ತಿರುವನಂತಪುರಂ(ಕೇರಳ): ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧಿಕೃತ ನಿವಾಸದಲ್ಲಿ ನಿಯೋಜನೆಗೊಂಡಿದ್ದ ಭದ್ರತಾ ಅಧಿಕಾರಿಯೊಬ್ಬರ ಗನ್ನಿಂದ ಆಕಸ್ಮಿಕವಾಗಿ ಮಂಗಳವಾರ ಗುಂಡು ಹಾರಿದೆ.
ಭದ್ರತಾ ಅಧಿಕಾರಿ ತಮ್ಮ ಗನ್ ಸ್ವಚ್ಛಗೊಳಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮಂಗಳವಾರ ಬೆಳಗ್ಗೆ 9.15 ರ ಸುಮಾರಿಗೆ ಘಟನೆ ಸಂಭವಿಸಿದ್ದು, ಯಾರಿಗೂ ಗಾಯಗಳಾಗಿಲ್ಲ. ಈ ಸಮಯದಲ್ಲಿ ಮುಖ್ಯಮಂತ್ರಿಗಳು ನಿವಾಸದಲ್ಲಿ ಇರಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹಲವು ಸುತ್ತಿನ ಸಭೆಗಳ ಬಳಿಕ ನುಸುಳುಕೋರನ ಮೃತದೇಹ ಸ್ವೀಕರಿಸಿದ ಪಾಕಿಸ್ತಾನ