ಸ್ಯಾನ್ ಫ್ರಾನ್ಸಿಸ್ಕೋ( ಅಮೆರಿಕ): ಗೂಗಲ್‌ನಲ್ಲಿ ಲೈಂಗಿಕ ವಿಷಯಗಳಿಗೆ ಸಂಬಂಧಸಿದಂತೆ 2004 ರಿಂದ 2023ರ ವರೆಗೆ 1,300 ಪ್ರತಿಶತದಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ವರದಿಯೊಂದರಿಂದ ಬಹಿರಂಗವಾಗಿದೆ. ಈ ಕುರಿತು ವಿಶೇಷವಾದ ವರದಿಯೊಂದರಿಂದ ಈ ಮಾಹಿತಿ ಹೊರ ಬಿದ್ದಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆಯಾದ ಕಲ್ಚರಲ್ ಕರೆಂಟ್ಸ್ ಇನ್‌ಸ್ಟಿಟ್ಯೂಟ್ ಪ್ರಕಟಿಸಿದ ಸಂಶೋಧನೆಗಳ ವರದಿ ಪ್ರಕಾರ, ಅಮೆರಿಕದಲ್ಲಿ ಲೈಂಗಿಕ ದೃಷ್ಟಿಕೋನ ಮತ್ತು ಲಿಂಗ ಗುರುತಿಸುವಿಕೆಗೆ ಸಂಬಂಧಿಸಿದ ಪ್ರಶ್ನೆಗಳಿಗಾಗಿ ಜನವರಿ 2004 ರಿಂದ ಮೇ 2023 ರವರೆಗಿನ ಎಲ್ಲ ಡೇಟಾವನ್ನು ಸಂಗ್ರಹಿಸಿ ಈ ಅಂಕಿ- ಅಂಶಗಳನ್ನು ಸಂಗ್ರಹಿಸಿ ವರದಿ ತಯಾರಿಸಿದೆ.
ಇದನ್ನೂ ಓದಿ : 64,500 ಲೊಕೇಶನ್ ನಮೂದಿಸಿದ ಯುವಕನಿಗೆ ಒಲಿದ ಗೂಗಲ್ ವಿಶೇಷ ಗೌರವ
ಅಮೆರಿಕ ದೇಶದಲ್ಲಿ ಐ ಆಮ್ ಗೇ, ಐ ಆಮ್ ಲೆಸ್ಬಿಯನ್, ಐ ಆಮ್ ಟ್ರಾನ್ಸ್, ಹೌ ಟು ಕಮ್ ಔಟ್ ಮತ್ತು ನಾನ್ ಬೈನರಿ ಎಂಬ ಸರ್ಚ್ ಟ್ರೆಂಡ್‌ಗಳು ಗೂಗಲ್‌ನಲ್ಲಿ ಅತಿ ಹೆಚ್ಚು ಕಂಡು ಬಂದಿವೆ. ಕಲ್ಚರಲ್ ಕರೆಂಟ್ಸ್ ಇನ್‌ಸ್ಟಿಟ್ಯೂಟ್ ಪ್ರಕಟಿಸಿದ ಸಂಶೋಧನೆಗಳ ವರದಿ ಪ್ರಕಾರ, ಸಾಂಪ್ರದಾಯಿಕವಾಗಿ ಸಾಮಾಜಿಕ ಮೌಲ್ಯಗಳನ್ನು ಹೊಂದಿರುವ ಅಮೆರಿಕ ರಾಷ್ಟ್ರದ ರಾಜ್ಯವಾದ ಯೂಟದಲ್ಲಿ, ಕಳೆದ ವರ್ಷದ ಮೇ ತಿಂಗಳಿನಿಂದ ಆಮ್ ಐ ಗೇ, ಆಮ್ ಲೆಸ್ಬಿಯನ್ ಮತ್ತು ಆಮ್ ಟ್ರಾನ್ಸ್ ಎಂಬ ಮೂರು ಹುಡುಕಾಟ ಪದಗಳು ಅಗ್ರಸ್ಥಾನದಲ್ಲಿವೆ.
ಇದನ್ನೂ ಓದಿ : ಸೈಬರ್ ವಂಚಕರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದ್ದರೆ ಏನು ಮಾಡಬೇಕು ಗೊತ್ತಾ? ಇಲ್ಲಿದೆ ಮಾಹಿತಿ
ಸಾರ್ವಜನಿಕ ಜೀವನ ಮತ್ತು ವೆಬ್ ಹುಡುಕಾಟಗಳ ನಡುವಿನ ಈ ಉದ್ವಿಗ್ನತೆಗಳು ಯೂಟ ರಾಜ್ಯದಲ್ಲಿ ಸಾಮಾನ್ಯವಾಗಿದೆ. ಅಲ್ಲಿನ ರಾಜ್ಯ ಸರ್ಕಾರವು ಪೋರ್ನ್‌ಹಬ್ ಅನ್ನು ನಿರ್ಬಂಧಿಸಿದ ನಂತರ 'ವಿಪಿಎನ್' ಗಾಗಿ ಹುಡುಕಾಟಗಳಲ್ಲಿ ತೀವ್ರ ಪ್ರಮಾಣದ ಹೆಚ್ಚಳವನ್ನು ತೋರಿಸುವ ಡೇಟಾವನ್ನು ಇತ್ತೀಚೆಗೆ ಸಂಗ್ರಹಿಸಿರುವ ವರದಿಯು ಬಹಿರಂಗ ಪಡಿಸಿದೆ. ಈ ವರದಿ ಮೇಲೆ ಈಗ ಸಾಕಷ್ಟು ಚರ್ಚೆ ಕೂಡಾ ಆಗುತ್ತಿದೆ.
ಇದರ ಜೊತೆಗೆ, ಅಮೆರಿಕದ ಮತ್ತೊಂದು ರಾಜ್ಯವಾದ ಒಕ್ಲಹೋಮಾದಲ್ಲಿ ಕಳೆದ ವರ್ಷದಲ್ಲಿ 'ಹೌ ಟು ಕಮ್ ಔಟ್' ಎಂಬ ಪದವನ್ನು ಅತಿ ಹೆಚ್ಚು ಗೂಗಲ್‌ನಲ್ಲಿ ಹುಡುಕಾಟ ನಡೆಸಿರುವುದರ ಬಗ್ಗೆ ವರದಿ ಆಗಿರುವುದನ್ನು ಗಮನಿಸಬೇಕಾಗಿದೆ. ಈ ರಾಜ್ಯದ ನಂತರ ವೆಸ್ಟ್ ವರ್ಜೀನಿಯಾ, ಮಿಸ್ಸಿಸ್ಸಿಪ್ಪಿ, ಲೂಯಿಸಿಯಾನ ಮತ್ತು ಕೆಂಟುಕಿ ರಾಜ್ಯಗಳಲ್ಲಿ ಇಂತಹದ್ದೇ ಹಾಗೂ ರಿಲೇಷನ್ ಶಿಪ್ ಸಂಬಂಧಿತ ಹುಟುಕಾಟಗಳ ಬಗ್ಗೆ ಹೆಚ್ಚು ಸರ್ಚ್ ಮಾಡಲಾಗಿದೆ. ಆದರೆ ಕೆಂಟುಕಿ ರಾಜ್ಯ ಮಾತ್ರ ಎರಡನೇ ಸ್ಥಾನದಲ್ಲಿದೆ. ಗೂಗಲ್‌ನಲ್ಲಿ ‘ನಾನ್‌ಬೈನರಿ’ ಪದದ ಹುಡುಕಾಟ ಸೀಮಿತವಾಗಿದೆ. ಆದರೆ ಹುಡುಕಾಟವು ಹೆಚ್ಚುತ್ತಿದೆ ಎಂದು ವರದಿ ಹೇಳುತ್ತದೆ. ವರ್ಮೊಂಟ್ ಪದವು ಕಳೆದ ಮೇ ತಿಂಗಳಿನಿಂದ ಹೆಚ್ಚಿನ ಹುಡುಕಾಟಗಳನ್ನು ಹೊಂದಿದೆ.
ಇದನ್ನೂ ಓದಿ : ಲಾವಾ Agni-2 5G ಭಾರತದಲ್ಲಿ ಲಾಂಚ್: ಬೆಲೆ ಎಷ್ಟು ಗೊತ್ತಾ?.. ಏನೇನು ಡಿಸ್ಕೌಂಟ್ ತಿಳಿದುಕೊಳ್ಳಿ!