ರಾಯ್‌ಪುರ: ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದ ಛತ್ತೀಸ್‌ಗಢ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಡಾ.ಸುಭಾಷ್ ಪಾಂಡೆ ಸಾವನ್ನಪ್ಪಿದ್ದಾರೆ.
ಕೋವಿಡ್ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾದ ಬಳಿಕ ಪಾಂಡೆ ಅವರನ್ನು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ರಾಯ್ಪುರಕ್ಕೆ ದಾಖಲಿಸಲಾಗಿತ್ತು.
ಛತ್ತೀಸ್‌ಗಢದಲ್ಲಿ ಕೋವಿಡ್ ಸಾವುನೋವು:
ಈ ದುರ್ಘಟನೆಗೂ ಹಿಂದಿನ ದಿನ 15,121ಪ್ರಕರಣಗಳು ಪತ್ತೆಯಾಗಿದ್ದವು. ಕಳೆದೊಂದು ತಿಂಗಳಲ್ಲಿ ರಾಜ್ಯದಲ್ಲಿ 1.68 ಲಕ್ಷ ಸೋಂಕು ಪ್ರಕರಣಗಳು ಮತ್ತು 1,417 ಸಾವುಗಳು ದಾಖಲಾಗಿವೆ. 88 ಜನರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಿದ ನಂತರ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,18,636 ಆಗಿದೆ.
ಇದನ್ನೂ ಓದಿ: ಹೆಲ್ಮೆಟ್ ಧರಿಸಿಲ್ಲ ಅಂತ ಪೊಲೀಸ್‌ಗೆ ಹಿಗ್ಗಾಮುಗ್ಗಾ ಥಳಿಸಿದ ಟ್ರಾಫಿಕ್ ಪೊಲೀಸ್- ವಿಡಿಯೋ
2,441 ಸೋಂಕಿತರು ತಮ್ಮ ಐಸೋಲೇಷನ್ ಅವಧಿ ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ, ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 3,62,301ಕ್ಕೆ ಏರಿದೆ. ಹೆಚ್ಚು ಹಾನಿಗೊಳಗಾದ ರಾಯ್‌ಪುರ ಮತ್ತು ದುರ್ಗ್ ಜಿಲ್ಲೆಗಳಲ್ಲಿ ಕ್ರಮವಾಗಿ 3,960 ಮತ್ತು 1,647 ಪ್ರಕರಣಗಳು ವರದಿಯಾಗಿವೆ.
ರಾಯ್‌ಪುರದಲ್ಲಿ ಒಟ್ಟು ಸೋಂಕಿನ ಸಂಖ್ಯೆ 1,362,881ಕ್ಕೆ ತಲುಪಿದೆ. 1,366 ಜನರು ಮೃತರಾಗಿದ್ದಾರೆ. ರಾಜನಂದಗಾಂವ್ 1,254, ಬಿಲಾಸ್ಪುರ್ 923 ಮತ್ತು ಕೋಬಾ 741 ಪ್ರಕರಣಗಳು ಪತ್ತೆಯಾಗಿವೆ.