ETV Bharat / bharat

ರಾಜಸ್ಥಾನದಲ್ಲಿ ಲಾಕ್‌ಡೌನ್ ತರಹದ ನಿರ್ಬಂಧ.. ಮೇ 3 ರ ವರೆಗೆ ಶಾಲೆಗಳು ಬಂದ್​

author img

By

Published : Apr 19, 2021, 11:40 AM IST

ಕೋವಿಡ್​ ಭೀತಿ ಹಿನ್ನೆಲೆ ರಾಜಸ್ಥಾನದಲ್ಲಿ ಶಾಲೆಗಳನ್ನು ಮುಚ್ಚಲಾಗಿದ್ದು, ಶಿಕ್ಷಕರಿಗೆ ವರ್ಕ್​ ಫ್ರಮ್ ಹೋಮ್​ ನೀಡಲಾಗಿದೆ. ಅಲ್ಲದೇ ರಾಜಸ್ಥಾನ ಸರ್ಕಾರವು ಇಂದಿನಿಂದ 15 ದಿನಗಳವರೆಗೆ ಕಚೇರಿಗಳು ಮತ್ತು ಮಾರುಕಟ್ಟೆಗಳನ್ನು ಮುಚ್ಚುವುದು ಸೇರಿದಂತೆ ಹೊಸ ನಿರ್ಬಂಧಗಳನ್ನು ಪ್ರಕಟಿಸಿದೆ.

Lockdown like curbs in Rajasthan news
ರಾಜಸ್ಥಾನದಲ್ಲಿ ಲಾಕ್‌ಡೌನ್ ತರಹದ ನಿರ್ಬಂಧ

ಜೈಪುರ (ರಾಜಸ್ಥಾನ): ಕೊರೊನಾ ಎರಡನೇ ಅಲೆ ಆತಂಕದ ಹಿನ್ನೆಲೆ ಮೇ 3 ರ ವರೆಗೆ ಶಾಲೆಗಳನ್ನು ಬಂದ್​ ಮಾಡುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಮಾರ್ಗಸೂಚಿಯ ಪ್ರಕಾರ, ಮನೆಯಿಂದ ಕೆಲಸ ಮಾಡಲು ಶಿಕ್ಷಕರಿಗೆ ಸೂಚಿಸಲಾಗಿದ್ದು, ವರ್ಕ್​ ಫ್ರಮ್​ ಹೋಮ್​ ನೀಡಲಾಗಿದೆ. ಇದರ ಜತೆ ಶಿಕ್ಷಕರು ಕೊರೊನಾ ವಾರಿಯರ್ಸ್​ ಆಗಿಯೂ ಕಾರ್ಯ ನಿರ್ವಹಿಸಬೇಕಿದೆ. ಶಿಕ್ಷಣ ಇಲಾಖೆ ನಿರ್ದೇಶಕ ಸೌರಭ್ ಸ್ವಾಮಿ ಈ ಆದೇಶ ಹೊರಡಿಸಿದ್ದಾರೆ.

Schools were closed till 3 may in Rajasthan
ಆದೇಶ ಪ್ರತಿ

ರಾಜಸ್ಥಾನದಲ್ಲಿ ಲಾಕ್‌ಡೌನ್ ತರಹದ ನಿರ್ಬಂಧಗಳು: ಏನಿರುತ್ತೆ? ಏನಿರಲ್ಲ?

ಕೊರೊನಾ ವೈರಸ್‌ ಪ್ರಕರಣಗಳ ಬಗ್ಗೆ ಆತಂಕಗೊಂಡ ರಾಜಸ್ಥಾನ ಸರ್ಕಾರವು ರೋಗ ಹರಡುವುದನ್ನು ತಡೆಗಟ್ಟಲು ಇಂದಿನಿಂದ 15 ದಿನಗಳವರೆಗೆ ಕಚೇರಿಗಳು ಮತ್ತು ಮಾರುಕಟ್ಟೆಗಳನ್ನು ಮುಚ್ಚುವುದು ಸೇರಿದಂತೆ ಹೊಸ ನಿರ್ಬಂಧಗಳನ್ನು ಪ್ರಕಟಿಸಿದೆ.

“ಜನ ಅನುಷಹನ್ ಪಖ್ವಾಡಾ” (public discipline fortnight) ಎಂದು ಕರೆಯಲ್ಪಡುವ ಈ ಹೊಸ ಲಾಕ್‌ಡೌನ್ ನಿರ್ಬಂಧಗಳು ಇಂದು ಬೆಳಗ್ಗೆ 5 ರಿಂದ ಮೇ 3 ರವರೆಗೆ 15 ದಿನಗಳವರೆಗೆ ರಾಜ್ಯದಲ್ಲಿ ಜಾರಿಯಲ್ಲಿರುತ್ತವೆ. ಅಗತ್ಯ ಸೇವೆಗಳನ್ನು ಒದಗಿಸುವ ಅಂಗಡಿಗಳು ಮತ್ತು ಕಚೇರಿಗಳು ಮಾತ್ರ 15 ದಿನಗಳ ಅವಧಿಯಲ್ಲಿ ತೆರೆದಿರುತ್ತವೆ ಎಂದು ಗೃಹ ಕಾರ್ಯದರ್ಶಿ ಅಭಯ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೊನಾ: ಚುನಾವಣಾ ಪ್ರಚಾರದ ವೈಖರಿ ಬದಲಿಸಿದ ಟಿಎಂಸಿ

ಸರ್ಕಾರಿ ಅಧಿಕಾರಿಗಳು, ಪೊಲೀಸ್, ಗೃಹರಕ್ಷಕ ದಳ, ಅಗ್ನಿಶಾಮಕ ಸೇವಾ ಅಧಿಕಾರಿಗಳು, ಸಾರ್ವಜನಿಕ ಸಾರಿಗೆ ಸಿಬ್ಬಂದಿ, ನಾಗರಿಕ ಅಧಿಕಾರಿಗಳು, ಎಲೆಕ್ಟ್ರಿಷಿಯನ್, ನೈರ್ಮಲ್ಯ ಕಾರ್ಮಿಕರು, ಆರೋಗ್ಯ ಕಾರ್ಯಕರ್ತರು ಮತ್ತು ಗುರುತಿನ ಚೀಟಿಗಳೊಂದಿಗೆ ಪ್ರಯಾಣಿಸುವ ವೈದ್ಯರ ಸಂಚಾರಕ್ಕೆ ಯಾವುದೇ ನಿರ್ಬಂಧಗಳಿಲ್ಲ ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.

ದಿನಸಿ ಅಂಗಡಿಗಳಿಗೆ ಸಂಜೆ 5 ರವರೆಗೆ ಅವಕಾಶ:

ದಿನಸಿ ಅಂಗಡಿಗಳು ಮತ್ತು ಹಣ್ಣುಗಳು, ತರಕಾರಿಗಳು, ಡೈರಿ ಉತ್ಪನ್ನಗಳು ಮತ್ತು ಹಾಲು ಮಾರಾಟ ಮಾಡುವ ಸ್ಟಾಲ್‌ಗಳನ್ನು ಸಂಜೆ 5 ಗಂಟೆಯವರೆಗೆ ತೆರೆದಿರಲು ಅವಕಾಶ ನೀಡಲಾಗಿದೆ. ಆದರೆ, ಹ್ಯಾಂಡ್‌ಕಾರ್ಟ್‌ಗಳು, ಸೈಕಲ್-ರಿಕ್ಷಾಗಳು, ಆಟೋರಿಕ್ಷಾಗಳು ಮತ್ತು ಮೊಬೈಲ್ ವ್ಯಾನ್‌ಗಳಲ್ಲಿ ಹಣ್ಣುಗಳು ಮತ್ತು ತರಕಾರಿಗಳ ಮಾರಾಟವನ್ನು ಸಂಜೆ 7 ರವರೆಗೆ ಅನುಮತಿಸಲಾಗಿದೆ. ಪತ್ರಿಕಾ ಮಾರಾಟಗಾರರಿಗೆ ಬೆಳಗ್ಗೆ 4 ರಿಂದ ಬೆಳಗ್ಗೆ 8 ರವರೆಗೆ ಪೇಪರ್​ ವಿತರಿಸಲು ಅವಕಾಶವಿದೆ.

ರಾಜ್ಯಕ್ಕೆ ಭೇಟಿ ನೀಡುವವರಿಗೆ ಸರ್ಕಾರವು ನೆಗೆಟಿವ್​ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ಕಡ್ಡಾಯಗೊಳಿಸಿದೆ. ಪ್ರಯಾಣಿಕರು 72 ಗಂಟೆಗಳ ಮೊದಲಿನ ವರದಿಯನ್ನು ನೀಡಬೇಕು.

ಬಸ್ ನಿಲ್ದಾಣಗಳು, ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಸುವವರಿಗೆ ಮಾನ್ಯ ಟಿಕೆಟ್‌ನೊಂದಿಗೆ ಅವಕಾಶ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಹಿಂದೆ, ರಾಜಸ್ಥಾನ ಸರ್ಕಾರವು ಏಪ್ರಿಲ್ 16 ರಿಂದ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ವಿಧಿಸಿತ್ತು. ಎಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳನ್ನು ಏಪ್ರಿಲ್ 30 ರವರೆಗೆ ಮುಚ್ಚುವಂತೆ ಆದೇಶಿಸಿದೆ. ಖಾಸಗಿ ಸಮಾರಂಭಗಳು, ಮದುವೆಗಳು ಮತ್ತು ಇತರ ಸಾಮಾಜಿಕ ಕೂಟಗಳಲ್ಲಿ ಅತಿಥಿಗಳ ಸಂಖ್ಯೆಯನ್ನು ಸರ್ಕಾರವು 50 ಕ್ಕೆ ಸೀಮಿತಗೊಳಿಸಿದೆ. ಅಂತ್ಯಕ್ರಿಯೆಗೆ 20 ಕ್ಕಿಂತ ಹೆಚ್ಚು ಜನರನ್ನು ಅನುಮತಿಸಲಾಗುವುದಿಲ್ಲ ಎಂದು ಹಿಂದಿನ ಆದೇಶದಲ್ಲಿ ತಿಳಿಸಲಾಗಿದೆ. ಸಿನಿಮಾ ಹಾಲ್‌ಗಳು, ಮಲ್ಟಿಪ್ಲೆಕ್ಸ್‌ಗಳು ಮತ್ತು ಮನೋರಂಜನಾ ಉದ್ಯಾನವನಗಳನ್ನು ಮುಚ್ಚುವಂತೆ ಸರ್ಕಾರ ಆದೇಶಿಸಿದೆ.

ಇದನ್ನೂ ಓದಿ: ದೇಶದಲ್ಲಿ ಕೋವಿಡ್‌ ಸುನಾಮಿ: ಹೊಸದಾಗಿ 2.73 ಲಕ್ಷ ಕೇಸ್​ ಪತ್ತೆ, 1,619 ಮಂದಿ ಬಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.