ಇಂದೋರ್: ಕೊರೊನಾ ವಿರುದ್ಧ ರಕ್ಷಣೆಗಾಗಿ ವೈದಿಕ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಮಧ್ಯಪ್ರದೇಶ ಸಂಸ್ಕೃತಿ ಸಚಿವೆ ಉಷಾ ಠಾಕೂರ್ ಹೇಳಿದ್ದಾರೆ.
ಮನೆಯನ್ನು 12 ಗಂಟೆಗೆ ಒಮ್ಮೆ ಹಸುವಿನ ಸಗಣಿಯಿಂದ ಸ್ವಚ್ಛ ಗೊಳಿಸಿ, ಇದರಿಂದ ಕೊರೊನಾ ವಿರುದ್ಧ ರಕ್ಷಣೆ ಪಡೆಯಬಹುದು ಎಂದಿದ್ದಾರೆ.
"ಕೋವಿಡ್-19 ಎದುರಿಸಲು, ಅಲೋಪತಿಯೊಂದಿಗೆ ವೈದಿಕ ಜೀವನಶೈಲಿಯು ತನ್ನದೇ ಆದ ಪಾತ್ರವನ್ನು ವಹಿಸುತ್ತದೆ. ಸಾಂಕ್ರಾಮಿಕ ರೋಗದಿಂದ ಮುಕ್ತಿಗೊಳ್ಳಲು ನಾವು ವೇದ ಜೀವನಶೈಲಿಗೆ ಮರಳಬೇಕಾಗಿದೆ " ಎಂದು ಠಾಕೂರ್ ಹೇಳಿದರು.
ಓದಿ : ಇಲ್ಲಿನ ಓಣಿಗಳಲ್ಲಿ ಕೇಳುವುದು ಕದನಗಳ ಕಥೆ.. ಇದು ವೀರ ಕಲಿಗಳು ಜನಿಸಿದ ಪುಣ್ಯಭೂಮಿ
"ಹಸುವಿನ ಹಾಲಿನಿಂದ ಮಾಡಿದ ತುಪ್ಪವನ್ನು ಅನ್ನದೊಂದಿಗೆ ಬೆರೆಸಿ ತಿನ್ನಿ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಹಸುವಿನ ಸಗಣಿಯಿಂದ ಮನೆಯನ್ನ ಸ್ವಚ್ಛಗೊಳಿಸಿ" ಎಂದು ಅವರು ಹೇಳಿದ್ದಾರೆ. ನನ್ನ ಸಲಹೆ ಜನರಿಗೆ ವಿಚಿತ್ರವಾಗಿ ಕಾಣಿಸಬಹುದು, ಆದರೆ ಇದು "ಇದು ವಿಜ್ಞಾನ ...," ಮನೆಗಳನ್ನು ಸ್ವಚ್ಛ ಗೊಳಿಸುವ ಈ ಸಲಹೆ ಕಾಲ್ಪನಿಕವಲ್ಲ ಎಂದು ಅವರು ತಮ್ಮ ಹೇಳಿಕೆಗೆ ಸಮರ್ಥನೆಯನ್ನೂ ಕೊಟ್ಟಿದ್ದಾರೆ.