ETV Bharat / bharat

Operation Ajay: ಯುದ್ಧ ಪೀಡಿತ ಇಸ್ರೇಲ್‌ನಿಂದ ತಾಯ್ನಾಡಿಗೆ ಮರಳಿದ ಭಾರತದ 235 ಪ್ರಜೆಗಳ ಎರಡನೇ ಬ್ಯಾಚ್...

Israel Hamas War: ಇಸ್ರೇಲ್‌ನಿಂದ 212 ಭಾರತೀಯ ನಾಗರಿಕರ ಮೊದಲ ಬ್ಯಾಚ್​ ನಿನ್ನೆ(ಶುಕ್ರವಾರ) ಬೆಳಗ್ಗೆ ಬಂದಿತ್ತು. ಇಂದು (ಶನಿವಾರ) ಇಬ್ಬರು ಮಕ್ಕಳು ಸೇರಿದಂತೆ 235 ಭಾರತೀಯ ಪ್ರಜೆಗಳ ಎರಡನೇ ಬ್ಯಾಚ್ ಕೂಡ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದೆ.

Operation Ajay
Operation Ajay: ಯುದ್ಧ ಪೀಡಿತ ಇಸ್ರೇಲ್‌ನಿಂದ ತಾಯ್ನಾಡಿಗೆ ಮರಳಿದ ಭಾರತದ ಪ್ರಜೆಗಳ ಎರಡನೇ ಬ್ಯಾಚ್...
author img

By PTI

Published : Oct 14, 2023, 7:25 AM IST

Updated : Oct 14, 2023, 8:12 AM IST

ಜೆರುಸಲೇಂ/ ನವದೆಹಲಿ: ಇಸ್ರೇಲ್ ಹಾಗೂ ಹಮಾಸ್ ನಡುವೆ ಭೀಕರ ಯುದ್ಧ ಮುಂದುವರಿದಿದೆ. ಈ ಯುದ್ಧದಲ್ಲಿ ಅನೇಕ ದೇಶಗಳ ನಾಗರಿಕರು ಮೃತಪಟ್ಟಿದ್ದಾರೆ. ಭಾರತವು ಇಸ್ರೇಲ್‌ನಿಂದ ತನ್ನ ನಾಗರಿಕರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರಲು 'ಆಪರೇಷನ್ ಅಜಯ್' ಯಶಸ್ವಿಯಾಗಿ ನಡೆಯುತ್ತಿದೆ. ಈ ಸರಣಿಯ ಭಾಗವಾಗಿ ಇಸ್ರೇಲ್‌ನಿಂದ 212 ಭಾರತೀಯ ನಾಗರಿಕರ ಮೊದಲ ಬ್ಯಾಚ್​ ಶುಕ್ರವಾರ ಬೆಳಗ್ಗೆ ನವದೆಹಲಿ ವಿಮಾನ ನಿಲ್ದಾಣವನ್ನು ಬಂದಿಳಿದಿದ್ದರು. ಜೊತೆಗೆ ಇಸ್ರೇಲ್​ನಿಂದ ಇಬ್ಬರು ಮಕ್ಕಳು ಸೇರಿದಂತೆ 235 ಭಾರತೀಯ ಪ್ರಜೆಗಳ ಎರಡನೇ ಬ್ಯಾಚ್ ಇಂದು (ಶನಿವಾರ) ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದೆ.

  • #WATCH | MoS MEA Rajkumar Ranjan Singh interacts with the Indian nationals evacuated from Israel.

    The second flight carrying 235 Indian nationals from Israel, arrived in Delhi today. pic.twitter.com/vLPuN06F6X

    — ANI (@ANI) October 14, 2023 " class="align-text-top noRightClick twitterSection" data=" ">

235 ಭಾರತೀಯ ಪ್ರಜೆಗಳ ಎರಡನೇ ಬ್ಯಾಚ್: ಅಕ್ಟೋಬರ್ 7 ರಂದು ಗಾಜಾದಿಂದ ಹಮಾಸ್ ಹೋರಾಟಗಾರರು ಇಸ್ರೇಲಿ ಪಟ್ಟಣಗಳ ಮೇಲೆ ದಾಳಿ ನಡೆಸಿದ್ದರು. ಈ ಭೀಕರ ದಾಳಿಯ ನಂತರ ಸ್ವದೇಶಕ್ಕೆ ಮರಳಲು ಬಯಸುವವರಿಗೆ ಅನುಕೂಲವಾಗುವಂತೆ ಭಾರತ ಅಕ್ಟೋಬರ್​ 12ರಂದು 'ಆಪರೇಷನ್ ಅಜಯ್' ಅನ್ನು ಆರಂಭಿಸಲಾಗಿತ್ತು. 235 ಭಾರತೀಯ ಪ್ರಜೆಗಳ ಎರಡನೇ ಬ್ಯಾಚ್ ಅನ್ನು ಶುಕ್ರವಾರ ರಾತ್ರಿ ಇಸ್ರೇಲ್​ನಿಂದ ಸುರಕ್ಷಿತವಾಗಿ ಕಳುಹಿಸಲಾಗಿತ್ತು. ಭಾರತೀಯ ಕಾಲಮಾನ ರಾತ್ರಿ 11.02ಕ್ಕೆ ಇಸ್ರೇಲ್​​ನಿಂದ ವಿಮಾನ ಹಾರಿತು. ಜೊತೆಗೆ ಇಸ್ರೇಲ್​ನಲ್ಲಿ ಭಾರತೀಯ ಪ್ರಜೆಗಳ ಸ್ಥಳಾಂತರಿಸುವಿಕೆ ಪ್ರಕ್ರಿಯೆ ಇಂದು (ಶನಿವಾರ) ಮುಂದುವರಿಯುತ್ತದೆ ಎಂದು ಮೂಲಗಳು ತಿಳಿಸಿವೆ.

"ರಾಯಭಾರ ಕಚೇರಿಯು ಇಂದು ವಿಶೇಷ ವಿಮಾನದಲ್ಲಿ ದೇಶಕ್ಕೆ ಮರಳಲು ಬಯಸಿದ ಬಹಳಷ್ಟು ನೋಂದಾಯಿತ ಭಾರತೀಯ ನಾಗರಿಕರಿಗೆ ಇ-ಮೇಲ್ ಮಾಡಿದೆ. ಇತರ ನೋಂದಾಯಿತ ಭಾರತದ ಪ್ರಜೆಗಳಿಗೆ ಸಂದೇಶಗಳನ್ನು ಕಳುಹಿಸಲಾಗುವುದು" ಎಂದು ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಜಾಲತಾಣವಾದ ಎಕ್ಸ್​ನಲ್ಲಿ ಪೋಸ್ಟ್ ಮಾಡಿತ್ತು.

'ಆಪರೇಷನ್ ಅಜಯ್' ಕಾರ್ಯಕ್ರಮಕ್ಕೆ ಅಭಿನಂದನೆ: ಭಾರತ ಸರ್ಕಾರ 'ಆಪರೇಷನ್ ಅಜಯ್' ಕಾರ್ಯಕ್ರಮಕ್ಕೆ ಬಾರ್-ಇಲಾನ್ ವಿಶ್ವವಿದ್ಯಾಲಯದ ಸಂಶೋಧಕ ಸಫೆದ್ ಧನ್ಯವಾದ ಸಲ್ಲಿಸಿದ್ದಾರೆ. "ಇಸ್ರೇಲ್‌ನಲ್ಲಿನ ಯುದ್ಧದ ಪರಿಸ್ಥಿತಿಯಿಂದ ನಮ್ಮನ್ನು ಸ್ಥಳಾಂತರಿಸಿದ್ದಕ್ಕಾಗಿ ನಾನು ನಿಜವಾಗಿಯೂ ಭಾರತ ಸರ್ಕಾರಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ನಮ್ಮ ಸರ್ಕಾರವು 'ಆಪರೇಷನ್ ಅಜಯ್' ಅಡಿ ಅಂತಹ ಪರಿಸ್ಥಿತಿಯಿಂದ ನಮ್ಮನ್ನು ಸ್ಥಳಾಂತರಿಸಿದೆ'' ಎಂದು ಹೇಳಿದ್ದಾರೆ.

ಇಸ್ರೇಲ್‌ನಿಂದ ಭಾರತೀಯ ನಾಗರಿಕರಿಗೆ ಮರಳಲು ಅನುಕೂಲವಾಗುವಂತೆ ಮೊದಲ ಚಾರ್ಟರ್ ಫ್ಲೈಟ್ ಗುರುವಾರ ಸಂಜೆ, ಬೆನ್ ಗುರಿಯಾನ್ ವಿಮಾನ ನಿಲ್ದಾಣದಿಂದ ಮಕ್ಕಳು ಸೇರಿದಂತೆ ಒಟ್ಟು 212 ಜನರನ್ನು ಹೊತ್ತುಕೊಂಡು ಶುಕ್ರವಾರ ಬೆಳಗ್ಗೆ ಭಾರತದ ರಾಜಧಾನಿ ನವದೆಹಲಿ ತಲುಪಿತ್ತು. ಎರಡನೇ ಬ್ಯಾಚ್​ ನಿನ್ನೆ ರಾತ್ರಿ 11 ಗಂಟೆಗೆ ಇಸ್ರೇಲ್​ನಿಂದ ತೆರಳಿತ್ತು.

  • #WATCH | Various state governments have sent their representatives to Delhi airport as the second flight carrying 235 Indian nationals from Israel, arrived here today. pic.twitter.com/kuhAMjZWHg

18,000 ಭಾರತೀಯ ಪ್ರಜೆಗಳು ಇಸ್ರೇಲ್‌ನಲ್ಲಿ ವಾಸ: ನೋಂದಾಯಿಸಿದ ಪ್ರಯಾಣಿಕರನ್ನು "ಮೊದಲಿಗೆ ಬಂದವರಿಗೆ ಮೊದಲ ಸೇವೆ" ಆಧಾರದ ಮೇಲೆ ಆಯ್ಕೆ ಮಾಡಲಾಯಿತು. ಅವರ ವಾಪಸಾತಿ ವೆಚ್ಚವನ್ನು ಸರಕಾರವೇ ಭರಿಸುತ್ತಿದೆ. ಕೇರ್​ಟೇಕರ್, ವಿದ್ಯಾರ್ಥಿಗಳು, ಐಟಿ ವೃತ್ತಿಪರರು ಮತ್ತು ವಜ್ರದ ವ್ಯಾಪಾರಿಗಳು ಸೇರಿದಂತೆ ಸುಮಾರು 18,000 ಭಾರತೀಯ ಪ್ರಜೆಗಳು ಇಸ್ರೇಲ್‌ನಲ್ಲಿ ವಾಸಿಸುತ್ತಿದ್ದಾರೆ, ಜೊತೆಗೆ ಕೆಲಸ ಮಾಡುತ್ತಿದ್ದಾರೆ.

ಹಮಾಸ್ ನಡೆಸಿದ ದಾಳಿಯಿಂದ ಇಸ್ರೇಲ್‌ನಲ್ಲಿ 1,300ಕ್ಕೂ ಹೆಚ್ಚು ಜನರನ್ನು ಮೃತಪಟ್ಟಿದ್ದಾರೆ. ಇಸ್ರೇಲ್​ನ ಪ್ರತಿಯಾಗಿ ನಡೆಸಿದ ವೈಮಾನಿಕ ದಾಳಿಯಿಂದಲೂ ಗಾಜಾದಲ್ಲಿ 1,530ಕ್ಕೂ ಹೆಚ್ಚು ಜನರ ಸಾವನ್ನಪ್ಪಿದ್ದಾರೆ. ''ಇಸ್ರೇಲ್‌ನಲ್ಲಿ ಸುಮಾರು 1,500 ಹಮಾಸ್ ಹೋರಾಟಗಾರನ್ನು ಹತ್ಯೆ ಮಾಡಲಾಗಿದೆ'' ಎಂದು ಇಸ್ರೇಲ್ ಹೇಳಿದೆ.

ಇದನ್ನೂ ಓದಿ: ಆಪರೇಷನ್ ಅಜಯ್: ಇಸ್ರೇಲ್​​​ನಿಂದ ದೆಹಲಿಗೆ ಬಂದಿಳಿದ​ 212 ಭಾರತೀಯರನ್ನು ಹೊತ್ತ ತಂದ ಮೊದಲ ವಿಮಾನ

Last Updated : Oct 14, 2023, 8:12 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.