ಶ್ರೀನಗರ: ಉಗ್ರರು ವಿರುದ್ಧ ನಡೆದ ಮಹತ್ವದ ಕಾರ್ಯಾಚರಣೆ ವೇಳೆ ಸೇನಾಧಿಕಾರಿ,ನಾಲ್ವರು ಯೋಧರು ವೀರ ಮರಣವನ್ನಪ್ಪಿದ್ದು, ಜಮ್ಮು-ಕಾಶ್ಮೀರದ ಪೂಂಚ್ ವ್ಯಾಪ್ತಿಯ ರಜೌರಿಯಲ್ಲಿ ಈ ಘಟನೆ ನಡೆದಿದೆ. ಪೂಂಚ್ ಜಿಲ್ಲೆಯ ಸುರಂಕೋಟೆ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿತ್ತು.
-
Sep Saraj Singh and Sep Vaisakh H also lost their lives during an ongoing operation in Shahadra, Thanamandi, Rajouri (J&K): White Knight Corps, Indian Army pic.twitter.com/KinA2Qd8O1
— ANI (@ANI) October 11, 2021 " class="align-text-top noRightClick twitterSection" data="
">Sep Saraj Singh and Sep Vaisakh H also lost their lives during an ongoing operation in Shahadra, Thanamandi, Rajouri (J&K): White Knight Corps, Indian Army pic.twitter.com/KinA2Qd8O1
— ANI (@ANI) October 11, 2021Sep Saraj Singh and Sep Vaisakh H also lost their lives during an ongoing operation in Shahadra, Thanamandi, Rajouri (J&K): White Knight Corps, Indian Army pic.twitter.com/KinA2Qd8O1
— ANI (@ANI) October 11, 2021
ಹುತಾತ್ಮರಾದ ಯೋಧರನ್ನ ಸರಜ್ ಸಿಂಗ್, ವೈಶಾಖ್ ಹೆಚ್. ಜಸ್ವಿಂದರ್ ಸಿಂಗ್, ಮನ್ದೀಪ್ ಸಿಂಗ್, ಸಿಪಾಯಿ ಗಜ್ಜನ್ ಸಿಂಗ್ ಎಂದು ಗುರುತಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನೆ ಪ್ರಕಟಣೆ ಸಹ ಹೊರಡಿಸಿದ್ದು, ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆಂದು ಮಾಹಿತಿ ನೀಡಿದೆ. ಘಟನಾ ಸ್ಥಳಕ್ಕೆ ಹೆಚ್ಚಿನ ಸೇನೆ ರವಾನೆ ಮಾಡಲಾಗಿದ್ದು, ಪ್ರದೇಶ ಈಗಾಗಲೇ ಸುತ್ತುವರಿಯಲಾಗಿದೆ.
ಭಾರತದ ಗಡಿಯೊಳಗೆ ಉಗ್ರರು ನುಸುಳುತ್ತಿದ್ದಾರೆ ಎಂಬ ಮಾಹಿತಿ ಗುಪ್ತಚರ ಇಲಾಖೆಯಿಂದ ಲಭ್ಯವಾಗಿತ್ತು. ಇದರ ಆಧಾರದ ಮೇಲೆ ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಸೇನೆ ಮುಂದಾಗಿತ್ತು. ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹೊಂದಿದ್ದ ಉಗ್ರರು ಏಕಾಏಕಿಯಾಗಿ ದಾಳಿ ನಡೆಸಿರುವ ಕಾರಣ ಭಾರತೀಯ ಯೋಧರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಯೋಧರ ಪ್ರತಿದಾಳಿಗೆ ಕೆಲ ಉಗ್ರರು ಸಾವನ್ನಪ್ಪಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.