ETV Bharat / bharat

500 ರೂಪಾಯಿಗಾಗಿ ಪತಿ ಕೊಂದ ಅಪರಾಧ.. ಮಹಿಳೆಯ ಶಿಕ್ಷೆ ಕಡಿತಗೊಳಿಸಿದ ಸುಪ್ರೀಂಕೋರ್ಟ್

ಪತಿಯನ್ನು ಕೊಲೆ ಮಾಡಿದ ಅಪರಾಧಿ ಮಹಿಳೆಯ ಜೀವಾವಧಿ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಕಡಿತಗೊಳಿಸಿ ಆದೇಶಿಸಿದೆ. ಮಹಿಳೆಯು ಕೋಪದ ಭರದಲ್ಲಿ ತನ್ನ ಪತಿ ಹೊಡೆದು ಕೊಂದಿದ್ದಾಳೆ, ಇದನ್ನು ಪೂರ್ವಯೋಜಿತ ಕೊಲೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ.

SC reduces jail term of wife  wife accused of beating husband to death  Tiff over Rs 500  SC modified a murder conviction of woman  A bench of Justices BR Gavai and JB Pardiwala  500 ರೂಪಾಯಿಗಾಗಿ ಪತಿಯನ್ನು ಕೊಂದ ಆರೋಪ  ಹಿಳೆಯ ಶಿಕ್ಷೆಯನ್ನು ಕಡಿತಗೊಳಿಸಿದ ಸುಪ್ರೀಂ ಕೋರ್ಟ್  ಪತಿಯನ್ನು ಕೊಲೆ ಮಾಡಿದ ಆರೋಪಿ ಮಹಿಳೆ  ಮಹಿಳೆಯ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಕಡಿತ  ಮಹಿಳೆಯು ಕೋಪದ ಭರ  ಕೊಲೆ ಮಾಡಿದ ಆರೋಪದಡಿ ಮಹಿಳೆಯೊಬ್ಬರ ಕೊಲೆ ಶಿಕ್ಷೆ  500 ಪಾವತಿಸಲು ಒಪ್ಪಿಗೆ ನೀಡದ ಕಾರಣ ತಾಯಿ  ತಂದೆ ಹಳೆಯ ಮನೆಯಲ್ಲಿ ಪ್ರತ್ಯೇಕ
500 ರೂಪಾಯಿಗಾಗಿ ಪತಿಯನ್ನು ಕೊಂದ ಆರೋಪ
author img

By

Published : Aug 2, 2023, 7:48 AM IST

ನವದೆಹಲಿ: ಪತಿಯನ್ನು ಕೊಲೆ ಮಾಡಿದ ಆರೋಪದಡಿ ಮಹಿಳೆಯೊಬ್ಬರ ಕೊಲೆ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಬದಲಾಯಿಸಿದೆ. ಮಹಿಳೆ ತಮ್ಮ ತಾಳ್ಮೆ ಕಳೆದುಕೊಂಡಿರುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಮೃತ ಗಂಡ ತನ್ನ ಮಗಳಿಗೆ 500 ರೂಪಾಯಿ ನೀಡದ ಕಾರಣ ಪತ್ನಿ ಕೋಪಗೊಂಡಿದ್ದಾರೆ. ಇದರಿಂದ ಮಹಿಳೆ ತನ್ನ ಪತಿಯನ್ನು ಕೊಂದಿದ್ದಾಳೆ ಎಂದು ಸುಪ್ರೀಂ ಕೋರ್ಟ್​ ಅಭಿಪ್ರಾಯಪಟ್ಟಿದೆ.

ಘಟನೆಯಲ್ಲಿ ಬಳಸಲಾದ ಆಯುಧವು ಮನೆಯಲ್ಲಿ ಬಿದ್ದಿರುವ ಕೋಲು. ಅದನ್ನು ಯಾವುದೇ ರೀತಿಯಲ್ಲಿ ಮಾರಕ ಆಯುಧ ಎಂದು ಕರೆಯಲಾಗುವುದಿಲ್ಲ ಅಂತಾ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಜೆ.ಬಿ.ಪರ್ದಿವಾಲಾ ಅವರ ಪೀಠ ಹೇಳಿದೆ. ಮಗಳಿಗೆ ರೂ.500 ಪಾವತಿಸಲು ಒಪ್ಪಿಗೆ ನೀಡದ ಕಾರಣ ತಾಯಿ ಕೋಪಗೊಂಡಿದ್ದಾಳೆ. ಹೀಗಾಗಿ ಮಹಿಳೆ ತನ್ನ ತಾಳ್ಮೆ ಕಳೆದುಕೊಂಡು ಗಂಡನ ಮೇಲೆ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡು ವ್ಯಕ್ತಿ ಸಾವನ್ನಪ್ಪಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಪೀಠ ಹೇಳಿದೆ.

ಮೇ 26, 2015 ರಂದು ನಡೆದ ಜಗಳದಲ್ಲಿ ಪತಿಯನ್ನು ಹೊಡೆದು ಕೊಂದ ಆರೋಪದ ಮೇಲೆ ನಿರ್ಮಲಾ ದೇವಿ ಅವರು ಸಲ್ಲಿಸಿದ ಮನವಿಯ ಮೇಲೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಮೇ 2022 ರಲ್ಲಿ ಹಿಮಾಚಲ ಪ್ರದೇಶ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ, ಜಗಳದ ಸಂದರ್ಭದಲ್ಲಿ ತನ್ನ ಪತಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ನಿರ್ಮಲಾ ದೇವಿ ಸಲ್ಲಿಸಿದ ಮನವಿಯ ಮೇಲೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಐಪಿಸಿಯ ಸೆಕ್ಷನ್ 302 ಮತ್ತು 201 ರ ಅಡಿ ಶಿಕ್ಷಾರ್ಹ ಅಪರಾಧಗಳಿಗಾಗಿ ಮಹಿಳೆಯನ್ನು ದೋಷಿ ಎಂದು ತೀರ್ಪು ನೀಡಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಬಳಿಕ ಆಕೆಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಸುಪ್ರೀಂ ಕೋರ್ಟ್ ಮಹಿಳೆಯ ಜೈಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಿಂದ ಈಗಾಗಲೇ ಅನುಭವಿಸಿದ (ಒಂಬತ್ತು ವರ್ಷಗಳು) ಜೈಲು ಶಿಕ್ಷೆಗೆ ಇಳಿಸಿತು. ಮಗಳ ಸಾಕ್ಷ್ಯವನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೂ, "ಐಪಿಸಿಯ ಸೆಕ್ಷನ್ 302 ರ ಅಡಿ ಶಿಕ್ಷೆಯನ್ನು ಉಳಿಸಿಕೊಳ್ಳುವುದು ಕಷ್ಟ ಎಂದು ನಾವು ಕಂಡುಕೊಂಡಿದ್ದೇವೆ" ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಗಳ ಸಾಕ್ಷ್ಯವನ್ನು ಗಮನಿಸಿದಾಗ, ಆಕೆಯ ತಂದೆ-ತಾಯಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂಬುದು ಗೊತ್ತಾಗುತ್ತದೆ. ಅಂತಹ ಒಂದು ಜಗಳದಲ್ಲಿ ಮೃತ ತಂದೆ ಮಸ್ತ್ ರಾಮ್ ತನ್ನ ತಾಯಿಯ ನಿರ್ಮಲಾ ದೇವಿ ಅವರ ಕಾಲನ್ನು ಮುರಿದಿದ್ದನೆಂದು ಮಗಳು ತನ್ನ ಸಾಕ್ಷ್ಯದಲ್ಲಿ ಹೇಳಿದ್ದಾಳೆ. ಅಷ್ಟೇ ಅಲ್ಲ ಈ ಅಪರಾಧಕ್ಕಾಗಿ ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಕೂಡ ಬಾಕಿ ಉಳಿದಿದೆ ಎಂದು ಸುಪ್ರೀಂ ಕೋರ್ಟ್​ ಹೇಳಿದೆ.

ಸಾಕ್ಷಿದಾರರ ತಂದೆ ಹಳೆಯ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ, ತಾಯಿ ಮತ್ತು ಒಡಹುಟ್ಟಿದವರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಮಗಳ ಸಾಕ್ಷ್ಯವು ತೋರಿಸುತ್ತದೆ ಎಂದು ಪೀಠವು ಗಮನಿಸಿತು. ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಶಿಬಿರಕ್ಕೆ ಸೇರಲು ತನಗೆ 500 ರೂಪಾಯಿ ನೀಡಲಿಲ್ಲ ಎಂದು ಮಗಳು ದೂರಿದ್ದಾರೆ. ಇದರಿಂದ ಕೋಪಗೊಂಡ ಮಹಿಳೆ ತನ್ನ ಪತಿಯನ್ನು ಕೋಲಿನಿಂದ ಹೊಡೆದಿದ್ದಾಳೆ ಎಂದು ಆರೋಪಿಸಲಾಗಿದೆ. ಆಕೆಯ ತಂದೆಗೆ ಗಾಯಗಳಾಗಿದ್ದು, ಅದು ಅವರ ಸಾವಿಗೆ ಕಾರಣವಾಯಿತು" ಎಂದು ಪೀಠ ಹೇಳಿದೆ.

ತೀರ್ಪನ್ನು ಮುಕ್ತಾಯಗೊಳಿಸಿದ ಪೀಠವು, ಮೇಲ್ಮನವಿದಾರನ ಶಿಕ್ಷೆಯನ್ನು ಐಪಿಸಿಯ ಸೆಕ್ಷನ್ 302 ರಿಂದ ಐಪಿಸಿಯ ಸೆಕ್ಷನ್ 304 ರ ಭಾಗ-1 ಕ್ಕೆ ಬದಲಾಯಿಸಲಾಗಿದೆ. ಮೇಲ್ಮನವಿದಾರರು ಈಗಾಗಲೇ ಸುಮಾರು ಒಂಬತ್ತು ವರ್ಷಗಳ ಅವಧಿಯವರೆಗೆ ಸೆರೆವಾಸದಲ್ಲಿದ್ದಾರೆ. ಆದ್ದರಿಂದ ಈಗಾಗಲೇ ಅನುಭವಿಸಿದ ಶಿಕ್ಷೆಯು ನ್ಯಾಯದ ಅಂತ್ಯವನ್ನು ಪೂರೈಸುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ. ಮೇಲ್ಮನವಿದಾರರ ಜಾಮೀನು ಬಾಂಡ್‌ಗಳು ಸಹ ಬಿಡುಗಡೆಯಾಗುತ್ತವೆ ಎಂದು ಪೀಠ ಹೇಳಿದೆ.

ಓದಿ: ಕೆಪಿಎಸ್​​ಸಿ ಅಧ್ಯಕ್ಷ, ಸದಸ್ಯರ ನೇಮಕ ಪಾರದರ್ಶಕವಾಗಿರಬೇಕು: ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.