ಬಾರಾಮುಲ್ಲಾ(ಜಮ್ಮು-ಕಾಶ್ಮೀರ): ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಸರಪಂಚ್ (ಸ್ಥಳೀಯ ಪಂಚಾಯಿತಿ ಮುಖಂಡ) ಮೇಲೆ ಭಯೋತ್ಪಾದಕರು ಗಂಡಿನ ದಾಳಿ ನಡೆಸಿದ್ದಾರೆ. ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಈ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಮುಖಂಡ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.
-
J&K | A Sarpanch, Manzoor Ahmad Bangroo shot at and injured by terrorists in Goshbugh Pattan in Baramulla district. He has been rushed to a hospital, police said
— ANI (@ANI) April 15, 2022 " class="align-text-top noRightClick twitterSection" data="
">J&K | A Sarpanch, Manzoor Ahmad Bangroo shot at and injured by terrorists in Goshbugh Pattan in Baramulla district. He has been rushed to a hospital, police said
— ANI (@ANI) April 15, 2022J&K | A Sarpanch, Manzoor Ahmad Bangroo shot at and injured by terrorists in Goshbugh Pattan in Baramulla district. He has been rushed to a hospital, police said
— ANI (@ANI) April 15, 2022
ನಿನ್ನೆಯಷ್ಟೇ ನಾಲ್ವರು ಉಗ್ರರನ್ನು ಹೆಡೆಮುರಿ ಕಟ್ಟುವಲ್ಲಿ ಭಾರತೀಯ ಯೋಧರು ಯಶಸ್ವಿಯಾಗಿದ್ದರು. ಇದರ ಬೆನ್ನಲ್ಲೇ ಬಾಲಬಿಚ್ಚಿರುವ ಉಗ್ರರು ಬಾರಾಮುಲ್ಲಾ ಜಿಲ್ಲೆಯ ಗೋಷ್ಬುಗ್ ಪಟ್ಟಣದ ಸರಪಂಚ್ ಮಂಜೂರ್ ಅಹ್ಮದ್ ಬಂಗ್ರೂ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ವೇಳೆ ಆತ ಸಾವನ್ನಪ್ಪಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಈಗಾಗಲೇ ಭದ್ರತಾ ಪಡೆ ಲಗ್ಗೆ ಹಾಕಿದ್ದು, ಉಗ್ರರಿಗೋಸ್ಕರ ಶೋಧಕಾರ್ಯ ಆರಂಭ ಮಾಡಿದೆ.
ಇದನ್ನೂ ಓದಿ: 'ಭಾರತಕ್ಕೆ ಹಾನಿಯಾದರೆ ಯಾರನ್ನೂ ಬಿಡೆವು': ಅಮೆರಿಕದಲ್ಲಿ ನಿಂತು ರಾಜನಾಥ್ ಸಿಂಗ್ ಎಚ್ಚರಿಕೆ
ಶ್ರೀನಗರದ ಖಾಖ್ಮೋಹ್ ಪ್ರದೇಶದಲ್ಲಿ ಕಳೆದ ಕೆಲ ದಿನಗಳ ಹಿಂದೆ ಉಗ್ರಗಾಮಿಗಳು ಗುಂಡಿನ ದಾಳಿ ನಡೆಸಿ, ಓರ್ವ ಸರಪಂಚ್ನನ್ನು ಹತ್ಯೆ ಮಾಡಿದ್ದರು. ಇದಾದ ಬಳಿಕ ಕುಲ್ಗಾಮ್ ಜಿಲ್ಲೆಯಲ್ಲೂ ಓರ್ವ ಸರಪಂಚ್ನ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.