ETV Bharat / bharat

ಚುನಾವಣಾ ಆಯುಕ್ತರ ನೇಮಕಕ್ಕೆ ಸಮಿತಿ ರಚಿಸಿ ಸುಪ್ರೀಂಕೋರ್ಟ್​ ಆದೇಶ

ಚುನಾವಣಾ ಆಯೋಗದ ಮುಖ್ಯ ಆಯುಕ್ತರ ನೇಮಕದಲ್ಲಿ ಮಹತ್ತರ ಬದಲಾವಣೆ- ನೇಮಕಕ್ಕೆ ಕೇಂದ್ರ ಸರ್ಕಾರದ ಬದಲಾಗಿ, ಸಮಿತಿ ರಚನೆ - ಸುಪ್ರೀಂಕೋರ್ಟ್​ ಆದೇಶ

ಚುನಾವಣಾ ಆಯುಕ್ತರ ನೇಮಕ
ಚುನಾವಣಾ ಆಯುಕ್ತರ ನೇಮಕ
author img

By

Published : Mar 2, 2023, 12:54 PM IST

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರ ನೇಮಕ ಮಾಡಲು ಸಮಿತಿ ರಚಿಸಿ ಸುಪ್ರೀಂಕೋರ್ಟ್​ ಆದೇಶ ಹೊರಡಿಸಿದೆ. ಸಮಿತಿಯು ಪ್ರಧಾನಮಂತ್ರಿ, ಲೋಕಸಭೆ ಪ್ರತಿಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡಿರುತ್ತದೆ. ಮೂವರ ಶಿಫಾರಸಿನ ಮೇರೆಗೆ ಆಯುಕ್ತರ ನೇಮಕವಾಗಬೇಕು ಎಂದು ಸಾಂವಿಧಾನಿಕ ಪೀಠ ಗುರುವಾರ ಹೇಳಿದೆ. ನ್ಯಾಯಮೂರ್ತಿ ಕೆಎಂ ಜೋಸೆಫ್ ನೇತೃತ್ವದ ಪಂಚಪೀಠದಲ್ಲಿ ನ್ಯಾ.ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ ಟಿ ರವಿಕುಮಾರ್ ಅವರು ಇದ್ದರು.

ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಕೊಲಿಜಿಯಂ ಸ್ವರೂಪದ ವ್ಯವಸ್ಥೆ ಇರಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾ. ಕೆಎಂ ಜೋಸೆಫ್​ ನೇತೃತ್ವದ ಐವರು ಸದಸ್ಯರ ಪೀಠ ಸಮಿತಿಯೊಂದನ್ನು ರೂಪಿಸಿದೆ. ಮುಕ್ತ ಮತ್ತು ನ್ಯಾಯಸಮ್ಮತ ಆಯೋಗಕ್ಕಾಗಿ ಆಯುಕ್ತರ ನೇಮಕ ಪಾರದರ್ಶಕವಾಗಿರಬೇಕು. ಆಯೋಗ ಸ್ವತಂತ್ರವಾಗಿ ಕೆಲಸ ಮಾಡಬೇಕು ಎಂದು ಪೀಠ ಇದೇ ವೇಳೆ ಹೇಳಿದೆ.

ಪ್ರಜಾಪ್ರಭುತ್ವವು ಜನರ ಒಳಗೊಂಡ ಬೇರ್ಪಡಿಸಲಾಗದಂತಹ ಸಂಬಂಧ ಹೊಂದಿದೆ. ಮತದಾನದ ಶಕ್ತಿಯು ಸರ್ವೋಚ್ಚವಾಗಿದೆ. ಅತ್ಯಂತ ಶಕ್ತಿಶಾಲಿ ಪಕ್ಷಗಳನ್ನು ಸೋಲಿಸಲು ಇರುವ ಅಸ್ತ್ರವಾಗಿದೆ. ಮುಖ್ಯ ಚುನಾವಣಾ ಆಯುಕ್ತರಂತೆಯೇ ಆಯುಕ್ತರ ನೇಮಕವನ್ನೂ ಮಾಡಬೇಕು. ಅದನ್ನು ಸಮಿತಿ ಸದಸ್ಯರೇ ಶಿಫಾರಸು ಮಾಡಬೇಕು ಎಂದು ಪೀಠ ತೀರ್ಪಿನಲ್ಲಿ ಹೇಳಿದೆ.

ಅರ್ಜಿಗಳ ತಕರಾರೇನು?: ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕದಲ್ಲಿ ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದೆ. ಇದು ಮುಕ್ತ ಚುನಾವಣೆಗೆ ಅಡ್ಡಿಯಾಗಲಿದೆ. ಹೀಗಾಗಿ ಆಯುಕ್ತರ ನೇಮಕಕ್ಕೆ ನ್ಯಾಯಾಧೀಶರ ನೇಮಕಕ್ಕೆ ಇರುವ ಕೊಲಿಜಿಯಂ ಮಾದರಿ ಸಮಿತಿ ರಚಿಸಬೇಕು ಎಂದು ಕೋರಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಸಿಬಿಐ ನಿರ್ದೇಶಕ ಅಥವಾ ಲೋಕಪಾಲರ ನೇಮಕಾತಿಗಿಂತ ಆಯುಕ್ತರ ನೇಮಕ ಭಿನ್ನವಾಗಿದೆ. ಇದು ಏಕನಿರ್ಧಾರವಾಗಿರಬಾರದು ಎಂದು ಅರ್ಜಿದಾರರ ಆಕ್ಷೇಪನೆಯಾಗಿತ್ತು.

ಸರ್ವಾನುಮತದ ತೀರ್ಪು: ಆಯುಕ್ತರ ನೇಮಕ ಸಮಿತಿ ರಚನೆಗೆ ಕೋರಿದ್ದ ಅರ್ಜಿಗಳ ವಿಚಾರಣೆಗಾಗಿ ರೂಪಿಸಲಾಗಿದ್ದ ಐವರು ಸದಸ್ಯರ ಪೀಠ ಸರ್ವಾನುಮತದಿಂದ ತೀರ್ಪು ನೀಡಿದೆ. ಈ ನೇಮಕಾತಿಗಳಿಗೆ ಸಂಸತ್ತು ಕಾನೂನು ರೂಪಿಸುವವರೆಗೆ ಈ ನಿಯಮ ಜಾರಿಯಲ್ಲಿರುತ್ತದೆ ಎಂದು ಸುಪ್ರೀಂಕೋರ್ಟ್​ ಹೇಳಿದೆ. ಮೂವರು ಸದಸ್ಯರಿರುವ ಸಮಿತಿ ಶಿಫಾರಸು ಮಾಡಿದಂತೆ ಮುಖ್ಯ ಚುನಾವಣಾ ಆಯಕ್ತರು ಅಥವಾ ಆಯುಕ್ತರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ ಎಂದು ಹೇಳಿದೆ.

ಈಗ ಆಯ್ಕೆ ಪ್ರಕ್ರಿಯೆ ಹೇಗಿದೆ: ಈಗ ಚಾಲ್ತಿಯಲ್ಲಿರುವ ವ್ಯವಸ್ಥೆಯಲ್ಲಿ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿ ದರ್ಜೆಯ ಅಧಿಕಾರಿಗಳನ್ನು ಮುಖ್ಯ ಚುನಾವಣಾ ಆಯುಕ್ತ ಮತ್ತು ಆಯುಕ್ತರನ್ನಾಗಿ ನೇಮಕ ಮಾಡುವಂತೆ ಕೇಂದ್ರ ಸಚಿವ ಸಂಪುಟ ಶಿಫಾರಸು ಮಾಡುತ್ತದೆ. ಈ ಶಿಫಾರಸಿನಂತೆ ರಾಷ್ಟ್ರಪತಿಗಳು ಆಯುಕ್ತರನ್ನು ನೇಮಕ ಮಾಡಿ ಆದೇಶಿಸುತ್ತಾರೆ.

ಓದಿ: ಜಾಗತಿಕ ಸಮಸ್ಯೆಗಳಿಗೆ ಜಿ20 ಪರಿಹಾರವಾಗಲಿ: ಪ್ರಧಾನಿ ನರೇಂದ್ರ ಮೋದಿ ಆಶಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.