ಮುಂಬೈ (ಮಹಾರಾಷ್ಟ್ರ) : ಅಭಿವೃದ್ಧಿ ಯೋಜನೆಗಳಿಗೆ ಶಿವಸೇನೆ ಶಾಸಕರಿಗೆ ಹಣ ನೀಡುತ್ತಿಲ್ಲ ಎಂದು ದೂರಿದ್ದ ಶಾಸಕರು ಶಿಂಧೆ ಬಣದ ಮೂಲಕ ಸರ್ಕಾರವನ್ನೇ ಉರುಳಿಸಿ ಹೊಸ ಸರ್ಕಾರ ರಚನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದನ್ನ ಮನಗಂಡಿರುವ ಶಿಂಧೆ ಎಲ್ಲಾ ಅತೃಪ್ತ ಶಾಸಕರಿಗೆ ಅವರ ಬಾಕಿ ಇರುವ ಮತ್ತು ಪ್ರಸ್ತಾವಿತ ಕಾಮಗಾರಿಗಳಿಗೆ ಸಾಕಷ್ಟು ಹಣ ಒದಗಿಸಲು ನಿರ್ಧರಿಸಿದ್ದಾರೆ.
ಶಾಸಕರು ತಮ್ಮ ಕಾಮಗಾರಿ ಪ್ರಸ್ತಾವನೆಗಳನ್ನು ಆದಷ್ಟು ಬೇಗ ಕಳುಹಿಸಬೇಕು. ಶಾಸಕರು ಕಾಮಗಾರಿ ಪ್ರಸ್ತಾವನೆ ಕಳುಹಿಸಿದರೆ 5 ರಿಂದ 10 ಕೋಟಿ ರೂ.ಗಳ ವರೆಗೆ ಕಾಮಗಾರಿಗೆ ಹಣ ಬಿಡುಗಡೆಮಾಡಲಾಗುವುದು ಎಂದು ಸಿಎಂ ಹಾಗೂ ಡಿಸಿಎಂ ತಿಳಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ನಂತರ ಮತ್ತು ಮುಂಗಾರು ಅಧಿವೇಶನದಲ್ಲಿ ಈ ಹಣವನ್ನು ವಿತರಿಸಲು ಆಗುತ್ತದೆಯೇ ಎಂಬ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಬಿಜೆಪಿ ಶಾಸಕರು ಸೇರಿದಂತೆ ಶಿಂಧೆ ಪರ ಶಾಸಕರನ್ನು ಇದರಲ್ಲಿ ಪರಿಗಣಿಸಲಾಗುತ್ತದೆ.
165 ಶಾಸಕರಿಗೆ ಬಂಪರ್: ಮಿತ್ರಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಸರ್ಕಾರವನ್ನು ಬೆಂಬಲಿಸುವ 165 ಶಾಸಕರಿಗೆ ಹಣ ನೀಡುವುದು ಇದರ ಉದ್ದೇಶವಾಗಿದೆ. ಠಾಕ್ರೆ ಅವರಿಗೆ ನಿಷ್ಠರಾಗಿ ಉಳಿದಿರುವ ಶಿವಸೇನೆಯ ಉಳಿದ ಶಾಸಕರಿಗೂ ಈ ನಿಧಿಯ ಲಾಭವನ್ನು ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.
ಶಾಸಕರಿಗಾಗಿ ಸುಮಾರು 1500 ಕೋಟಿ ರೂ. ಈ ಹಣವನ್ನು ಎರಡು ಹಂತಗಳಲ್ಲಿ ವಿತರಿಸಲಾಗುವುದು, ಆರಂಭದಲ್ಲಿ 600 ಕೋಟಿ ಮತ್ತು ನಂತರ 900 ಕೋಟಿ ರೂ.ಗಳನ್ನು ನಗರಾಭಿವೃದ್ಧಿ ಇಲಾಖೆ ಮೂಲಕ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಅಘಾಡಿ ಸರ್ಕಾರದ ಲೆಕ್ಕ ಕೊಟ್ಟಿದ್ದ ಪಡ್ನವಿಸ್: ಮಹಾವಿಕಾಸ್ ಅಘಾಡಿ ಸರ್ಕಾರದ ಅವಧಿಯಲ್ಲಿ 5 ಲಕ್ಷದ 48 ಸಾವಿರದ 777 ಕೋಟಿಗಳನ್ನು ವಿತರಿಸಲಾಗಿತ್ತು. ಆದರೆ, ಈ ನಿಧಿಯಲ್ಲಿ 57 ರಷ್ಟು ಎನ್‌ಸಿಪಿ, 26 ಶೇಕಡಾ ಕಾಂಗ್ರೆಸ್ ಮತ್ತು 16 ರಷ್ಟು ಶಿವಸೇನೆ ಶಾಸಕರಿಗೆ ಹಂಚಿಕೆಯಾಗಿದೆ ಎಂದು ದೇವೇಂದ್ರ ಫಡ್ನವೀಸ್ ಸದನದಲ್ಲಿ ಹೇಳಿಕೊಂಡಿದ್ದರು.
ರಾಜ್ಯದ ಎಲ್ಲ ಶಾಸಕರಿಗೂ ಅನುದಾನ ನೀಡಲಾಗುವುದು. ಕೇವಲ ಶಿಂಧೆ ಗುಂಪಿನ ಶಾಸಕರಿಗೆ ಮತ್ತು ಬಿಜೆಪಿ ಶಾಸಕರಿಗೆ ಮಾತ್ರ ಹಣ ನೀಡಲಾಗುತ್ತದೆ ಎಂದು ಭಾವಿಸಬಾರದು. ರಾಜ್ಯದ ಎಲ್ಲ ಶಾಸಕರಿಗೂ ಹಣ ನೀಡಲು ಪ್ರಯತ್ನಿಸುತ್ತೇವೆ ಎಂದು ಶಿಂಧೆ ಗುಂಪಿನ ಬೆಂಬಲಿಗ ಉದಯ್ ಸಾಮಂತ್ ಹೇಳಿದ್ದಾರೆ.
ಇದನ್ನೂ ಓದಿ: ಅಮರನಾಥದ ಪವಿತ್ರ ಗುಹಾ ದೇಗುಲದ ಬಳಿ ಮೇಘಸ್ಫೋಟ: ಐವರ ಸಾವು