ETV Bharat / bharat

ಪ್ರವಾಸಿ ವೀಸಾ.. ನಿರ್ದಿಷ್ಟ ಧರ್ಮದ ಬೋಧನೆ: 7 ಜರ್ಮನ್ ಪ್ರಜೆಗಳಿಗೆ 500 ಯುಎಸ್ ಡಾಲರ್ ದಂಡ - ಕಾಜಿರಂಗದ ಖಾಸಗಿ ರೆಸಾರ್ಟ್‌

ಅಸ್ಸೋಂದಲ್ಲಿ ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಏಳು ಜನ ಜರ್ಮನ್ ಪ್ರಜೆಗಳಿಗೆ ತಲಾ 500 ಯುಎಸ್ ಡಾಲರ್ ದಂಡ ವಿಧಿಸಲಾಗಿದೆ.

seven-german-nationals-fined-and-sent-back-from-assam-for-preaching
ಪ್ರವಾಸಿ ವೀಸಾ.. ನಿರ್ದಿಷ್ಟ ಧರ್ಮದ ಬೋಧನೆ: 7 ಜರ್ಮನ್ ಪ್ರಜೆಗಳಿಗೆ 500 ಯುಎಸ್ ಡಾಲರ್ ದಂಡ
author img

By

Published : Oct 29, 2022, 8:59 PM IST

ಬೊಕಾಖಾಟ್ (ಅಸ್ಸೋಂ): ಪ್ರವಾಸಿ ವೀಸಾದೊಂದಿಗೆ ಅಸ್ಸೋಂದ ಗೋಲಾಘಾಟ್ ಜಿಲ್ಲೆಗೆ ಬಂದಿದ್ದ ಏಳು ಜನ ಜರ್ಮನ್ ಪ್ರಜೆಗಳು ನಿರ್ದಿಷ್ಟ ಧರ್ಮವನ್ನು ಬೋಧಿಸುತ್ತಿದ್ದ ಆರೋಪದ ಮೇಲೆ ಅವರನ್ನು ವಶಕ್ಕೆ ಪಡೆದ ಪೊಲೀಸರು, ತಲಾ 500 ಯುಎಸ್​ ಡಾಲರ್ ದಂಡ ವಿಧಿಸಿದ್ದಾರೆ.

ಕಾಜಿರಂಗದ ಖಾಸಗಿ ರೆಸಾರ್ಟ್‌ನಲ್ಲಿ ನೆಲೆಸಿದ್ದ ಏಳು ಜನ ಜರ್ಮನ್ ಪ್ರಜೆಗಳ ನಡೆಸುತ್ತಿದ್ದ ಕಾರ್ಯಗಳ ಬಗ್ಗೆ ಸ್ಥಳೀಯರು ದೂರು ನೀಡಿದ್ದರು. ಈ ದೂರಿನ ಮೇರೆಗೆ ಗೋಲಘಾಟ್ ಪೊಲೀಸರು ಶುಕ್ರವಾರ ರಾತ್ರಿ ಅವರೆಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಅವರ ಬಳಿ ಪ್ರವಾಸಿ ವೀಸಾಗಳನ್ನು ಮಾತ್ರ ಇದ್ದವು.

ದೇಶದಲ್ಲಿ ನಿರ್ದಿಷ್ಟ ಧರ್ಮವನ್ನು ಬೋಧಿಸಲು ಅವರಿಗೆ ವಿಶೇಷ ವೀಸಾಗಳ ಅಗತ್ಯವಿತ್ತು. ಆದರೆ, ಜರ್ಮನ್ ಪ್ರಜೆಗಳು ಕೇವಲ ಪ್ರವಾಸಿ ವೀಸಾಗಳನ್ನು ಹೊಂದಿದ್ದರು. ಹೀಗಾಗಿಯೇ ದೇಶದ ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ತಲಾ 500 ಯುಎಸ್ ಡಾಲರ್ ದಂಡ ವಿಧಿಸಲಾಗಿದೆ ಎಂದು ಅಸ್ಸೋಂ ಪೊಲೀಸ್ ವಿಶೇಷ ಡಿಜಿ ಜಿಪಿ ಸಿಂಗ್ ಗುವಾಹಟಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ: ಗುಜರಾತ್​ನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಮಿತಿ ರಚನೆ

ಸದ್ಯ ಎಲ್ಲ ಏಳು ಜರ್ಮನ್ ಪ್ರಜೆಗಳನ್ನು ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಮಾತುಕತೆ ನಡೆಸಿ, ಮರಳಿ ತಾಯ್ನಾಡಿಗೆ ವಾಪಸ್ ಕಳುಹಿಸಲು ಅಸ್ಸೋಂ ಸರ್ಕಾರ ನಿರ್ಧರಿಸಿದೆ ಎಂದೂ ಅವರು ತಿಳಿಸಿದರು.

ಇದೇ ಅಕ್ಟೋಬರ್‌ ತಿಂಗಳಲ್ಲೇ ರಾಜ್ಯದ ಕೆಲವು ಭಾಗಗಳಲ್ಲಿ ನಿರ್ದಿಷ್ಟ ಧರ್ಮಗಳನ್ನು ಬೋಧಿಸುತ್ತಿದ್ದ ಆರೋಪದ ಮೇಲೆಯೇ ಒಟ್ಟಾರೆ 27 ವಿದೇಶಿ ಪ್ರಜೆಗಳನ್ನು ಅಸ್ಸೋಂ ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಬಂಧಿತ ವಿದೇಶಿ ಪ್ರಜೆಗಳಲ್ಲಿ 17 ಬಾಂಗ್ಲಾದೇಶದವರು, ಮೂವರು ಸ್ವೀಡನ್ ಪ್ರಜೆಗಳು ಸೇರಿದ್ದರು. ಈಗ 7 ಜನ ಜರ್ಮನ್​ ಪ್ರಜೆಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: ಬಾಡಿಗೆ ಮನೆಯಲ್ಲಿ ಮೂವರು ಮಕ್ಕಳೊಂದಿಗೆ ವಾಸವಿದ್ದ ಬಾಂಗ್ಲಾದೇಶದ ಮಹಿಳೆ ಅರೆಸ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.