ETV Bharat / bharat

ಅದಾನಿ ಗ್ರೂಪ್ ವಿರುದ್ಧ ಹಿಂಡೆನ್​ಬರ್ಗ್ ವರದಿ: ನಾಳೆ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ - ಅದಾನಿ ಗ್ರೂಪ್ ಮೇಲೆ ಹಿಂಡೆನ್​ಬರ್ಗ್ ಲೂಟಿ​ ಆರೋಪ

ಅದಾನಿ ಗ್ರೂಪ್ ವಿರುದ್ಧ ಹಿಂಡೆನ್​ಬರ್ಗ್​ ವರದಿ- ಆರೋಪ ತನಿಖೆಗೆ ಆಗ್ರಹ- ನಾಳೆ ಸುಪ್ರೀಂಕೋರ್ಟಲ್ಲಿ ವಿಚಾರಣೆ

adani-firms
ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ
author img

By

Published : Feb 9, 2023, 12:54 PM IST

Updated : Feb 9, 2023, 1:21 PM IST

ನವದೆಹಲಿ: ಉದ್ಯಮಿ ಗೌತಮ್​ ಅದಾನಿ ನೇತೃತ್ವದ ಅದಾನಿ ಗ್ರೂಪ್​ ಮೇಲೆ ಅಮೆರಿಕದ ಹಿಂಡೆನ್​ಬರ್ಗ್​ ರಿಸರ್ಚ್​ ಸಂಸ್ಥೆ ಮಾಡಿದ ಆರೋಪಗಳ ವರದಿ ಬಗ್ಗೆ ತನಿಖೆ ನಡೆಸಲು ಮೇಲ್ವಿಚಾರಣಾ ಸಮಿತಿ ರಚನೆಗೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಾಳೆ ಸುಪ್ರೀಂಕೋರ್ಟ್​ನಲ್ಲಿ ನಡೆಯಲಿದೆ.

ವಕೀಲ ವಿಶಾಲ್ ತಿವಾರಿ ಎಂಬುವರು ಅದಾನಿ ಗ್ರೂಪ್​ ವಿರುದ್ಧ ಕೇಳಿಬಂದ ಆರೋಪಗಳ ಬಗ್ಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಸಮಿತಿ ರಚನೆಗೆ ಕೇಂದ್ರ ಸರ್ಕಾರಕ್ಕೆ ತುರ್ತು ನಿರ್ದೇಶನ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ಇದನ್ನೀಗ ಒಪ್ಪಿಕೊಂಡಿರುವ ಸುಪ್ರೀಂಕೋರ್ಟ್​ ನಾಳೆ ವಿಚಾರಣೆಗೆ ಪಟ್ಟಿ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠದ ಮುಂದೆ ಈ ಅರ್ಜಿ ವಿಚಾರಣೆ ನಡೆಯಲಿದೆ.

ವಿದೇಶಿ ಸಂಶೋಧನಾ ಸಂಸ್ಥೆಯೊಂದು ಅದಾನಿ ಗ್ರೂಪ್​ ಮೇಲೆ ಲೂಟಿಯಂತಹ ಗಂಭೀರ ಆರೋಪ ಮಾಡಿದೆ. ಕಾರ್ಪೋರೇಟ್​ ಸಂಸ್ಥೆಗ 500 ಕೋಟಿ ರೂಪಾಯಿಗಿಂತ ಹೆಚ್ಚಿನ ಸಾಲವನ್ನು ಮಂಜೂರಾತಿ ಮಾಡಲಾಗಿದೆ. ಆರೋಪ ದೇಶದ ಪ್ರತಿಷ್ಠೆಯನ್ನು ಹಾಳು ಮಾಡಿದೆ. ಆರ್ಥಿಕತೆಗೆ ನಷ್ಟ ಉಂಟು ಮಾಡಿದೆ. ಈ ಬಗ್ಗೆ ವಿಸ್ತೃತ ತನಿಖೆ ನಡೆಯಬೇಕು. ನಿವೃತ್ತ ನ್ಯಾಯಾಧೀಶರೇ ಸಮಿತಿಯ ಮೇಲ್ವಿಚಾರಕರಾಗಿರಬೇಕು ಎಂದು ವಕೀಲ ವಿಶಾಲ್​ ತಿವಾರಿ ಕೋರಿದ್ದಾರೆ.

ಅದಾನಿ ಗ್ರೂಪ್​ನ ಮೇಲೆ ಹಿಂಡೆನ್​ಬರ್ಗ್​ ಆರೋಪದಿಂದ ಷೇರುಗಳ ಕುಸಿತದಿಂದಾಗಿ ಜನರ ಹೂಡಿಕೆಯ ಹಣ ಖೋತಾ ಆಗಿದೆ. ಉದ್ದೇಶಪೂರ್ವಕವಾಗಿ ಮಾಡಿದ ಆರೋಪದಿಂದ ಗ್ರೂಪ್​ ಕುಸಿಯುವಂತೆ ಮಾಡಿದ ಅಮೆರಿಕದ ಹಿಂಡೆನ್​ಬರ್ಗ್​ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ಹಿಂಡೆನ್‌ಬರ್ಗ್ ರಿಸರ್ಚ್​ನ ಆರೋಪವೇನು?: ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್​ ತನ್ನ ವರದಿಯಲ್ಲಿ ಕೈಗಾರಿಕೋದ್ಯಮಿ ಗೌತಮ್ ಅದಾನಿ ನೇತೃತ್ವದ ಗ್ರೂಪ್​​ ಬ್ಲ್ಯಾಟಂಟ್ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆಯಲ್ಲಿ ತೊಡಗಿದೆ ಎಂದು ಆರೋಪಿಸಿತ್ತು. ದೇಶದ ಆರ್ಥಿಕತೆಯನ್ನು ಅದಾನಿ ಗ್ರೂಪ್​ ಕಸಿದಿದೆ ಎಂಬ ಗಂಭೀರ ಆರೋಪ ಮಾಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಉದ್ಯಮಿ ಗೌತಮ್​ ಅದಾನಿ 413 ಪುಟಗಳ ಉತ್ತರ ಬರೆದಿದ್ದರು. ಹಿಂಡೆನ್​ಬರ್ಗ್​ ಕೇವಲ ಕಂಪನಿಯೊಂದರ ಮಾಡಿದ ದಾಳಿಯಲ್ಲ, ದೇಶದ ಮೇಲಿನ ಯೋಜಿತ ದಾಳಿಯಾಗಿದೆ. ವರದಿ ಸಂಪೂರ್ಣ ಸುಳ್ಳಿನಿಂದ ಕೂಡಿದೆ. ಇದು ಭಾರತದ ವಿರುದ್ಧ ಮಾಡಿದ ಷಡ್ಯಂತ್ಯ. ಪಿತೂರಿಯುಕ್ತ ನಡವಳಿಕೆ ಎಂದು ಅದಾನಿ ಗ್ರೂಪ್‌ ಕಿಡಿಕಾರಿದೆ. ಅಮೆರಿಕ ಕಂಪನಿಗಳ ಆರ್ಥಿಕ ಲಾಭಕ್ಕಾಗಿ ಹೊಸ ಮಾರುಕಟ್ಟೆ ಸೃಷ್ಟಿಸುವ ಸಲುವಾಗಿ ಈ ವರದಿ ಪ್ರಕಟಿಸಲಾಗಿದೆ ಎಂದು ಅದಾನಿ ಗ್ರೂಪ್‌ ಆರೋಪಿಸಿತ್ತು.

ಅದಾನಿ ಸಂಪತ್ತು ಕುಸಿತ: 154 ಬಿಲಿಯನ್​ ಡಾಲರ್​ ಸಂಪತ್ತಿನೊಂದಿಗೆ ವಿಶ್ವದ ನಂಬರ್​ 2 ಸಿರಿವಂತ ಸ್ಥಾನಕ್ಕೇರಿದ್ದ ಗೌತಮ್​ ಅದಾನಿ ಹಿಂಡೆನ್​ಬರ್ಗ್​ ವರದಿಯ ಬಳಿಕ ದಿಢೀರ್​ ಕುಸಿತ ಕಂಡು ಟಾಪ್​ 20 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದಿದ್ದರು. ಇದೀಗ ಅದಾನಿ ಗ್ರೂಪ್​ನ ಷೇರುಗಳು ನಿಧಾನವಾಗಿ ಏರಿಕೆ ಕಾಣುತ್ತಿದ್ದು, ಸಿರಿವಂತರ ಪಟ್ಟಿಯಲ್ಲಿ ಅದಾನಿ 17 ನೇ ಸ್ಥಾನಕ್ಕೆ ಬಂದಿದ್ದಾರೆ.

ಓದಿ: ಏರಿಕೆ ಹಾದಿ ಹಿಡಿದ ಅದಾನಿ ಸಮೂಹ ಸಂಸ್ಥೆಗಳ ಷೇರು ಬೆಲೆ.. ಶೇ 13 ರಷ್ಟು ಏರಿಕೆ ದಾಖಲಿಸಿದ ಸ್ಟಾಕ್ಸ್​!

Last Updated : Feb 9, 2023, 1:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.