ETV Bharat / bharat

ಬಂಜೆತನಕ್ಕೆ ಕಾರಣ ಸೊಸೆಯೋ, ಅತ್ತೆಯೋ?: ಹೊಸ ವಿಷಯ ಬಹಿರಂಗ ಪಡಿಸಿದ ವಿಜ್ಞಾನಿಗಳು! - ಡಿಎನ್‌ಎ ಕುರಿತ ಉಪನ್ಯಾಸ

ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಡಿಎನ್‌ಎ ಕುರಿತ ಉಪನ್ಯಾಸ ಸಮ್ಮೇಳನ ನಡೆಯುತ್ತಿದ್ದು, ಇದರಲ್ಲಿ ಬಂಜೆತನದ ಕುರಿತಂತೆ ಸಿಸಿಎಂಬಿ ನಿರ್ದೇಶಕ ಪ್ರೊ.ಕೆ.ತಂಗರಾಜ್​ ಮಾತನಾಡಿದ್ದಾರೆ.

scientists-claim-that-not-daughter-in-law-but-mother-in-law-responsible-for-infertility
ಬಂಜೆತನಕ್ಕೆ ಕಾರಣ ಸೊಸೆಯೋ, ಅತ್ತೆಯೋ?: ಹೊಸ ವಿಷಯ ಬಹಿರಂಗ ಪಡಿಸಿದ ವಿಜ್ಞಾನಿಗಳು!
author img

By

Published : Mar 11, 2023, 9:56 PM IST

ಬಂಜೆತನಕ್ಕೆ ಕಾರಣ ಸೊಸೆಯೋ, ಅತ್ತೆಯೋ?: ಹೊಸ ವಿಷಯ ಬಹಿರಂಗ ಪಡಿಸಿದ ವಿಜ್ಞಾನಿಗಳು!

ವಾರಾಣಸಿ (ಉತ್ತರ ಪ್ರದೇಶ): ಮಕ್ಕಳಾಗದ ಮತ್ತು ಬಂಜೆತನದ ಕುರಿತಂತೆ ಸಮಾಜದಲ್ಲಿ ಆಗ್ಗಾಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಲೇ ಇರುತ್ತದೆ. ಎಷ್ಟೇ ವೈದ್ಯಕೀಯ ತಪಾಸಣೆಗಳಿಗೆ ಒಳಗಾದರೂ ಕೆಲ ದಂಪತಿಗಳಿಗೆ ಮಕ್ಕಳು ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ ಚರ್ಚೆಗೆ ಬರುವ ಅಂಶವೇ ಬಂಜೆತನಕ್ಕೆ ಕಾರಣ ಮಹಿಳೆಯೋ ಅಥವಾ ಪುರುಷನೋ ಎಂಬುವುದು. ಈ ವೇಳೆ ಹೆಚ್ಚಿನ ಸಂದರ್ಭದಲ್ಲಿ ಮಹಿಳೆ ಎಂದರೆ ಮದುವೆಯಾಗಿ ಮನೆಗೆ ಬಂದ ಸೊಸೆಯನ್ನೇ ದೂಷಿಸಲಾಗುತ್ತದೆ. ಆದರೆ, ಇದೀಗ ಹೊಸ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ: ಕೋವಿಡ್​ ಲಸಿಕೆಗಳು ಬಂಜೆತನಕ್ಕೆ ಕಾರಣವಾ?: ಆರೋಗ್ಯ ಇಲಾಖೆ ಸ್ಪಷ್ಟನೆ ಹೀಗಿದೆ

ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು)ದಲ್ಲಿ ಮೂರು ದಿನಗಳ ಡಿಎನ್‌ಎ ಡಿಫೆನ್ಸ್ ಮೆಕ್ಯಾನಿಸಂ ಆಧಾರಿತ ಅಡ್ನೆಟ್ 2023ರ ಸಮ್ಮೇಳನ ಆಯೋಜಿಸಲಾಗಿದೆ. ಶನಿವಾರ ಎರಡನೇ ದಿನದ ಸಮ್ಮೇಳನದಲ್ಲಿ ಬಂಜೆತನ ವಿಷಯಕ್ಕೆ ಸಂಬಂಧಿಸಿದಂತೆ ಹೈದರಾಬಾದ್​ನ​ ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಬಯಾಲಜಿ ಸೆಂಟರ್​ (Centre for Cellular and Molecular Biology - CCMB) ನಿರ್ದೇಶಕ ಪ್ರೊ.ಕೆ.ತಂಗರಾಜ್​ ಮಾತನಾಡಿದರು.

ಬಂಜೆತನ ಕುರಿತು ಹೇಳಿದ್ದೇನು?: ಬಂಜೆತನ ಬಗ್ಗೆ ಪ್ರೊ.ಕೆ.ತಂಗರಾಜ್ ಮಾಡಿದ ಭಾಷಣ ಕುರಿತ ಬಿಎಚ್‌ಯು ವಿಜ್ಞಾನಿ ಪ್ರೊ.ಜ್ಞಾನೇಂದ್ರ ಚೌಬೆ ವಿವರಣೆ ನೀಡಿದ್ದಾರೆ. ನಮ್ಮ ಸಮಾಜದಲ್ಲಿ ಮಕ್ಕಳಾಗದಿರಲು ಸೊಸೆಯನ್ನೇ ಹೊಣೆಗಾರರನ್ನಾಗಿಸಲಾಗುತ್ತದೆ. ಆದರೆ, ಅದು ಹಾಗಲ್ಲ. ಸುಮಾರು 90 ಪ್ರತಿಶತ ಪ್ರಕರಣಗಳಲ್ಲಿ ಸಂತಾನಹೀನತೆಗೆ ಹುಡುಗನ ತಾಯಿ ಹೆಚ್ಚು ಕಾರಣ ಎಂಬುವುದಾಗಿ ಸಂಶೋಧನೆಯು ಬಹಿರಂಗಪಡಿಸಿದೆ. ಹೀಗಾಗಿ ಬಂಜೆತನಕ್ಕೆ ಸೊಸೆಗಿಂತ ಹುಡುಗನ ತಾಯಿ ಹೆಚ್ಚು ಜವಾಬ್ದಾರರಾಗಬಹುದು ಎಂದು ಪ್ರೊ. ತಂಗರಾಜ್​ ಮಾಹಿತಿ ನೀಡಿದರು ಅಂತಾ ಜ್ಞಾನೇಂದ್ರ ಚೌಬೆ ಹೇಳಿದರು.

ಇದನ್ನೂ ಓದಿ: ಮಹಿಳೆಯರ ಗರ್ಭಧಾರಣೆ ವೈಫಲ್ಯಕ್ಕೆ ಪುರುಷ ಬಂಜೆತನವೂ ಪ್ರಮುಖ ಕಾರಣ

ಮುಂದುವರೆದು, ತಂಗರಾಜ್ ತಮ್ಮ ಭಾಷಣದಲ್ಲಿ ಮೈಟೊಕಾಂಡ್ರಿಯದ ಡಿಎನ್‌ಎ ಸಮಸ್ಯೆಯಿಂದ ಉಂಟಾಗುವ ಬಂಜೆತನವು ತಾಯಂದಿರಿಂದ ಅವರ ಮಕ್ಕಳಿಗೆ ಹರಡುತ್ತದೆ ಎಂದು ಪ್ರತಿಪಾದಿಸಿದರು. ಅಲ್ಲದೇ, ಈ ಸಮಸ್ಯೆಗೆ ಮತ್ತೊಂದು ಕಾರಣವೆಂದರೆ ಆಟೋಸೋಮ್. ಆಟೋಸೋಮ್​ಗಳ ಈ ಸಮಸ್ಯೆಯು ತಾಯಿಯಿಂದ ಮಗನಿಗೆ ಸಹ ಹರಡುತ್ತದೆ. ಇದುವರೆಗೆ ಇಂತಹ ಒಂಭತ್ತು ವಂಶವಾಹಿಗಳನ್ನು ಗುರುತಿಸಲಾಗಿದೆ. ಆದ್ದರಿಂದ ಬಂಜೆತನಕ್ಕೆ ಹೆಚ್ಚಾಗಿ ತಾಯಂದಿರಿಂದ ಅವರ ಪುತ್ರರು ಕಾರಣವಾಗುತ್ತಾರೆ ಎಂದು ತಿಳಿಸಿದರು.

ಇಟಲಿಯ ವಿಜ್ಞಾನಿ ಪ್ರೊ.ಅಲೆಕ್ಸಾಂಡ್ರೊ ಕೂಡ ತಮ್ಮ ಸಂಶೋಧನೆಗೆ ಸಂಬಂಧಿಸಿದಂತೆ ಉಪನ್ಯಾಸ ನೀಡಿ, 65 ಸಾವಿರ ವರ್ಷಗಳ ಹಿಂದೆ ಆಫ್ರಿಕಾದಿಂದ ಮಾನವರು ಹೊರಹೊಮ್ಮಿದ್ದರೂ, ಅಮೆರಿಕವನ್ನು ತಲುಪಲು 48 ಸಾವಿರ ವರ್ಷಗಳು ಬೇಕಾಯಿತು ಎಂದರು. ಈ ಮೂರು ದಿನಗಳ ಸಮ್ಮೇಳನದಲ್ಲಿ ಭಾರತ ಸೇರಿದಂತೆ 15 ರಾಷ್ಟ್ರಗಳ ವಿಜ್ಞಾನಿಗಳು ಭಾಗವಹಿಸಿದ್ದಾರೆ. ಸಾಂಕ್ರಾಮಿಕ ಮತ್ತು ಜೀನ್ ಅನುಕ್ರಮವನ್ನು ಆಧರಿಸಿ ಹಲವು ಉಪನ್ಯಾಸಗಳನ್ನು ವಿಜ್ಞಾನಿಗಳು ಮಂಡಿಸುತ್ತಿದ್ದಾರೆ.

ಇದನ್ನೂ ಓದಿ: ಏನಿದು ಅಚ್ಚರಿ..! ಎರಡು ಜೈವಿಕ ತಂದೆಗಳಿರುವ ಇಲಿಮರಿ ಅಭಿವೃದ್ಧಿಪಡಿಸಿದ ಜಪಾನ್ ವಿಜ್ಞಾನಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.