ETV Bharat / bharat

ಕೋವಿಡ್​ನಲ್ಲಿ ತುರ್ತು ಪೆರೋಲ್​ ಪಡೆದಿದ್ದ ಕೈದಿಗಳಿಗೆ ಶರಣಾಗುವಂತೆ ಆದೇಶ - ಕೈದಿಗಳು 15 ದಿನಗಳಲ್ಲಿ ಶರಣಾಗುವಂತೆ ಸುಪ್ರೀಂ ಕೋರ್ಟ್

ಕೋವಿಡ್ ಜೋರಾಗಿದ್ದ ಅವಧಿಯಲ್ಲಿ ತುರ್ತು ಪೆರೋಲ್ ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದ ಎಲ್ಲ ಕೈದಿಗಳು 15 ದಿನಗಳಲ್ಲಿ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

pandemic to surrender in 15 days
pandemic to surrender in 15 days
author img

By

Published : Mar 24, 2023, 3:22 PM IST

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಉನ್ನತಾಧಿಕಾರ ಸಮಿತಿಯಿಂದ ತುರ್ತು ಪೆರೋಲ್ ಪಡೆದ ಎಲ್ಲಾ ಕೈದಿಗಳು 15 ದಿನಗಳಲ್ಲಿ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಆದೇಶವು ಕೋವಿಡ್ ಸಾಂಕ್ರಾಮಿಕದ ಮೊದಲ ಮತ್ತು ಎರಡನೆಯ ಅಲೆಗಳ ಸಮಯದಲ್ಲಿ, ಜೈಲುಗಳಲ್ಲಿ ಕೈದಿಗಳ ದಟ್ಟಣೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ತಾನು ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಪ್ರಕರಣದಲ್ಲಿ ನೀಡಿದ್ದ ಹಿಂದಿನ ನಿರ್ದೇಶನಗಳ ಮುಂದುವರಿದ ಭಾಗವಾಗಿದೆ.

ಉನ್ನತಾಧಿಕಾರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ತುರ್ತು ಪೆರೋಲ್ ಅಥವಾ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ವಿಚಾರಣಾಧೀನ ಕೈದಿಗಳು ಮತ್ತು ಅಪರಾಧಿಗಳು 15 ದಿನಗಳೊಳಗೆ ಸಂಬಂಧಪಟ್ಟ ಜೈಲು ಅಧಿಕಾರಿಗಳ ಮುಂದೆ ಶರಣಾಗಬೇಕು ಎಂದು ನ್ಯಾಯಮೂರ್ತಿಗಳಾದ ಎಂಆರ್ ಶಾ ಮತ್ತು ಸಿಟಿ ರವಿಕುಮಾರ್ ಅವರನ್ನೊಳಗೊಂಡ ಪೀಠ ಸ್ಪಷ್ಟಪಡಿಸಿದೆ. ಕೈದಿಗಳು ಶರಣಾದ ನಂತರ, ಅವರು ಸಕ್ಷಮ ನ್ಯಾಯಾಲಯದ ಮುಂದೆ ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಮತ್ತು ಅವರ ಅರ್ಜಿಗಳನ್ನು ಕಾನೂನಿನ ಪ್ರಕಾರ ಪರಿಗಣಿಸಲಾಗುವುದು ಎಂದು ಪೀಠವು ತಿಳಿಸಿದೆ. ಅಂತೆಯೇ, ತುರ್ತು ಪೆರೋಲ್‌ ಮೇಲೆ ಬಿಡುಗಡೆಯಾದ ಅಪರಾಧಿಗಳು ತಮ್ಮ ಮೇಲ್ಮನವಿಗಳಲ್ಲಿ ಸಂಬಂಧಪಟ್ಟ ನ್ಯಾಯಾಲಯದ ಮುಂದೆ ತಮ್ಮ ಶಿಕ್ಷೆಯನ್ನು ಅಮಾನತುಗೊಳಿಸಲು ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ಕೋವಿಡ್​ ಮೊದಲ ಮತ್ತು ಎರಡನೇ ಅಲೆ ತೀರಾ ಜೋರಾಗಿದ್ದ ಅವಧಿಯಲ್ಲಿ ದೇಶದ ಹಲವಾರು ಜೈಲುಗಳಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಜೈಲುಗಳಲ್ಲಿ ಕೂಡ ಕೋವಿಡ್ ವ್ಯಾಪಕವಾಗಿ ಹರಡಲಾರಂಭಿಸಿತ್ತು. ಹೀಗಾಗಿ ಸಾಧ್ಯವಾದಷ್ಟು ಕೈದಿಗಳನ್ನು ಬಿಡುಗಡೆ ಮಾಡಿ ಜೈಲುಗಳಲ್ಲಿನ ದಟ್ಟಣೆ ಕಡಿಮೆ ಮಾಡುವುದು ಆಗ ಬಹಳ ಅಗತ್ಯವಾಗಿತ್ತು. ಇದಕ್ಕಾಗಿ ಸುಪ್ರೀಂ ಕೋರ್ಟ್​ ತಾನಾಗಿಯೇ ಮಧ್ಯಪ್ರವೇಶಿಸಿತ್ತು.

ಯಾವೆಲ್ಲ ಕೈದಿಗಳಿಗೆ ತುರ್ತು ಆಧಾರದಲ್ಲಿ ಪೆರೋಲ್ ನೀಡಬಹುದೆಂಬುದನ್ನು ನಿರ್ಧರಿಸಲು ರಾಜ್ಯ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ (ಗೃಹ/ಜೈಲು), ಮತ್ತು ಜೈಲು(ಗಳು) ಮಹಾನಿರ್ದೇಶಕರ ನೇತೃತ್ವದಲ್ಲಿ ಆಯಾ ರಾಜ್ಯಗಳಲ್ಲಿ ಉನ್ನತಾಧಿಕಾರ ಸಮಿತಿಗಳನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಈ ಹಿಂದೆ ಆದೇಶಿಸಿತ್ತು. ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಜೈಲುಗಳಲ್ಲಿದ್ದ ಕೈದಿಗಳ ದಟ್ಟಣೆಯನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿತ್ತು.

ಸಾಂಕ್ರಾಮಿಕ ಸಮಯದಲ್ಲಿ ತುರ್ತು ಪೆರೋಲ್‌ನಲ್ಲಿ ಬಿಡುಗಡೆಯಾದ ಎಲ್ಲಾ ಕೈದಿಗಳ ಶರಣಾಗತಿಗೆ ಆದೇಶ ನೀಡುವ ಸುಪ್ರೀಂ ಕೋರ್ಟ್‌ನ ನಿರ್ಧಾರವು ಕಾನೂನಿನ ನಿಯಮ ಪಾಲನೆಯಾಗುವುದನ್ನು ಮತ್ತು ನ್ಯಾಯ ಒದಗಿಸುವುದನ್ನು ಖಚಿತಪಡಿಸುತ್ತದೆ. ನ್ಯಾಯಾಲಯದ ನಿರ್ದೇಶನವು ಕಾನೂನಿಗೆ ಅನುಸಾರವಾಗಿ ಜಾಮೀನು ಅಥವಾ ಶಿಕ್ಷೆಯನ್ನು ಅಮಾನತುಗೊಳಿಸಲು ಬಯಸುವ ಕೈದಿಗಳಿಗೆ ಅವಕಾಶ ಒದಗಿಸುತ್ತದೆ. ಕೊರೊನಾ ಸಮಯದಲ್ಲಿ ಉನ್ನತಾಧಿಕಾರದ ಸಮಿತಿಯ ಶಿಫಾರಸಿನ ಮೇರೆಗೆ ಘೋರವಲ್ಲದ ಅಪರಾಧಗಳ ಆರೋಪ ಎದುರಿಸುತ್ತಿರುವ ಹಲವಾರು ಅಪರಾಧಿಗಳು ಮತ್ತು ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡಲಾಗಿತ್ತು ಎಂಬುದು ಗಮನಾರ್ಹ. ಹೀಗೆ ಬಿಡುಗಡೆಯಾದವರನ್ನು ಮತ್ತೆ ನ್ಯಾಯದಾನ ವ್ಯವಸ್ಥೆಯ ಮೂಲಕ ವಿಚಾರಣೆ ನಡೆಸಲು ಮತ್ತು ಪ್ರಕರಣಗಳನ್ನು ನ್ಯಾಯಯುತವಾಗಿ ಬಗೆಹರಿಸಲು ಸುಪ್ರೀಂ ಕೋರ್ಟ್​ನ ಈ ಆದೇಶದಿಂದ ಸಾಧ್ಯವಾಗಲಿದೆ.

ಇದನ್ನೂ ಓದಿ : ಮುಲ್ಕಿ ನ.ಪಂಚಾಯತ್‌ ಜೂನಿಯರ್‌ ಇಂಜಿನಿಯರ್​​ಗೆ 4 ವರ್ಷ ಜೈಲು, ₹26‌ ಲಕ್ಷ ದಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.