ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿನ ತಲ್ಲಣಗಳ ನಡುವೆಯೂ ಇಂದಿನ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಏರಿಕೆ ಕಂಡಿದೆ.
ಶೇ. 0.12 ಅಥವಾ 61.08 ಅಂಕಗಳೊಂದಿಗೆ ರಾಷ್ಟ್ರೀಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 51,764.91ಕ್ಕೆ ಜಿಗಿದಿದೆ. ಇತ್ತ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಶೇ. 0.12 ಅಥವಾ 18.20 ಅಂಕಗಳೊಂದಿಗೆ 15,227.10ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ದೇಶದಲ್ಲಿ ಕೋವಿಡ್ ಮೃತರ ಸಂಖ್ಯೆ 1.56 ಲಕ್ಷಕ್ಕೆ ಏರಿಕೆ.. 94 ಲಕ್ಷ ಮಂದಿಗೆ ವ್ಯಾಕ್ಸಿನ್
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) ಶೇ. 3ರಷ್ಟು ಏರಿಕೆ ಕಂಡಿದ್ದು, ಟೆಕ್ ಮಹೀಂದ್ರಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI ), ಇನ್ಫೋಸಿಸ್, ಎಚ್‌ಸಿಎಲ್ ಟೆಕ್ ಮತ್ತು ಏಷ್ಯನ್ ಪೇಂಟ್ಸ್ ನಂತರದ ಸ್ಥಾನದಲ್ಲಿವೆ. ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ಕೊಟಕ್ ಬ್ಯಾಂಕ್ ಕೊನೆಯ ಸ್ಥಾನಗಳಲ್ಲಿವೆ.