ETV Bharat / bharat

ಬತ್ತುತ್ತಲೇ ಸಾಗಿರುವ ಸತೋಪಂತ್ ಸರೋವರ; ಇದಕ್ಕೆ ಕಾರಣ ತಿಳಿಸಿದ ವಿಜ್ಞಾನಿ!

author img

By

Published : Oct 12, 2022, 5:31 PM IST

ಸತೋಪಂತ್​ ಸರೋವರದಲ್ಲಿ ನೀರಿನ ಮಟ್ಟ ಕುಸಿತವಾಗುತ್ತಿದ್ದು, ಸರೋವರದ ಗಾತ್ರವು ಚಿಕ್ಕದಾಗಿದೆ.

Satopant
ಸತೋಪಂತ್​ ಸರೋವರ

ಶ್ರೀನಗರ(ಉತ್ತರಾಖಂಡ): ರಾಜ್ಯದ ಚಮೋಲಿ ಜಿಲ್ಲೆಯ ಪ್ರಸಿದ್ದ ಸತೋಪಂತ್​ ಸರೋವರ ಗಾತ್ರವು ಚಿಕ್ಕದಾಗಿದ್ದು, ನೀರಿನ ಮಟ್ಟವೂ ಕುಸಿಯುತ್ತಿರುವುದು ಅಚ್ಚರಿ ಮೂಡಿಸಿದೆ. ಈ ಕುರಿತು ಅಧ್ಯಯನ ನಡೆಸಿದ ವಿಜ್ಞಾನಿಗಳು ಇದಕ್ಕೆಲ್ಲ ಹವಾಮಾನ ಬದಲಾವಣೆ ಮುಖ್ಯ ಕಾರಣ ಅದರಿಂದಾಗಿಯೇ ಕೆರೆಯ ಗಾತ್ರ ಚಿಕ್ಕದಾಗುತ್ತಿದ್ದು, ನೀರಿನ ಮಟ್ಟವೂ ಕುಸಿಯುತ್ತಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಹೇಮಾವತಿ ನಂದನ್ ಬಹುಗುಣ ಸೆಂಟ್ರಲ್ ಗರ್ವಾಲ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು, 2005 ರಿಂದ ಸತೋಪಂತ್​ ಹಿಮನದಿ ಮತ್ತು 2013 ರಿಂದ ಸತೋಪಂತ್​ ಸರೋವರದ ಮೇಲೆ ಅಧ್ಯಯನ ನಡೆಸಿದ್ದರು. ಇನ್ನು 2016ರಿಂದ ಹಿಮನದಿ ವಿಜ್ಞಾನಿ ಡಾ.ಆದಿತ್ಯ ಮಿಶ್ರಾ ಎಂಬುವವರು ಈ ಯೋಜನೆ ಕುರಿತು ಕೆಲಸ ಮಾಡುತ್ತಿದ್ದು, 2005ರಲ್ಲಿ ಸತೋಪಂತ್​ ಸರೋವರದ ಉದ್ದ 300 ಮೀಟರ್​ ಮತ್ತು ಅಗಲ 290 ಮೀಟರ್​​ ಇತ್ತು. ಆದರೇ ಕಾಲಾಂತರದಲ್ಲಿ ಸತೋಪಂತ್​ ತಾಳವು ಒಂದು ಮೀಟರ್​ನಷ್ಟು ಕುಗ್ಗಿದೆ ಎಂದು ತಿಳಿಸಿದ್ದಾರೆ.

ಇದಕ್ಕೆ ಹವಮಾನ ಬದಲಾವಣೆಯಿಂದ ಕಡಿಮೆ ಮಳೆ ಮತ್ತು ಕಡಿಮೆ ಹಿಮಪಾತವಾಗುತ್ತಿರವುದೇ ಮುಖ್ಯ ಕಾರಣವಾಗಿದೆ. ಇನ್ನು ಇದೇ ರೀತಿಯ ಪರಿಸ್ಥಿತಿ ಮುಂದುವರೆದರೆ ಮುಂದೊಂದು ದಿನ ಸರೋವರ ಬತ್ತಿ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದುರು.

ಇದನ್ನೂ ಓದಿ: ನೇಪಾಳ ಗಡಿಯಲ್ಲಿ ಭಾರಿ ಮಳೆ: ಉತ್ತರಾಖಂಡದಲ್ಲಿ ಭೂಕುಸಿತ; ಕೃತಕ ಸರೋವರ ನಿರ್ಮಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.