ETV Bharat / bharat

ಬ್ಯಾಂಕ್​ ಆಫ್​ ಬರೋಡದಲ್ಲಿ 250 ಮ್ಯಾನೇಜರ್​ ಹುದ್ದೆಗಳ ನೇಮಕಾತಿ; ಇಲ್ಲಿದೆ ಮಾಹಿತಿ - ಸರ್ಕಾರಿ ಉದ್ಯೋಗ ಮಾಹಿತಿ

ಬ್ಯಾಂಕಿಂಗ್​ ಕ್ಷೇತ್ರದಲ್ಲಿ ವೃತ್ತಿ ಅನುಭವ ಹೊಂದಿರುವ 250 ಅಭ್ಯರ್ಥಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.

senior manager Recruitment job notification from Bank of Baroda

author img

By ETV Bharat Karnataka Team

Published : Dec 7, 2023, 12:16 PM IST

ಬೆಂಗಳೂರು: ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವ ಆಕಾಂಕ್ಷಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಬ್ಯಾಂಕ್​ ಆಫ್​ ಬರೋಡಾದಲ್ಲಿ ಖಾಲಿ ಇರುವ ಹಿರಿಯ ವ್ಯವಸ್ಥಾಪಕ​ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಬ್ಯಾಂಕಿಂಗ್​ ಕ್ಷೇತ್ರದಲ್ಲಿ ವೃತ್ತಿ ಅನುಭವ ಹೊಂದಿರುವ 250 ಅಭ್ಯರ್ಥಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆ ವಿವರ: ಬ್ಯಾಂಕ್​ ಆಫ್​ ಬರೋಡದಲ್ಲಿ ಖಾಲಿ ಇರುವ 250 ಸೀನಿಯರ್​ ಮ್ಯಾನೇಜರ್​- ಎಂಎಸ್​ಎಂಇ ರಿಲೇಷನ್​ಶಿಪ್​ ಹುದ್ದೆಗಳ ಭರ್ತಿಗೆ ಕ್ರಮ

ವಿದ್ಯಾರ್ಹತೆ: ಅಭ್ಯರ್ಥಿಗಳು ಅಧಿಕೃತ ವಿಶ್ವವಿದ್ಯಾಲಯದಿಂದ ಶೇ 60ರಷ್ಟು ಅಂಕಗಳೊಂದಿಗೆ ಪದವಿ ಅಥವಾ ಸ್ನಾತಕೋತ್ತರ ಪದವಿ/ಮಾರ್ಕೆಟಿಂಗ್​ ಮತ್ತು ಫೈನಾನ್ಸ್​ನಲ್ಲಿ ಎಂಬಿಎ ಪದವಿಯನ್ನು ಹೊಂದಿರಬೇಕು.

ಹುದ್ದೆ ಅನುಭವ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಎಸ್​ಎಂಇ ಬ್ಯಾಂಕಿಂಗ್​ ಜೊತೆಗೆ ಬ್ಯಾಂಕ್​​, ಎನ್​ಬಿಎಫ್​ಸಿ, ಫೈನಾನ್ಸ್​ನಲ್ಲಿ 8 ವರ್ಷಗಳ ವೃತ್ತಿ ಅನುಭವ ಹೊಂದಿರಬೇಕು. ಅಥವಾ ಕ್ರೆಡಿಟ್​ ಮ್ಯಾನೇಜ್​ಮೆಂಟ್​​, ರಿಲೇಷನ್​ಶಿಪ್​ ಆಫ್​ ಎಕ್ಸಿಪಿರಿಯನ್ಸ್​ನಲ್ಲಿ 6 ವರ್ಷ ಹುದ್ದೆ ಅನುಭವ ಹೊಂದಿರಬೇಕು.

ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ 63,840-78,230 ರೂ. ಮಾಸಿಕ ವೇತನವನ್ನು ನಿಗದಿ ಮಾಡಲಾಗಿದೆ.

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 28 ಮತ್ತು ಗರಿಷ್ಠ 37 ವರ್ಷ ವಯೋಮಿತಿ ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆಮಾಡಲಾಗಿದೆ. ಹಿಂದುಳಿದ ಅಭ್ಯರ್ಥಿಗಳಿಗೆ 3 ವರ್ಷ ಬಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಅರ್ಜಿಯನ್ನು ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಸಲ್ಲಿಕೆ ಮಾಡಬಹುದಾಗಿದ್ದು, ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್​ ಅಭ್ಯರ್ಥಿಗಳಿಗೆ 600 ರೂ. ಆಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 100 ರೂ. ಇದೆ.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳನ್ನು ಆನ್​ಲೈನ್​ ಪರೀಕ್ಷೆ, ಗುಂಪು ಚರ್ಚೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಡಿಸೆಂಬರ್​ 6 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರು ಆಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ 26 ಡಿಸೆಂಬರ್​ ಆಗಿದೆ.

ಈ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಹಾಗೂ ಇತರೆ ಮಾಹಿತಿಗೆ ಅಭ್ಯರ್ಥಿಗಳು bankofbaroda.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: ಗದಗ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ; 18 ಹುದ್ದೆಗಳಿಗೆ ಅರ್ಜಿ ಆಹ್ವಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.