ಮುಂಬೈ : ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡು ಬಂದ ಋಣಾತ್ಮಕ ಸೂಚನೆಗಳ ನಡುವೆಯೂ ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 100 ಪಾಯಿಂಟ್ ಏರಿಕೆ ಕಂಡು ಬಂದಿದ್ದು, ಈ ಮೂಲಕ 53,290.81 ಅಂಕ ತಲುಪಿದೆ. ಇನ್ನು ದಿನದ ಆರಂಭಿಕ ವಹಿವಾಟಿನಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ.
ಆರಂಭಿಕ ವಹಿವಾಟಿನಲ್ಲಿ 53,290.81ರ ಗರಿಷ್ಠ ಮಟ್ಟಕ್ಕೆ ಏರಿದ ನಂತರ, 30 ಷೇರುಗಳ ಬಿಎಸ್‌ಇ ಸೂಚ್ಯಂಕವು ಆರಂಭಿಕ ವಹಿವಾಟಿನಲ್ಲಿ 111.60 ಅಂಕಗಳ ಏರಿಕೆ ದಾಖಲಿಸುವ ಮೂಲಕ ದಿನದ ವ್ಯವಹಾರ ಮುಂದುವರೆಸಿತ್ತು. ಸದ್ಯ 53,270.45 ರಲ್ಲಿ ವಹಿವಾಟು ನಡೆಸುತ್ತಿದೆ.
ಇನ್ನೊಂದೆಡೆ ನಿಫ್ಟಿ 33.60 ಪಾಯಿಂಟ್ ಏರಿಕೆ ಕಂಡಿದ್ದು, 15,957.80 ಅಂಕ ತಲುಪಿದೆ. ಸೆನ್ಸೆಕ್ಸ್ನಲ್ಲಿ ಐಟಿಸಿ ಶೇ.1 ರಷ್ಟು ಏರಿಕೆ ಕಂಡಿದ್ದು, ಸನ್ ಫಾರ್ಮಾ, ಡಾ. ರೆಡ್ಡೀಸ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್‌ಡಿಎಫ್‌ಸಿ ನಂತರದ ಸ್ಥಾನದಲ್ಲಿದೆ.