ಮುಂಬೈ: ಭಾರತೀಯ ಷೇರುಪೇಟೆಯಲ್ಲಿ ಹಾವು-ಏಣಿ ಆಟ ನಡೆಯುತ್ತಿದೆ. ಇಂದು ಷೇರುಪೇಟೆ ಆರಂಭಿಕ ಆಘಾತ ಅನುಭವಿಸಿದ್ದು, 1,500 ಅಂಕಗಳಷ್ಟು ಕುಸಿತ ಕಂಡಿತು.
ಎಸ್ ಆ್ಯಂಡ್ ಪಿ ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 1,500 ಅಂಕ ಇಳಿಕೆ ಕಂಡು 57,000 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಅಂತೆಯೇ, ರಾಷ್ಟ್ರೀಯ ಷೇರುಪೇಟೆಯ ಸೂಚ್ಯಂಕ ನಿಫ್ಟಿ 50 ಸೂಚ್ಯಂಕವು 450 ಅಂಕಗಳ ಕುಸಿತದೊಂದಿಗೆ 17,000 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಮಹೀಂದ್ರಾ ಮತ್ತು ಮಹೀಂದ್ರಾ (ಎಂ & ಎಂ), ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಅಲ್ಟ್ರಾಟೆಕ್ ಸಿಮೆಂಟ್, ಡಾ ರೆಡ್ಡೀಸ್ ಪ್ರಯೋಗಾಲಯಗಳು, ಲಾರ್ಸೆನ್ ಮತ್ತು ಟೂಬ್ರೊ (ಎಲ್ & ಟಿ), ಟಾಟಾ ಸ್ಟೀಲ್, ಬಜಾಜ್ ಫೈನಾನ್ಸ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಪಾತ್ರ ದೊಡ್ಡದಾಗಿದ್ದು, ಆರಂಭಿಕ ವಹಿವಾಟಿನಲ್ಲಿ 3 ಪ್ರತಿಶತದಷ್ಟು ಕುಸಿದಿದೆ. ಆದರೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮಾತ್ರ ಶೇಕಡಾ 1ರಷ್ಟು ಲಾಭದೊಂದಿಗೆ ಹಸಿರು ಬಣ್ಣದಲ್ಲಿದೆ.