ETV Bharat / bharat

ಭಾರತದಲ್ಲಿ ವಿವಾಹವು ಪ್ರಾಸಂಗಿಕ ಘಟನೆಯಲ್ಲ.. ವಿಚ್ಛೇದನ ಏಕಪಕ್ಷೀಯವಾಗಿರಬಾರದು: ಸುಪ್ರೀಂಕೋರ್ಟ್​ - etv bharat kannada

ಪತಿಯ ಮನವಿ ಮೇರೆಗೆ ಮಾತ್ರ ವಿವಾಹ ರದ್ದುಗೊಳಿಸಲು ಸುಪ್ರೀಂಕೋರ್ಟ್​ ನಿರಾಕರಿಸಿದೆ.

sc-if-one-side-is-not-willing-then-no-divorce-under-article-142-marriage-not-casual-in-india
ಭಾರತದಲ್ಲಿ ವಿವಾಹವು ಪ್ರಾಸಂಗಿಕ ಘಟನೆಯಲ್ಲ... ವಿಚ್ಛೇದನ ಏಕಪಕ್ಷೀಯವಾಗಿರಬಾರದು: ಸುಪ್ರೀಂಕೋರ್ಟ್​
author img

By

Published : Oct 14, 2022, 5:13 PM IST

ನವದೆಹಲಿ: ವಿವಾಹ ರದ್ದುಗೊಳಿಸಲು 142ನೇ ವಿಧಿಯ ಅಡಿ ತನ್ನ ಅಧಿಕಾರವನ್ನು ಬಳಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದೇ ವೇಳೆ ಪತಿಯ ಮನವಿ ಮಾತ್ರ ಮೇರೆಗೆ ವಿವಾಹವನ್ನು ರದ್ದುಗೊಳಿಸಲು ಸರ್ವೋಚ್ಛ ನ್ಯಾಯಾಲಯ ನಿರಾಕರಿಸಿದೆ.

ವಿಚ್ಛೇದನ ಕುರಿತ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಭಯ್ ಎಸ್ ಓಕಾ ಅವರನ್ನೊಳಗೊಂಡ ಪೀಠವು ದಂಪತಿ ಕೇವಲ 40 ದಿನಗಳ ಕಾಲ ಒಟ್ಟಿಗೆ ವಾಸ ಮಾಡಿದ್ದರು. ಸುಮಾರು ಎರಡು ವರ್ಷಗಳಿಂದ ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬುವುದನ್ನು ಗಮನಿಸಿತು.

ಇದೇ ಸಂದರ್ಭದಲ್ಲಿ ಭಾರತದಲ್ಲಿ ವಿವಾಹವು ಪ್ರಾಸಂಗಿಕ ಘಟನೆಯಲ್ಲ ಎಂದು ಒತ್ತಿ ಹೇಳಿದ ನ್ಯಾಯ ಪೀಠ, ನಾವು ಇಂದು ಮದುವೆ ಮತ್ತು ನಾಳೆ ವಿಚ್ಛೇದನ ಎಂಬ ಪಾಶ್ಚಿಮಾತ್ಯ ಮಾನದಂಡಗಳನ್ನು ತಲುಪಿಲ್ಲ ಎಂದು ತಿಳಿಸಿತು. ಹೀಗಾಗಿ ಪತಿಯ ಮನವಿಯ ಮೇರೆಗೆ ವಿವಾಹವನ್ನು ರದ್ದುಗೊಳಿಸಲು ನಿರಾಕರಿಸಿದ ಪೀಠ, ವಿಚ್ಛೇದನಕ್ಕೆ ಒಬ್ಬರಿಗೆ ಒಪ್ಪಿಗೆ ಇದ್ದು, ಮತ್ತೊಬ್ಬರಿಗೆ ಇಷ್ಟವಿಲ್ಲದಿದ್ದಾಗ ವಿವಾಹವನ್ನು ರದ್ದುಗೊಳಿಸಲು 142ನೇ ವಿಧಿಯ ಅಡಿ ಅಧಿಕಾರ ಚಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿತು.

ಏನಿದು ಪ್ರಕರಣ?: ಕೆನಡಾದಲ್ಲಿ ವಾಸಿಸುತ್ತಿದ್ದ ಮಹಿಳೆಯನ್ನು ಮದುವೆಯಾದ ಪತಿಯ ವಿಚ್ಛೇದನಕ್ಕೆ ಕೋರಿದ್ದಾರೆ. ಆದರೆ, ಈ ವಿಚ್ಛದನಕ್ಕೆ ಪತ್ನಿಯು ಒಪ್ಪುತ್ತಿಲ್ಲ. ತನ್ನ ಮದುವೆಯನ್ನು ಉಳಿಸುವಂತೆ ಕೋರಿ ಪತ್ನಿ ಸಲ್ಲಿಸಿದ್ದ ವರ್ಗಾವಣೆ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ.

ಈ ವಿಚಾರಣೆ ವೇಳೆ ದಂಪತಿ ಹೆಚ್ಚು ವಿದ್ಯಾವಂತರಾಗಿದ್ದಾರೆ. ಪತಿ ಎನ್‌ಜಿಒ ನಡೆಸುತ್ತಿದ್ದಾರೆ. ಪತ್ನಿ ಕೆನಡಾದಲ್ಲಿ ಶಾಶ್ವತ ನಿವಾಸದ ಅನುಮತಿ ಹೊಂದಿದ್ದಾರೆ. ಆದ್ದರಿಂದ ದಂಪತಿ ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಪ್ರಯತ್ನಗಳನ್ನು ಮಾಡಬೇಕೆಂದೂ ಸಲಹೆ ನೀಡಿದೆ.

ಜೊತೆಗೆ ದಂಪತಿಗಳು ಮಧ್ಯಸ್ಥಿಕೆ ಪ್ರಕ್ರಿಯೆಗೆ ಹೋಗುವಂತೆ ನ್ಯಾಯ ಪೀಠ ತಿಳಿಸಿದೆ. ಇದಕ್ಕಾಗಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರನ್ನು ಮಧ್ಯವರ್ತಿಯಾಗಿ ನೇಮಿಸಿದೆ. ವಿವಾಹ ಸಲಹೆಗಾರರ ​​​​ಸಹಾಯವನ್ನು ಪಡೆಯಲು ಅವಕಾಶ ಮಾಡಿಕೊಟ್ಟು ಈ ಕುರಿತು ಮೂರು ತಿಂಗಳಲ್ಲಿ ವರದಿಯನ್ನು ಸಲ್ಲಿಸುವಂತೆಯೂ ಸುಪ್ರೀಂಕೋರ್ಟ್​ ಸೂಚಿಸಿದೆ.

ಇದನ್ನೂ ಓದಿ: ಉಜ್ಬೆಕಿಸ್ತಾನ್​ನಲ್ಲಿ 2000 MBBS​ ಸೀಟು: ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗಳು ನಿರಾಳ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.