ETV Bharat / bharat

ಪಾಕ್​, ಚೀನಾ ಗಡಿಯಲ್ಲಿ ಕಣ್ಗಾವಲಿಗೆ ಉಪಗ್ರಹ ಬಳಕೆ: ಯೋಜನೆಗೆ ರಕ್ಷಣಾ ಸಚಿವಾಲಯ ಅಸ್ತು

ಚೀನಾ ಮತ್ತು ಪಾಕಿಸ್ತಾನ ಗಡಿಯಲ್ಲಿ ತೀವ್ರ ನಿಗಾ ವಹಿಸಲು ಭಾರತೀಯ ಸೇನಾ ಪಡೆ ಉಪಗ್ರಹದ ಮೊರೆ ಹೋಗಲು ಮುಂದಾಗಿದ್ದು, ಈ ಪ್ರಸ್ತಾಪಕ್ಕೆ ರಕ್ಷಣಾ ಸಚಿವಾಲಯ ಗ್ರೀನ್​ ಸಿಗ್ನಲ್​ ನೀಡಿದೆ.

satellite
ಉಪಗ್ರಹ
author img

By

Published : Mar 22, 2022, 10:38 PM IST

ನವದೆಹಲಿ: ಗಡಿಯಲ್ಲಿ ಭಾರತೀಯ ಸೇನಾ ಪಡೆಯ ಹದ್ದಿನ ಕಣ್ಣಿನ ಮಧ್ಯೆಯೂ ಪಾಕಿಸ್ತಾನ ಮತ್ತು ಚೀನಾ ಪಡೆಗಳ ಉಪಟಳ ಹೆಚ್ಚಿದ ಕಾರಣ ಉಪಗ್ರಹದ ಮೂಲಕ ಇನ್ನೂ ಹೆಚ್ಚಿನ ನಿಗಾ ವಹಿಸಲು ಭಾರತೀಯ ಸೇನೆ ಮುಂದಾಗಿದ್ದು, ಕಣ್ಗಾವಲು ಉಪಗ್ರಹಕ್ಕಾಗಿ 4 ಸಾವಿರ ಕೋಟಿ ರೂ. ಪ್ರಸ್ತಾಪವನೆ ಸಲ್ಲಿಸಿತ್ತು. ಇದನ್ನು ರಕ್ಷಣಾ ಸಚಿವಾಲಯ ಇದೀಗ ಅಂಗೀಕರಿಸಿದೆ.

ಮಂಗಳವಾರ ನಡೆದ ರಕ್ಷಣಾ ಸ್ವಾಧೀನ ಮಂಡಳಿ ಸಭೆಯಲ್ಲಿ ಭಾರತೀಯ ಸೇನೆಗೆಂದೇ ಮೀಸಲಿಡುವ ಉಪಗ್ರಹದ ಪ್ರಸ್ತಾವನೆಯನ್ನು ಅನುಮೋದಿಸಿದೆ. ಗಡಿ ಕಣ್ಗಾವಲಿಗಾಗಿ GSAT 7B ಉಪಗ್ರಹದ ಯೋಜನೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸಹಭಾಗಿತ್ವದಲ್ಲಿ ಕೈಗೊಳ್ಳಲಾಗುವುದು. ಇದರಿಂದ ಗಡಿ ಪ್ರದೇಶಗಳಲ್ಲಿ ಸೇನೆಯು ತನ್ನ ಕಣ್ಗಾವಲನ್ನು ಹೆಚ್ಚಿಸಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಭಾರತೀಯ ನೌಕಾಪಡೆ ಮತ್ತು ವಾಯುಪಡೆಗಳು ಈಗಾಗಲೇ ತಮ್ಮದೇ ಆದ ಉಪಗ್ರಹಗಳನ್ನು ಹೊಂದಿವೆ. ಇದೀಗ ಪದಾತಿ ದಳಕ್ಕೂ ಉಪಗ್ರಹ ಸೇವೆ ಒದಗಿಸಲು ಯೋಜನೆ ರೂಪಿಸಲಾಗಿದೆ. ಕಳೆದ ವರ್ಷದ ಏಪ್ರಿಲ್-ಮೇ ಅವಧಿಯಲ್ಲಿ ಚೀನಾದೊಂದಿಗಿನ ಮಿಲಿಟರಿ ಬಿಕ್ಕಟ್ಟಿನ ನಂತರ ಭಾರತೀಯ ಸೇನೆಯು ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಡ್ರೋನ್‌ಗಳು ಸೇರಿದಂತೆ ಸೇನಾ ಬಲವನ್ನು ಹೆಚ್ಚಿಸಿದೆ.

ಇಸ್ರೋ ನಿರ್ಮಿಸುವ ಕಣ್ಗಾವಲು ಉಪಗ್ರಹವು ದೇಶದಲ್ಲಿ ಸ್ಥಳೀಯ ಉದ್ಯಮವನ್ನು ಅಭಿವೃದ್ಧಿಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೂ ಸಹಾಯ ಮಾಡುತ್ತದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಅಮೆರಿಕ ವಾಯುಪಡೆಯಲ್ಲಿ ಭಾರತೀಯ: ಸಮವಸ್ತ್ರದಲ್ಲಿದ್ದಾಗ ಹಣೆಗೆ 'ತಿಲಕ'ವಿಡಲು ಅನುಮತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.