ಅನಂತಪುರ್ (ಆಂಧ್ರಪ್ರದೇಶ): ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ 7 ಮಂದಿ ಮೃತಪಟ್ಟು 8 ಮಂದಿ ಗಾಯಗೊಂಡಿದ್ದಾರೆ. ಜಿಲ್ಲೆಯ ಕೊಟ್ಟಳಪಲ್ಲಿ ಬಳಿ ಆಟೋ-ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಆಟೋದಲ್ಲಿದ್ದ 5 ಮಂದಿ ಮಹಿಳಾ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹತ್ತಿ ಬೆಳೆ ಬಿಡಿಸಲು ಜಮೀನಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ಲಾರಿ ಗುದ್ದಿದ ರಭಸಕ್ಕೆ ಮೃತದೇಹಗಳು ಛಿದ್ರವಾಗಿದ್ದವು. ಘಟನೆಯಲ್ಲಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಮೃತಪಟ್ಟವರನ್ನು ಸುಬ್ಬಮ್ಮ, ಶಂಕರಮ್ಮ, ನಾಗವೇಣಿ, ಸಾವಿತ್ರಿ ಮತ್ತು ಚೌಡಮ್ಮ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಕೊಪ್ಪಳಗೊಂಡ ಮಂಡಲ್ನ ಗಾರ್ಲ್ದಿಣ್ಣೆ ನಿವಾಸಿಗಳಾಗಿದ್ದಾರೆ.
ಇದೇ ರೀತಿ ಮಿಡುತೂರ್ ಮಂಡಲ್ನ ಪೆದ್ದವಡುಗೂರು ಬಳಿ ನಡೆದ ಇನ್ನೊಂದು ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಯಾಕೂಬ್ ಹಾಗೂ ನಾರಾಯಣ್ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಅಡಿಕೆ ಕದ್ದಿರುವ ಆರೋಪ.. ಸುಳ್ಯದಲ್ಲಿ ಬಾಲಕನ ಮೇಲೆ ಹಲ್ಲೆ ನಡೆಸಿದ 10 ಮಂದಿ ವಿರುದ್ಧ FIR