ಗೋಪಾಲ್ಗಂಜ್(ಬಿಹಾರ): ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಕನಸಿಗೆ ಕಳ್ಳರು ಕನ್ನ ಹಾಕ್ತಿದ್ದು, ಬಿಹಾರದ ಗೋಪಾಲ್ಗಂಜ್ನಲ್ಲಿರುವ ಅನೇಕ ಎಟಿಎಂಗಳಲ್ಲಿ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಹೀಗಾಗಿ, ಎಲ್ಲ ಎಟಿಎಂ ಬಂದ್ ಮಾಡಲಾಗಿದೆ. ಗೋಪಾಲ್ಗಂಜ್ನ ಗ್ರಾಮೀಣ ಪ್ರದೇಶಗಳಲ್ಲಿರುವ 17 ಎಟಿಎಂಗಳಿಗೆ ಕಳ್ಳರ ಕಾಟ ಹೆಚ್ಚಾಗಿರುವ ಕಾರಣ ಬೀಗ ಹಾಕಲಾಗಿದ್ದು, ಅವುಗಳನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಬ್ಯಾಂಕ್ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಗೋಪಾಲ್ಗಂಜ್ನ ವಿವಿಧ ಪ್ರದೇಶಗಳಲ್ಲಿ ಎಟಿಎಂ ಅಳವಡಿಕೆ ಮಾಡಲಾಗಿದೆ. ಆದರೆ, ಈ ಯಂತ್ರಗಳನ್ನ ಪದೇ ಪದೇ ಕಳ್ಳರು ಕಳ್ಳತನ ಮಾಡಿಕೊಂಡು ಹೋಗ್ತಿದ್ದಾರೆ. ಇದು ಪೊಲೀಸರಿಗೂ ತಲೆನೋವು ಆಗಿದೆ. ಹೀಗಾಗಿ, ಎಲ್ಲ ಎಟಿಎಂ ಬಂದ್ ಆಗಿದ್ದು, ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿರಿ: ಭಗತ್ ಸಿಂಗ್ ಭಯೋತ್ಪಾದಕ: ಪಂಜಾಬ್ ಸಂಸದನ ವಿವಾದಿತ ಹೇಳಿಕೆಗೆ ವ್ಯಾಪಕ ಟೀಕೆ
ಕಳೆದ ಮೂರ್ನಾಲ್ಕು ತಿಂಗಳಲ್ಲಿ ಎಲ್ಲ ಎಟಿಎಂಗಳಲ್ಲೂ ಕಳ್ಳತನವಾಗಿದ್ದು, ಎಟಿಎಂ ಯಂತ್ರ ಸಹ ಎತ್ತುಕೊಂಡು ಹೋಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಬೈಕುಂಠಪುರ ಪೊಲೀಸ್ ಠಾಣೆಯ ಹಾರ್ದಿಕಾದಲ್ಲಿನ ಎರಡು ಎಟಿಎಂಗಳಲ್ಲಿ ಕಳ್ಳತನವಾಗಿದ್ದು, 7 ಲಕ್ಷ ರೂಪಾಯಿ ಎಗರಿಸಿದ್ದಾರೆ. ಹೀಗಾಗಿ, ಬ್ಯಾಂಕ್ ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಕಬಿಲಾಸ್ಪುರದ ಎಸ್ಬಿಐ ಎಟಿಎಂ, ಬೈಕುಂತ್ಪುರದ ಎರಡು ಎಟಿಎಂ, ತಾವೆ ಬಸ್ ನಿಲ್ದಾಣದ ಬಳಿಯ ಎಟಿಎಂನಲ್ಲೂ ಕಳ್ಳತನವಾಗಿದೆ. ಹೀಗಾಗಿ, ಸದ್ಯ ಎಲ್ಲ ಬ್ಯಾಂಕ್ಗಳ ಎಟಿಎಂ ಕೇಂದ್ರ ಬಂದ್ ಮಾಡಲಾಗಿದ್ದು, ತಕ್ಷಣದಲ್ಲೇ ಬೇರೆ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗುವುದು ಎಂದು ತಿಳಿದು ಬಂದಿದೆ.