ETV Bharat / bharat

ಪಾಕ್​ ISI ಬಗ್ಗೆ ನಾನು ಕೇಳಿಯೇ ಇಲ್ಲ.. ಸೀಮಾ ಹೈದರ್‌ಗೆ ATS​ ಕೇಳಿದ 13 ಪ್ರಶ್ನೆಗಳು ಹಾಗೂ ಆಕೆ ಕೊಟ್ಟ ಉತ್ತರ ಇಲ್ಲಿದೆ.. - ಪಾಕಿಸ್ತಾನಿ ಸೀಮಾ ಹೈದರ್ ಗುಲಾಮ್‌

ಪಬ್​ಜಿ ಗೇಮ್​ನಲ್ಲಿ ಪರಿಚಯವಾದ ಭಾರತದ 22 ವರ್ಷದ ಸಚಿನ್ ಮೀನಾ ಎಂಬಾತನಿಗಾಗಿ ಪಾಕಿಸ್ತಾನದ ಸೀಮಾ ಗುಲಾಮ್ ಹೈದರ್ ಭಾರತಕ್ಕೆ ಬಂದಿದ್ದಾರೆ. ಉತ್ತರ ಪ್ರದೇಶದ ಎಟಿಎಸ್ ತಂಡದ ವಿಚಾರಣೆ ವೇಳೆ ಸೀಮಾ ಹೈದರ್‌ಗೆ ಕೇಳಿದ 13 ಪ್ರಶ್ನೆಗಳು ಮತ್ತು ಆಕೆ ನೀಡಿದ ಉತ್ತರಗಳು ಇಲ್ಲಿವೆ..

Seema-Sachin 'love' story: Here are 13 questions ATS asked Pakistani woman, and her answers
ಪಾಕ್​ ISI ಬಗ್ಗೆ ನಾನು ಕೇಳಿಯೇ ಇಲ್ಲ: ಸೀಮಾ ಹೈದರ್‌ಗೆ ATS​ ಕೇಳಿದ 13 ಪ್ರಶ್ನೆಗಳು ಹಾಗೂ ಆಕೆ ಕೊಟ್ಟು ಉತ್ತರಗಳು ಇಲ್ಲಿವೆ..
author img

By

Published : Jul 19, 2023, 6:35 PM IST

ಲಖನೌ (ಉತ್ತರ ಪ್ರದೇಶ): ಭಾರತಕ್ಕೆ ನುಸುಳಿರುವ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಗುಲಾಮ್‌ಳನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದ ಅಧಿಕಾರಿಗಳು ಸೋಮವಾರ (ಜುಲೈ 17) ಮತ್ತು ಮಂಗಳವಾರ (ಜುಲೈ 18) ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದಾರೆ. ಎಸ್​ಪಿ ಶ್ರೇಣಿಯ ಮೂವರು ಅಧಿಕಾರಿಗಳು ಕರಾಚಿ ಮೂಲದ ಸೀಮಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ಪ್ರಮುಖ 13 ಪ್ರಶ್ನೆಗಳನ್ನು ತನಿಖಾ ಅಧಿಕಾರಿಗಳು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಂಧ್ ಪ್ರಾಂತ್ಯದ ಕರಾಚಿಯ 30 ವರ್ಷದ ಸೀಮಾ ಗುಲಾಮ್ ಹೈದರ್ ಮತ್ತು ಭಾರತದ 22 ವರ್ಷದ ಸಚಿನ್ ಮೀನಾ ಎಂಬಾತ 2019ರಲ್ಲಿ ಪಬ್​​ಜಿ ಗೇಮ್​ ಮೂಲಕ ಸಂಪರ್ಕಕ್ಕೆ ಬಂದಿದ್ದರು. ಸಚಿನ್​ಗಾಗಿ ನೇಪಾಳದ ಮೂಲಕ ಸೀಮಾ ಭಾರತಕ್ಕೆ ಬಂದ ಬಳಿಕ 1,300 ಕಿ.ಮೀ ದೂರದಲ್ಲಿ ವಾಸಿಸುತ್ತಿದ್ದ ಈ ಇಬ್ಬರ ನಡುವೆ ನಾಟಕೀಯ ಪ್ರೇಮಕಥೆ ತೆರೆದುಕೊಂಡಿತ್ತು.

ಇದನ್ನೂ ಓದಿ: ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ವಿಚಾರಣೆಗೆ ಒಳಪಡಿಸಿದ ATS

ಸದ್ಯ ದೆಹಲಿ ಸಮೀಪದ ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿ ಸೀಮಾ ಪ್ರಾವಿಷನ್ ಸ್ಟೋರ್ ನಡೆಸುತ್ತಿರುವ ಪ್ರಿಯಕರ ಸಚಿನ್ ಜೊತೆಗೆ ವಾಸಿಸುತ್ತಿದ್ದಾರೆ. ಇದರ ನಡುವೆ ಉತ್ತರ ಪ್ರದೇಶದ ಎಟಿಎಸ್ ಅಧಿಕಾರಿಗಳು ಸಚಿನ್ ಹಾಗೂ ಸೀಮಾ ಅವರನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆ ವೇಳೆ ಸೀಮಾ ಹೈದರ್‌ಗೆ ಕೇಳಿದ 13 ಪ್ರಶ್ನೆಗಳು ಮತ್ತು ಆಕೆ ನೀಡಿದ ಉತ್ತರಗಳ ವಿವರಣೆ ಹೀಗಿದೆ..

ಪ್ರಶ್ನೆ 1: ಎರಡು ಪಾಸ್‌ಪೋರ್ಟ್‌ಗಳ ಮೂಲ ಯಾವುದು?

ಸೀಮಾ: ಈ ಹಿಂದೆ ಪಾಸ್‌ಪೋರ್ಟ್‌ನಲ್ಲಿ ಸೀಮಾ ಎಂದು ಮಾತ್ರ ಬರೆಯಲಾಗಿತ್ತು ಎಂದು ಕಳೆದ ಹತ್ತು ದಿನಗಳಿಂದ ಹೇಳುತ್ತಿದ್ದೇನೆ. ಇದರಿಂದ ನಾನು ಸಮಸ್ಯೆ ಎದುರಿಸುತ್ತಿದ್ದೇನೆ. ಅದಕ್ಕಾಗಿಯೇ ಸೀಮಾ ಗುಲಾಮ್ ಹೈದರ್ ಹೆಸರಿನಲ್ಲಿ ಎರಡನೇ ಪಾಸ್‌ಪೋರ್ಟ್ ಮಾಡಲಾಗಿದೆ. ಇದನ್ನು ಬಿಟ್ಟು ಬೇರೇನೂ ಇಲ್ಲ.

ಪ್ರಶ್ನೆ 2: ನಿಮಗೆ ಪಾಕಿಸ್ತಾನದ ಸೇನೆಯಲ್ಲಿರುವ ಸಹೋದರ ಮತ್ತು ಚಿಕ್ಕಪ್ಪ ಇದ್ದಾರೆಯೇ?, ಅವರು ನಿಮ್ಮನ್ನು ಇಲ್ಲಿಗೆ ಕಳುಹಿಸಿದ್ದಾರೆಯೇ ಅಥವಾ ಭಾರತಕ್ಕೆ ಹೋಗುವಂತೆ ಐಎಸ್​ಐ ಹೇಳಿದೆಯೇ?

ಸೀಮಾ: ನಾನು ನನ್ನ ಅಣ್ಣ ಮತ್ತು ಚಿಕ್ಕಪ್ಪನನ್ನು ಭೇಟಿಯಾಗಿ ವರ್ಷಗಳೇ ಆಗಿದೆ. ಈ ಐಎಸ್​ಐ ಅಂದ್ರೇನು?. ಕಳೆದ ಕೆಲವು ದಿನಗಳಲ್ಲಿ ನಾನು ಭಾರತಕ್ಕೆ ಬಂದಾಗ ಟಿವಿ ವಾಹಿನಿಯೊಂದರಲ್ಲಿ ಐಎಸ್‌ಐನ ಏಜೆಂಟ್ ಎಂದು ಕರೆದಾಗ ನನಗೆ ಈ ವಿಷಯ ತಿಳಿಯಿತು. ಸಚಿನ್ ಮೀನಾಗಾಗಿಯೇ ನೇಪಾಳದ ಮೂಲಕ ಭಾರತಕ್ಕೆ ಬಂದಿದ್ದೇನೆ.

ಪ್ರಶ್ನೆ 3: ನೀವು ಕರಾಚಿಯಲ್ಲಿ ವಾಸಿಸುತ್ತಿದ್ದಿರಿ ಮತ್ತು ನಿಮ್ಮ ಕುಟುಂಬ ಸದಸ್ಯರು ಪಾಕಿಸ್ತಾನಿ ಸೇನೆಯಲ್ಲಿದ್ದಾಗ ಐಎಸ್‌ಐ ಬಗ್ಗೆ ಕೇಳದೆ ಇರಲು ಹೇಗೆ ಸಾಧ್ಯ?. ನೀವು ಸ್ಮಾರ್ಟ್‌ಫೋನ್ ಬಳಸುತ್ತೀರಿ ಮತ್ತು ಪಬ್​​ಜಿನಂತಹ ಆಟಗಳನ್ನು ಆಡುತ್ತೀರಿ. ಹಾಗಾದರೆ ನಿಮಗೆ ಐಎಸ್‌ಐ ಬಗ್ಗೆ ಗೊತ್ತಿಲ್ಲವೇ?

ಸೀಮಾ: ನನ್ನ ಅರ್ಧ ಜೀವನವು ಮಕ್ಕಳನ್ನು ಬೆಳೆಸುವುದರಲ್ಲೇ ಕಳೆದಿದೆ. ಕಳೆದ ಐದು ವರ್ಷಗಳಿಂದ ನಾನು ಸಮಯ ಕಳೆಯಲು ಪಬ್​​ಜಿ ಆಡುತ್ತಿದ್ದೆ. ಹೀಗಿರುವಾಗ ಐಎಸ್ ಐಯಂತಹ ಮಾತುಗಳನ್ನು ಕೇಳಲು ಸಮಯವೇ ಇರಲಿಲ್ಲ.

ಪ್ರಶ್ನೆ 4: ಐಎಸ್ಐ ಪದವನ್ನು ಕೇಳಲು ನಿಮಗೆ ಸಮಯ ಸಿಗಲಿಲ್ಲವೇ?, ಐದನೇ ತರಗತಿಯವರೆಗೆ ಓದಿದ್ದರೂ ನಿಮ್ಮ ಇಂಗ್ಲಿಷ್ ತುಂಬಾ ಚೆನ್ನಾಗಿದೆಯಲ್ಲಾ?

ಸೀಮಾ: ನಾನು ಏನು ಕಲಿತಿದ್ದೇನೆ ಅದು ನಾನು 2019ರಲ್ಲಿ ಪಬ್​ಜಿ ಆಡಲು ಪ್ರಾರಂಭಿಸಿದ ನಂತರವೇ ಕಲಿತಿರುವೆ. ನಾನು ವಿದ್ಯಾವಂತ ಹುಡುಗರು ಮತ್ತು ಪುರುಷರೊಂದಿಗೆ ಆಟವಾಡುತ್ತಿದ್ದೆ. ಆದ್ದರಿಂದ ನಾನು ಅವರಿಂದ ಇಂಗ್ಲಿಷ್ ಕಲಿತಿದ್ದೇನೆ.

ಈ ವೇಳೆ ಎಟಿಎಸ್ ಅಧಿಕಾರಿಯೊಬ್ಬರು ಒಂದು ಪುಟದಲ್ಲಿ ಇಂಗ್ಲಿಷ್‌ನಲ್ಲಿ ಕೆಲವು ಸಾಲುಗಳನ್ನು ಬರೆದು ಅದನ್ನು ಸೀಮಾಗೆ ಓದಲು ಕೊಟ್ಟರು. ಸೀಮಾ ಅದನ್ನು ತಕ್ಷಣ ಓದಿದರು.

ಪ್ರಶ್ನೆ 5: ನೀವು ನಿಮ್ಮ ಉರ್ದು, ಅರೇಬಿಕ್, ಸಿಂಧಿ ಭಾಷೆಯಲ್ಲಿ ಸಂವಹನ ಮಾಡುತ್ತಿಲ್ಲ. ಆದರೆ, ಹಿಂದಿಯಲ್ಲಿ ಮಾತನಾಡುತ್ತಿದ್ದೀರಿ ಮತ್ತು ನೀವು ಚೆನ್ನಾಗಿ ಇಂಗ್ಲಿಷ್ ಮಾತನಾಡುತ್ತಿದ್ದೀರಿ. ಇದಕ್ಕೆ ನಿಮಗೆ ತರಬೇತಿ ನೀಡಿದವರು ಯಾರು?, ನೀವು ಭಾರತದ ಜನರೊಂದಿಗೆ ಬೆರೆಯಲು ಅಲ್ಲಿ ಶುದ್ಧ ಹಿಂದಿಯಲ್ಲಿ ಮಾತನಾಡಲು ಹೇಳಲಾಗಿದೆಯೇ?. ನಿರಾಶ್ರಿತರು, ವಿಪತ್ತು ಮುಂತಾದ ಪದಗಳನ್ನು ನೀವು ಅತ್ಯಂತ ಶುದ್ಧವಾಗಿ ಮಾತನಾಡುತ್ತೀರಿ ಎಂದು ನಾವು ಕೇಳಿದ್ದೇವೆ.

ಸೀಮಾ: ಯಾರೂ ನನಗೆ ಕಲಿಸಿಲ್ಲ. ನಾನು ಇಲ್ಲಿಗೆ ಬಂದಿರುವುದು ನನ್ನ ಪ್ರೀತಿಗಾಗಿ ಎಂದು ಅನೇಕ ಸಂದರ್ಭಗಳಲ್ಲಿ ಹೇಳಿದ್ದೇನೆ. ಯಾರೂ ನನಗೆ ತರಬೇತಿ ನೀಡಿಲ್ಲ ಅಥವಾ ನನ್ನನ್ನು ಕಳುಹಿಸಿಲ್ಲ. ಸಚಿನ್ ಜೊತೆ ಮಾತನಾಡುವಾಗ ಹಿಂದಿ ಕಲಿತಿದ್ದೇನೆ.

ಪ್ರಶ್ನೆ 6: ಸಚಿನ್ ಮೀನಾ ಅವರೇ ಹಿಂದಿ ಸರಿಯಾಗಿ ಮಾತನಾಡುವುದಿಲ್ಲ. ಅವರ ಭಾಷೆಯಲ್ಲಿ ಪಶ್ಚಿಮ ಉತ್ತರ ಪ್ರದೇಶದ ಸ್ಪರ್ಶವಿದೆ. ನೀವು ಮಾತನಾಡುತ್ತಿರುವುದು ತರಬೇತಿ ಪಡೆದ ವ್ಯಕ್ತಿಯಂತೆ ಇದು ಹೇಗೆ ಸಾಧ್ಯ?

ಸೀಮಾ: ಉತ್ತರವಿಲ್ಲ.

ಪ್ರಶ್ನೆ 7: ಜುಲೈ 4ರಂದು ನೀವು ನೇಪಾಳದಿಂದ ಬಸ್ಸಿನಲ್ಲಿ ಭಾರತಕ್ಕೆ ಬಂದಾಗ ನಿಮ್ಮ ಮೊಬೈಲ್ ಕೆಲಸ ಮಾಡಲಿಲ್ಲ ಎಂದು ಪೊಲೀಸರಿಗೆ ಹೇಳಿದ್ದೀರಿ. ಅದಕ್ಕೇ ಡ್ರೈವರ್ ಫೋನಿನಿಂದ ಸಚಿನ್​ಗೆ ಕರೆ ಮಾಡಿದ್ದೀರಿ. ನೋಯ್ಡಾ ಪೊಲೀಸರು ನಿಮ್ಮಿಂದ ನಾಲ್ಕು ಮೊಬೈಲ್‌ಗಳು ಮತ್ತು ನಾಲ್ಕು ಸಿಮ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇಷ್ಟು ಮೊಬೈಲ್‌ಗಳನ್ನು ಇಟ್ಟುಕೊಂಡು ಏನು ಮಾಡುತ್ತಿದ್ದೀರಿ ಮತ್ತು ಅವುಗಳನ್ನು ಏಕೆ ಮುರಿದಿದ್ದೀರಿ?

ಸೀಮಾ: ನಾನು ನೇಪಾಳದಿಂದ ಭಾರತಕ್ಕೆ ಬಂದಾಗ ನನ್ನ ಪಾಕಿಸ್ತಾನದ ಸಿಮ್ ಕೆಲಸ ಮಾಡುತ್ತಿರಲಿಲ್ಲ. ನಾನು ಸಚಿನ್ ಬಳಿ ಬಂದಾಗ ಅವರು ನನಗೆ ಹೊಸ ಸಿಮ್ ತಂದರು. ಪಾಕಿಸ್ತಾನದ ಜನರು ನನ್ನನ್ನು ಪತ್ತೆಹಚ್ಚಲು ಬಯಸಿದ ಕಾರಣ ಮೊಬೈಲ್ ನಾಶಪಡಿಸಲಾಗಿದೆ.

ಪ್ರಶ್ನೆ 8: ಸಚಿನ್ ಒಂದು ಸಿಮ್ ತಂದರು.. ಉಳಿದ ಸಿಮ್‌ಗಳು ಹೇಗೆ ಬಂದವು?

ಸೀಮಾ: ನನಗೆ ನೆನಪಿಲ್ಲ.

ಪ್ರಶ್ನೆ 9: ನೀವು ಎಲ್ಲ ಸಿಮ್‌ಗಳನ್ನು ವಿವಿಧ ಸೆಲ್ ಫೋನ್‌ಗಳಲ್ಲಿ ಹಾಕಿದ್ದೀರಿ ಮತ್ತು ವಾಟ್ಸಾಪ್ ಎಲ್ಲದರಲ್ಲೂ ಚಾಲನೆಯಲ್ಲಿದೆ. ಅದರಲ್ಲಿ ನೀವು ಹಾಕಿರುವ ಪ್ರೊಫೈಲ್ ಫೋಟೋ ಯಾವುದೋ ಹುಡುಗಿಯದ್ದು. ಇನ್ನೊಂದರಲ್ಲಿ ಕಾಶ್ಮೀರದ ಪರ್ವತಗಳ ಚಿತ್ರವಿದೆ. ಯಾರ ಸೂಚನೆ ಮೇರೆಗೆ ಇದೆಲ್ಲ ಮಾಡುತ್ತಿದ್ದೀರಿ?

ಸೀಮಾ: ನಾನು ವಾಟ್ಸಾಪ್‌ನಲ್ಲಿ ಯಾವುದೇ ಫೋಟೋಗಳನ್ನು ಪೋಸ್ಟ್ ಮಾಡಿಲ್ಲ ಅಥವಾ ಸಂವಹನ ಸಾಧನ ಬಳಸುವುದಿಲ್ಲ.

ಪ್ರಶ್ನೆ 10: ದುಬೈ ಮೂಲಕ ನೇಪಾಳಕ್ಕೆ ಎರಡು ಬಾರಿ ಬರಲು ಸಾಕಷ್ಟು ಹಣವನ್ನು ಖರ್ಚು ಮಾಡಿರಬೇಕು. ಅಷ್ಟೊಂದು ಹಣ ಎಲ್ಲಿಂದ ಬಂತು?. ನೀವೇ ಬಾಡಿಗೆಗೆ ವಾಸಿಸುತ್ತಿದ್ದೀರಿ. ನಿಮ್ಮ ಗಂಡನ ಜೊತೆಗಿನ ಸಂಬಂಧ ಚೆನ್ನಾಗಿಲ್ಲ. ವರ್ಷಾನುಗಟ್ಟಲೆ ಅಣ್ಣನನ್ನು ಭೇಟಿಯಾಗಿಲ್ಲ. ಹಾಗಾದರೆ ನಿನಗೆ ಹಣ ಹೇಗೆ ಬಂತು?, ಯಾರಾದರೂ ನಿಮಗೆ ಸಹಾಯ ಮಾಡಿದ್ದರೆ?. ಸತ್ಯವನ್ನು ಬಹಿರಂಗಪಡಿಸಿ ನಾವು ನಿಮ್ಮನ್ನು ಪಾಕಿಸ್ತಾನಕ್ಕೆ ಅಥವಾ ಜೈಲಿಗೆ ಕಳುಹಿಸುವುದಿಲ್ಲ. ನಿಮಗೆ ಭಾರತೀಯ ಪೌರತ್ವ ಕೊಡಿಸಲು ಯತ್ನಿಸುತ್ತೇನೆ.

ಸೀಮಾ: ಎರಡೂ ಟ್ರಿಪ್​ಗೆ ಒಟ್ಟು ಏಳು ಲಕ್ಷ ರೂ. ಖರ್ಚು ಮಾಡಿದ್ದೇನೆ. ನನ್ನ ಹೆಸರಿನಲ್ಲಿದ್ದ ಮನೆಯನ್ನು ಮಾರಿದ್ದೆ. ನಾನು ಆ ಮನೆಯಲ್ಲಿ ವಾಸವಿರಲಿಲ್ಲ. ನನ್ನ ಒಡವೆಗಳನ್ನು ಮಾರಿ ಪತಿ ಗುಲಾಮನನ್ನು ದುಬೈಗೆ ಕಳುಹಿಸಿದ್ದೆ. ಭಾರತಕ್ಕೆ ಬರಲು ಯಾರೂ ನನಗೆ ಸಹಾಯ ಮಾಡಿಲ್ಲ ಎಂದು ನಾನು ಪದೇ ಪದೇ ಹೇಳುತ್ತಿದ್ದೇನೆ.

ಪ್ರಶ್ನೆ 11: ಭಾರತದಲ್ಲಿ ಸಚಿನ್ ಹೊರತುಪಡಿಸಿ ಬೇರೆ ಯಾರಾದರು ನಿಮಗೆ ತಿಳಿದಿದೆಯೇ?

ಸೀಮಾ: ಹೌದು.. ಆದರೆ ಸರಿಯಾಗಿ ಗೊತ್ತಿಲ್ಲ. ನಾನು ಪಾಕಿಸ್ತಾನದಲ್ಲಿದ್ದಾಗ ಸಚಿನ್ ಬಗ್ಗೆ ತಿಳಿಯುವ ಮೊದಲು ನನ್ನ ಸಮಯ ಕಳೆಯಲು ನಾನು ಕೆಲವು ಹುಡುಗರೊಂದಿಗೆ ಪಬ್​ಜಿ ಮತ್ತು ಫೇಸ್‌ಬುಕ್ ಮೂಲಕ ಚಾಟ್ ಮಾಡುತ್ತಿದ್ದೆ. ಆರಂಭದಲ್ಲಿ ನಾನು ಸಚಿನ್‌ಗೆ ನನ್ನ ಬಗ್ಗೆ ಹೆಚ್ಚು ಹೇಳಲಿಲ್ಲ. ಅವನು ನನಗೆ ಏನನ್ನೂ ಹೇಳಲಿಲ್ಲ.

ಪ್ರಶ್ನೆ 12: ನಿಮ್ಮ ಜೀವನದಲ್ಲಿ ನೀವು ಏನು ಮಾಡಿದ್ದೀರಿ?, ನಿಮ್ಮ ನಿಜವಾದ ವಯಸ್ಸು ಎಷ್ಟು?

ಸೀಮಾ: ನನಗೆ ಕೇವಲ 27 ವರ್ಷ. ಪಾಸ್‌ಪೋರ್ಟ್‌ನಲ್ಲಿ ಏನೋ ತಪ್ಪಾಗಿದೆ.

ಪ್ರಶ್ನೆ 13: ಭಾರತಕ್ಕೆ ಬರುವ ನಿಮ್ಮ ನಿಜವಾದ ಉದ್ದೇಶವೇನು?

ಸೀಮಾ: ನಾನು ನನ್ನ ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ಪಾಕಿಸ್ತಾನದಿಂದ ಬಂದಿದ್ದೇನೆ. ಅದು ಕೇವಲ ಸಚಿನ್‌ಗಾಗಿ ಮಾತ್ರ. ಪ್ರಸ್ತುತ ನಡೆಯುತ್ತಿರುವ ಸಂಗತಿಗಳ ಬಗ್ಗೆ ನನಗೆ ಈಗಾಗಲೇ ಒಂದು ಭಾವನೆ ಇತ್ತು. ಅದಕ್ಕಾಗಿಯೇ ನಾನು ಮತ್ತು ಸಚಿನ್ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೆವು. ನಾನು ಈಗ ಅದರಿಂದ ಬೇಸತ್ತಿದ್ದೇನೆ.

ಸೀಮಾ ವಿಚಾರಣೆಯ ವಿಡಿಯೋ ರೆಕಾರ್ಡಿಂಗ್ ಮಾಡಿರುವ ಯುಪಿ ಎಟಿಎಸ್ ಅಧಿಕಾರಿಗಳು, ಅದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಹಿರಿಯ ಅಧಿಕಾರಿಗಳಿಗೆ ರವಾನಿಸಿದ್ದಾರೆ. ಆದರೆ, ಸೀಮಾ ನೀಡಿದ ಯಾವುದೇ ಉತ್ತರಗಳಿಂದ ಎಟಿಎಸ್ ತೃಪ್ತವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಸೌದಿಯಲ್ಲಿ ಗಂಡ.. ಪಬ್​ಜಿ ಗೇಮ್​​ ಪ್ರಿಯಕರನಿಗಾಗಿ ನಿವೇಶನ ಮಾರಿ ಭಾರತಕ್ಕೆ ಬಂದ ಪಾಕ್ ಮಹಿಳೆ ಪೊಲೀಸರ ಅತಿಥಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.