ETV Bharat / bharat

ನೌಕರನನ್ನು ಬಂದೂಕಿನಿಂದ ಹೊಡೆದು ಸಾಯಿಸಿದ ಮಾಜಿ ಬಿಜೆಪಿ ಶಾಸಕನ ಮಗ! - ಕನ್ನೌಜ್​ನಲ್ಲಿ ನೌಕರನನ್ನು ಬಂದೂಕುನಿಂದ ಹೊಡೆದು ಸಾಯಿಸಿದ ಮಾಜಿ ಬಿಜೆಪಿ ಶಾಸಕನ ಮಗ

ಮಾಜಿ ಬಿಜೆಪಿ ಶಾಸಕನ ಮಗನೊಬ್ಬ ತನ್ನ ನೌಕರನನ್ನು ಬಂದೂಕುನಿಂದ ಹೊಡೆದು ಸಾಯಿಸಿದ ಘಟನೆ ಉತ್ತರಪ್ರದೇಶದ ಕನ್ನೌಜ್​ನಲ್ಲಿ ನಡೆದಿದೆ.

kannauj news  kannauj police  kannauj halut hospital  kannauj youth dies  ನೌಕರನನ್ನು ಬಂದೂಕುನಿಂದ ಹೊಡೆದು ಸಾಯಿಸಿದ ಮಾಜಿ ಬಿಜೆಪಿ ಶಾಸಕನ ಮಗ  ಕನ್ನೌಜ್​ನಲ್ಲಿ ನೌಕರನನ್ನು ಬಂದೂಕುನಿಂದ ಹೊಡೆದು ಸಾಯಿಸಿದ ಮಾಜಿ ಬಿಜೆಪಿ ಶಾಸಕನ ಮಗ  ಕನ್ನೌಜ್​ ಅಪರಾಧ ಸುದ್ದಿ
ನೌಕರನನ್ನು ಬಂದೂಕುನಿಂದ ಹೊಡೆದು ಸಾಯಿಸಿದ ಮಾಜಿ ಬಿಜೆಪಿ ಶಾಸಕನ ಮಗ
author img

By

Published : Mar 29, 2021, 2:46 PM IST

ಕನ್ನೌಜ್: ಹೋಳಿ ಹಬ್ಬದ ಪ್ರಯುಕ್ತ ಬಾಕಿ ವೇತನ ಕೇಳಲು ಬಂದಿದ್ದ ನೌಕರನನ್ನು ಮಾಜಿ ಬಿಜೆಪಿ ಶಾಸಕನ ಮಗ ಬಂದೂಕಿನಿಂದ ಹೊಡೆದು ಸಾಯಿಸಿದ ಘಟನೆ ಪನ್ಬಾದ್​ ಗ್ರಾಮದಲ್ಲಿ ನಡೆದಿದೆ.

ಪನ್ಬಾದ್ ಗ್ರಾಮದ ನಿವಾಸಿ ಸಂದೇಶ್ ಎಂಬಾತ ಮಾಜಿ ಬಿಜೆಪಿ ಶಾಸಕ ಬನ್ವಾರಿ ಲಾಲ್ ದೊಹರೆ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದನು. ಸಂದೇಶ್​ಗೆ ತಿಂಗಳಿಗೆ 5,000 ರೂಪಾಯಿ ವೇತನವಿತ್ತು. ಕುಟುಂಬ ಸದಸ್ಯರ ಪ್ರಕಾರ, ಸಂದೇಶ್‌ಗೆ ಸುಮಾರು 6 ತಿಂಗಳ ಕಾಲ (ಅಂದ್ರೆ 30 ಸಾವಿರ ರೂಪಾಯಿ) ವೇತನ ನೀಡದೆ ಬನ್ವಾರಿ ಲಾಲ್​ ದೊಹರೆ ಕುಟುಂಬ ಸತಾಯಿಸುತ್ತಿತ್ತು.

ಮಾರ್ಚ್ 25 ರಂದು ಹೋಳಿ ಹಬ್ಬಕ್ಕೆ ವೇತನ ನೀಡದ ಕಾರಣಕ್ಕಾಗಿ ಅಜಿತ್ ದೊಹರೆ ಮೇಲೆ ಸಂದೇಶ್ ಕೋಪಗೊಂಡಿದ್ದರು. ಈ ವೇಳೆ ಇಬ್ಬರ ಮಧ್ಯೆ ಜಗಳವಾಗಿದ್ದು, ಸಂದೇಶನನ್ನು ಅಜಿತ್​ ಬಂದೂಕಿನ ಹಿಂಭಾಗದಿಂದ ಹೊಡೆದು ಹಲ್ಲೆಗೊಳಿಸಿದ್ದಾನೆ. ಈ ಸುದ್ದಿ ಕುಟುಂಬಸ್ಥರಿಗೆ ತಿಳಿದಿದ್ದು, ಕೂಡಲೇ ಘಟನಾ ಸ್ಥಳಕ್ಕೆ ತಲುಪಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂದೇಶನನ್ನು ಕುಟುಂಬಸ್ಥರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾನ್ಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಯಲ್ಲಿ ಸಂದೇಶ್ ಮೂರು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಮೃತಪಟ್ಟನು. ಈ ಘಟನೆ ಕುರಿತು ಕುಟುಂಬಸ್ಥರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿ ಪತ್ತೆಗಾಗಿ ಶೋಧ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.