ವಾರಣಾಸಿ (ಉತ್ತರ ಪ್ರದೇಶ): ಭೀಕರ ಕೊರೊನಾ ಸಾಂಕ್ರಾಮಿಕದಿಂದಾಗಿ ವಿಶ್ವದ ಜನರು ಸಂಕಷ್ಟದಲ್ಲಿ ಸಿಲುಕಿದ್ದು, ಇದರ ನಡುವೆ ಜ್ಯೋತಿಷಿಗಳು ಮತ್ತೊಂದು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಚಂದ್ರಗ್ರಹಣ ಸಂಭವಿಸಿದ 15 ದಿನಗಳ ಅವಧಿಯಲ್ಲಿ ಸೂರ್ಯಗ್ರಹಣ ಗೋಚರಿಸಲಿದ್ದು, ಇದು ಇಡೀ ಜಗತ್ತಿಗೆ ಹಾನಿಕಾರಕ ಎಂದು ಹೇಳುತ್ತಿದ್ದಾರೆ. ಆದರೆ ವೈಜ್ಞಾನಿಕವಾಗಿ ಈ ಬಗ್ಗೆ ಯಾವ ತಜ್ಞರೂ ಮಾಹಿತಿ ನೀಡಿಲ್ಲ.
ವರ್ಷದ ಮೊದಲ ಮೇ 26 ರಂದು ಚಂದ್ರಗ್ರಹಣವಾಗಿದ್ದು, ಜೂನ್ 10 ರಂದು ಸೂರ್ಯಗ್ರಹಣ ಸಂಭವಿಸಲಿದೆ. ಸಾಮಾನ್ಯವಾಗಿ ಎರಡು ಗ್ರಹಣಗಳ ನಡುವೆ ಕನಿಷ್ಠ 19 ದಿನಗಳ ಅಂತರವಿರುತ್ತದೆ. ಆದರೆ ಈ ಬಾರಿ 15 ದಿನಗಳ ಅಂತರದಲ್ಲೇ ಗ್ರಹಣ ಗೋಚಸಿರುವುರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಉತ್ತರ ಪ್ರದೇಶ ಮೂಲದ ಪಂಡಿತ್ ಪ್ರಸಾದ್ ದೀಕ್ಷಿತ್ ಜ್ಯೋತಿಶಾಚಾರ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಜೂನ್ 10ರಂದು ಗೋಚರವಾಗಲಿದೆ ವರ್ಷದ ಮೊದಲ ಸೂರ್ಯಗ್ರಹಣ
ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಮಾನವ ಜೀವನದ ಮೇಲೆ ದುಷ್ಪರಿಣಾಮ ಬೀರಲಿದೆ. ಪ್ರಪಂಚದಲ್ಲಿ ಗೊಂದಲದ ಪರಿಸ್ಥಿತಿ ಉಂಟಾಗುತ್ತದೆ. ಇದಕ್ಕೆ ಪರಿಹಾರವಾಗಿ ನಾವು ಜಪ ಮಾಡುವ ಅವಶ್ಯಕತೆಯಿದೆ. ಸೂರ್ಯನಿಗಾಗಿ 'ಓಂ ಘ್ರಿನಿ ಸೂರ್ಯಾಯ ನಮಃ' ಹಾಗೂ ಚಂದ್ರನಿಗಾಗಿ 'ಓಂ ಸೋಮ ಸೋಮ ನಮಃ' ಮಂತ್ರ ಪಠಣೆ ಮಾಡಿ ಎಂದು ಪಂಡಿತ್ ಪ್ರಸಾದ್ ದೀಕ್ಷಿತ್ ಹೇಳಿದ್ದಾರೆ.
'ರಿಂಗ್ ಆಫ್ ಫೈರ್'
ಜೂನ್ 10 ರಂದು 'ರಿಂಗ್ ಆಫ್ ಫೈರ್' ಸೂರ್ಯಗ್ರಹಣ ಸಂಭವಿಸಲಿದ್ದು, ಮಧ್ಯಾಹ್ನ 1: 42ರಿಂದ ಸಂಜೆ 6.41ರೊಳಗೆ ಗ್ರಹಣ ವೀಕ್ಷಿಸಬಹುದು. ಸೂರ್ಯನು 'ಬೆಂಕಿಯ ಉಂಗುರದಂತೆ' ಕಾಣಿಸಲಿದ್ದಾನೆ. ಭಾರತದ ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶದಲ್ಲಿ ಭಾಗಶಃ ಸೂರ್ಯಗ್ರಹಣ ಗೋಚರವಾಗಲಿದೆ. ಉತ್ತರ ಅಮೆರಿಕ, ಕೆನಡಾ, ಯುರೋಪ್ ಮತ್ತು ರಷ್ಯಾಗಳಲ್ಲಿ ಪೂರ್ಣ ಗ್ರಹಣವು ಗೋಚರವಾಗಲಿದೆ.