ETV Bharat / bharat

ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಈ ಬಾರಿಯ ಹಜ್ ಯಾತ್ರೆಗೆ ಅವಕಾಶ - ಹಜ್​ ಯಾತ್ರೆಗೆ ಮಾರ್ಗಸೂಚಿ ಪ್ರಕಟ

ಹಜ್​ ಯಾತ್ರೆಗೆ ತೆರಳುವವರು ಕೋವಿಡ್​ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳುವುದು ಸೇರಿದಂತೆ ಕೋವಿಡ್​ ಮಾರ್ಗಸೂಚಿಗಳನ್ನು ಸೌದಿ ಆರೋಗ್ಯ ಸಚಿವಾಲಯ ಪ್ರಕಟಿಸಿದೆ.

Saudi Arabia Makes Vaccination Must And Other Criteria For Hajj 2021
ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಹಜ್​ಗೆ ಅವಕಾಶ
author img

By

Published : Mar 4, 2021, 10:03 PM IST

ಜೈಪುರ (ರಾಜಸ್ಥಾನ): ಕೋವಿಡ್​ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಈ ಬಾರಿಯ ಹಜ್​ ಯಾತ್ರೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವುದಾಗಿ ಸೌದಿ ಆರೋಗ್ಯ ಸಚಿವಾಲಯ ಘೋಷಿಸಿದೆ.

ರಾಜಸ್ಥಾನ ಹಜ್ ವೆಲ್ಫೇರ್ ಸೊಸೈಟಿಯ ಮಾಧ್ಯಮ ಪ್ರಕಟನೆ ಪ್ರಕಾರ, ಈ ಬಾರಿಯ ಹಜ್​ ಯಾತ್ರೆಗೆ ತೆರಳುವವರು ಕಡ್ಡಾಯವಾಗಿ ಕೋವಿಡ್​ ಲಸಿಕೆ ಪಡೆದಿರಬೇಕು ಮತ್ತು ಲಸಿಕೆ ಪಡೆದ ಬಗ್ಗೆ ಸೌದಿ ಸರ್ಕಾರಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕು.

ಈ ಬಗ್ಗೆ ರಾಜಸ್ಥಾನ ಹಜ್ ವೆಲ್ಫೇರ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ಹಾಜಿ ನಿಝಾಮುದ್ದೀನ್ ಮಾತನಾಡಿ, ಸೌದಿ ಸರ್ಕಾರದ ಆರೋಗ್ಯ ಸಚಿವರು ಹೊರಡಿಸಿದ ಮಾರ್ಗಸೂಚಿ ಪ್ರಕಾರ, ಹಜ್​ಗೆ ತೆರಳುವವರು ಕೋವಿಡ್​ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ ಎಂದು ಘೋಷಿಸಲಾಗಿದೆ ಎಂದು ತಿಳಿಸಿದರು. ಈ ಬಾರಿ ಎಷ್ಟು ಜನ ಹಜ್​ಗೆ ತೆರಳಲಿದ್ದಾರೆ ಮತ್ತು ಎಷ್ಟು ಜನ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂಬುವುದರ ಬಗ್ಗೆ ಅವರು ಮಾಹಿತಿ ನೀಡಿಲ್ಲ.

ಇದನ್ನೂ ಓದಿ : ಮದರಸಾಗಳಲ್ಲಿ ಗೀತಾ, ರಾಮಾಯಣ: ಸ್ಪಷ್ಟನೆ ನೀಡಿದ ಕೇಂದ್ರ ಶಿಕ್ಷಣ ಸಚಿವಾಲಯ

ಕೋವಿಡ್ ಹಿನ್ನೆಲೆ ಕಳೆದ ಬಾರಿಯ ಹಜ್​ ಯಾತ್ರೆಗೆ ಸೀಮಿತ ಸಂಖ್ಯೆಯ ಸೌದಿ ನಿವಾಸಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಇನ್ನು ಕೆಲವೇ ತಿಂಗಳಲ್ಲಿ ಹಜ್​ ಯಾತ್ರೆ ಪ್ರಾರಂಭವಾಗಲಿದ್ದು, ಸೌದಿ ಆರೋಗ್ಯ ಸಚಿವಾಲಯ ಈಗಾಗಲೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.