ETV Bharat / bharat

ಆಧಾರ್​​ನೊಂದಿಗೆ PANಕಾರ್ಡ್ ಲಿಂಕ್ ಮಾಡಲು ಗ್ರಾಹಕರಿಗೆ ಹೊಸ ಗಡುವು ನೀಡಿದ ಎಸ್​ಬಿಐ - ಪ್ಯಾನ್ ಕಾರ್ಡ್​

ಪ್ರಸ್ತುತ ಬ್ಯಾಂಕ್ ಖಾತೆಗಳನ್ನು ತೆರೆಯುವುದು, ಬ್ಯಾಂಕ್ ಖಾತೆಗಳಲ್ಲಿ ನಗದು ಠೇವಣಿ, ಡಿಮ್ಯಾಟ್ ಖಾತೆಗಳನ್ನು ತೆರೆಯುವುದು, ಸ್ಥಿರ ಆಸ್ತಿಗಳ ವಹಿವಾಟು ಸೇರಿದಂತೆ ಹಲವಾರು ಹಣಕಾಸಿನ ವಹಿವಾಟುಗಳನ್ನು ನಡೆಸಲು ಪ್ಯಾನ್ ಕಡ್ಡಾಯವಾಗಿದೆ.

SBI Bank
ಎಸ್​ಬಿಐ ಬ್ಯಾಂಕ್​
author img

By

Published : Jun 8, 2021, 8:24 PM IST

ಹೈದರಾಬಾದ್: ಭಾರತದ ಅತೀ ದೊಡ್ಡ ಸಾರ್ವಜನಿಕ ರಂಗದ ಬ್ಯಾಂಕ್ ಆಗಿರುವ ಎಸ್​​​​ಬಿಐ ತನ್ನ ಗ್ರಾಹಕರಿಗೆ ಪ್ಯಾನ್​ ಕಾರ್ಡ್​​ ಅನ್ನು ಆಧಾರ್​​ನೊಂದಿಗೆ ಲಿಂಕ್ ಮಾಡಲು ಗಡುವು ನೀಡಿದೆ. ಬ್ಯಾಂಕ್​​ನ ಗ್ರಾಹಕರು ಜೂನ್ 30ರೊಳಗೆ ಆಧಾರ್​ನೊಂದಿಗೆ ಲಿಂಕ್ ಮಾಡುವಂತೆ ತಿಳಿಸಿದೆ.

ಒಂದು ವೇಳೆ ಗ್ರಾಹಕರು ನಿಗದಿತ ಸಮಯದಲ್ಲಿ ಲಿಂಕ್ ಮಾಡದಿದ್ದರೆ. ಬ್ಯಾಂಕಿಂಗ್ ಸೇವೆಯಲ್ಲಿ ಸಮಸ್ಯೆ ಎದುರಿಸಬೇಕಾಗಬಹುದು ಎಂದಿದೆ. ಈ ಕುರಿತು ಟ್ವೀಟ್ ಮಾಡಿರುವ ಎಸ್​​ಬಿಐ ತಡೆ ರಹಿತ ಬ್ಯಾಂಕಿಂಗ್ ಸೇವೆ ಹಾಗೂ ಅನಾನುಕೂಲತೆಯಿಂದ ತಪ್ಪಿಸಿಕೊಳ್ಳಲು ಗ್ರಾಹಕರು ಆಧಾರ್​​ನೊಂದಿಗೆ ಪ್ಯಾನ್ ಕಾರ್ಡ್​​ ಲಿಂಕ್ ಮಾಡಿಕೊಳ್ಳಲು ಸಲಹೆ ನೀಡುತ್ತೇವೆ ಎಂದಿದೆ. ಅಲ್ಲದೇ ಪ್ಯಾನ್​ ಅನ್ನು ಆಧಾರ್​​ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯ ಎಂದು ತಿಳಿಸಿದೆ.

ಒಂದು ವೇಳೆ ಲಿಂಕ್ ಮಾಡದೇ ಹೋದರೆ, ಕೆಲವು ವಿಶೇಷ ವಹಿವಾಟಿನಿಂದ ಪ್ಯಾನ್​ ಕಾರ್ಡ್​ ಸೇವೆ ನಿಷ್ಕ್ರಿಯಗೊಳ್ಳಲಿದೆ. ಪ್ರಸ್ತುತ ಬ್ಯಾಂಕ್ ಖಾತೆಗಳನ್ನು ತೆರೆಯುವುದು, ಬ್ಯಾಂಕ್ ಖಾತೆಗಳಲ್ಲಿ ನಗದು ಠೇವಣಿ, ಡಿಮ್ಯಾಟ್ ಖಾತೆಗಳನ್ನು ತೆರೆಯುವುದು, ಸ್ಥಿರ ಆಸ್ತಿಗಳ ವಹಿವಾಟು ಸೇರಿದಂತೆ ಹಲವಾರು ಹಣಕಾಸಿನ ವಹಿವಾಟುಗಳನ್ನು ನಡೆಸಲು ಪ್ಯಾನ್ ಕಡ್ಡಾಯವಾಗಿದೆ.

ಓದಿ: ಹೊಸ ಇ-ಫೈಲಿಂಗ್ ಪೋರ್ಟಲ್ ಪ್ರಾರಂಭಿಸಿದ ಐ-ಟಿ ಇಲಾಖೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.