಲದ ಕ್ರೌರ್ಯ.. ತಾಯಿ ಎದುರೇ ಅಪ್ರಾಪ್ತ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.