ETV Bharat / bharat

ದೇಶದೊಳಗೆ ನುಗ್ಗಿದ್ದ ವ್ಯಕ್ತಿ "ಡೇಂಜರಸ್​ ಅಲ್ಲ": ಎನ್​ಐಎಗೆ ಬಂದಿದ್ದು ಸುಳ್ಳು ಇಮೇಲ್​, ತನಿಖೆಯಲ್ಲಿ ದೃಢ

ಶಂಕಿತ ಟೆರರಿಸ್ಟ್​ ಸರ್ಫರಾಜ್​ ಪತ್ನಿಯಿಂದಲೇ ಇಮೇಲ್​- ಚೀನಾ ಮಹಿಳೆಯಿಂದ ಎನ್​ಐಎಗೆ ಮಾಹಿತಿ​- ಡೇಂಜರಸ್​ ವ್ಯಕ್ತಿ ಸರ್ಫರಾಜ್​ ಮೆಮನ್- ಎನ್​ಐಎಗೆ ಸುಳ್ಳು ಇಮೇಲ್​- ಪತ್ನಿಯಿಂದ ಸುಳ್ಳು ಆರೋಪ

ಎನ್​ಐಎಯಿಂದ ಡೇಂಜರಸ್​ ಮ್ಯಾನ್​ ವಿಚಾರಣೆ
ಎನ್​ಐಎಯಿಂದ ಡೇಂಜರಸ್​ ಮ್ಯಾನ್​ ವಿಚಾರಣೆ
author img

By

Published : Mar 1, 2023, 11:07 AM IST

Updated : Mar 1, 2023, 12:56 PM IST

ಇಂದೋರ್​(ಮಹಾರಾಷ್ಟ್ರ): ದೇಶದೊಳಗೆ "ಡೇಂಜರಸ್​ ಮ್ಯಾನ್​" ನುಗ್ಗಿದ್ದಾನೆ ಎಂಬ ಎನ್​ಐಎಗೆ ಬಂದ ಇಮೇಲ್​ ಭಾರೀ ಆತಂಕ ಸೃಷ್ಟಿಸಿತ್ತು. ಇದರ ಜಾಡು ಹಿಡಿದು ಸರ್ಫರಾಜ್ ಮೆಮನ್​ ಎಂಬಾತನನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿತ್ತು. ವಿಧ್ವಂಸಕ ಕೃತ್ಯಕ್ಕೆ ಸರ್ಫರಾಜ್​ ಸಂಚು ರೂಪಿಸಿರುವ ಆರೋಪದ ಮೇಲೆ ನಡೆದ ವಿಚಾರಣೆಯಲ್ಲಿ ಆತ ಉಗ್ರನಲ್ಲ ಎಂಬುದು ತಿಳಿದುಬಂದಿದೆ. ಅನಾಮಧೇಯ ಇಮೇಲ್​ ಸುಳ್ಳು ಎಂದು ತನಿಖೆಯಲ್ಲಿ ಗೊತ್ತಾಗಿದ್ದ, ಆತನನ್ನು ಸದ್ಯ ಬಿಡುಗಡೆ ಮಾಡಲಾಗಿದೆ.

ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸರ್ಫರಾಜ್​ ಮೆಮನ್​ರನ್ನು ನಿನ್ನೆ ಬಂಧಿಸಲಾಗಿತ್ತು. ಅಲ್ಲದೇ ಕುಟುಂಬಸ್ಥರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಸರ್ಫರಾಜ್​ ವಿರುದ್ಧ ಆತನ ಪತ್ನಿಯೇ ಪಿತೂರಿ ನಡೆಸಿ, ಸುಳ್ಳು ಆರೋಪಗಳನ್ನು ಮಾಡಿ ಎನ್​ಐಎಗೆ ಇಮೇಲ್​ ಕಳುಸಿಹಿದ್ದಳು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.

ಪತ್ನಿಯ ಸುಳ್ಳು ಆರೋಪದ ಇಮೇಲ್​: ಎನ್​ಐಎ ಬಂಧನಕ್ಕೆ ಒಳಗಾಗಿದ್ದ ಸರ್ಫರಾಜ್​ ಮೆಮನ್​ ಮತ್ತು ಆತನ ಕುಟುಂಬವನ್ನು ಹಲವು ಗಂಟೆಗಳ ವಿಚಾರಣೆ ನಡೆಸಲಾಯಿತು. ಭಯೋತ್ಪಾದಕ ಸಂಪರ್ಕಗಳ ಬಗ್ಗೆ ಎನ್‌ಐಎ ಸ್ವೀಕರಿಸಿದ ಇಮೇಲ್ ಸುಳ್ಳು ಎಂದು ತಿಳಿದುಬಂದಿದೆ. ವಿಚ್ಛೇದನ ನೀಡಲು ಇಷ್ಟವಿಲ್ಲದ ಚೀನಾದ ಪತ್ನಿ ಸರ್ಫರಾಜ್‌ ವಿರುದ್ಧ ಸುಳ್ಳು ಆರೋಪ ಮಾಡಿ ಅದನ್ನು ಎನ್​ಐಎಗೆ ಇಮೇಲ್ ಮೂಲಕ ಕಳುಹಿಸಿದ್ದರು ಎಂದು ಗೊತ್ತಾಗಿದೆ.

ಇದರಿಂದ ಇಂದೋರ್ ಪೊಲೀಸರು ಮತ್ತು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಭಯೋತ್ಪಾದಕ ಎಂದು ಶಂಕಿಸಲಾಗಿದ್ದ ಸರ್ಫರಾಜ್ ಮೆಮನ್‌ರನ್ನು ಬಿಡುಗಡೆ ಮಾಡಲಾಗಿದೆ.

ಚೀನಾದ ಮಹಿಳೆ ಸರ್ಫರಾಜ್ ಅವರ ಮೂರನೇ ಪತ್ನಿ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಇಬ್ಬರ ಮಧ್ಯೆ ಆಗಾಗ್ಗೆ ಜಗಳವಾಗುತ್ತಿತ್ತು. ಇದರಿಂದ ಸರ್ಫರಾಜ್​ ಭಾರತಕ್ಕೆ ಮರಳಿ, ಇಂದೋರ್‌ನಲ್ಲಿ ನೆಲೆಸಿದ್ದರು. ಬಳಿಕ ಆತ ಅಲ್ಲಿ ನಾಲ್ಕನೇ ವಿವಾಹವಾದರು. ಇದರಿಂದ ಆತ ತನಗೆ ವಿಚ್ಚೇದನ ನೀಡಲಿದ್ದಾನೆ ಎಂದು ಭಾವಿಸಿದ ಚೀನಾ ಪತ್ನಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಆತನ ನಂಟು ಹೊಂದಿರುವ ಆರೋಪ ಮಾಡಿ ಭಾರತದ ತನಿಖಾ ಸಂಸ್ಥೆಗೆ ಇಮೇಲ್​ ಮಾಡಿದ್ದರು. ಆದರೆ, ತನಿಖೆಯಲ್ಲಿ ಈತನ ವಿರುದ್ಧ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನೀಡಿದ ಸುಳಿವು ಆಧರಿಸಿ ಇಂದೋರ್‌ನಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಕಳೆದ ಸೋಮವಾರವಷ್ಟೇ ಮೆಮನ್‌ನನ್ನು ಬಂಧಿಸಲಾಗಿತ್ತು. ಭಯೋತ್ಪಾದನಾ ಚಟುವಟಿಕೆಗಳಲ್ಲಿ ಸರ್ಫರಾಜ್ ಮೆಮನ್ ಭಾಗಿಯಾಗಿರುವ ಆರೋಪವನ್ನು ಸಾಬೀತುಪಡಿಸಲು ಪ್ರಾಥಮಿಕವಾಗಿ ಯಾವುದೇ ಪುರಾವೆಗಳಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಮಂಗಳವಾರ ರಾತ್ರಿಯೇ ಆತನನ್ನು ಬಿಡುಗಡೆ ಮಾಡಲಾಗಿದೆ.

ಇಮೇಲ್​ನಲ್ಲಿ ಏನಿತ್ತು?: ಭಾನುವಾರ ಎನ್‌ಐಎಗೆ ಅನಾಮಧೇಯ ಮೇಲ್ ಐಡಿ ಮೂಲಕ ಸಂದೇಶ ರವಾನೆಯಾಗಿತ್ತು. ಅದರಲ್ಲಿ ಕಳೆದ 12 ವರ್ಷಗಳಿಂದ ಚೀನಾ, ಪಾಕಿಸ್ತಾನ ಮತ್ತು ಹಾಂಕಾಂಗ್‌ನಲ್ಲಿ ವಿಧ್ವಂಸಕ ಚಟುವಟಿಕೆಗಳಲ್ಲಿ ತರಬೇತಿ ಪಡೆದಿರುವ ಸರ್ಫರಾಜ್ ಮೆಮನ್ ಪ್ರಸ್ತುತ ಮುಂಬೈನಲ್ಲಿ ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸಿದ್ದಾನೆ ಎಂದು ಹೇಳಲಾಗಿತ್ತು. ಅಲ್ಲದೇ, ಈತನಿಗೆ ಸಂಬಂಧಿಸಿದ ದಾಖಲೆಗಳನ್ನೂ ಲಗತ್ತಿಸಲಾಗಿತ್ತು. ಸಂದೇಶ ಸ್ವೀಕರಿಸಿದ ತಕ್ಷಣವೇ ಎನ್​ಐಎ, ಮುಂಬೈ ಪೊಲೀಸರು ಮತ್ತು ಇತರ ತನಿಖಾ ಸಂಸ್ಥೆಗಳೊಂದಿಗೆ ಸೇರಿ ತನಿಖೆ ನಡೆಸಿತ್ತು.

ಹೇಗೆ ನಡೆದಿತ್ತು ಕಾರ್ಯಾಚರಣೆ?: ಅನಾಮಧೇಯ ಇಮೇಲ್​ ಬಂದ ಬಳಿಕ ಎನ್​ಐಎ ಅಧಿಕಾರಿಗಳು ಅಲರ್ಟ್​ ಆಗಿ ದೇಶದಲ್ಲಿ ಡೇಂಜರಸ್​ ವ್ಯಕ್ತಿ ನುಗ್ಗಿದ್ದಾನೆ ಎಂಬ ಮಾಹಿತಿಯ ಮೇರೆಗೆ ಕಾರ್ಯಾಚರಣೆಗೆ ಮುಂದಾಯಿತು. ಶಂಕಿತ ಭಯೋತ್ಪಾದಕನನ್ನು ಮುಂಬೈ ನಿವಾಸಿ ಎಂದು ಪತ್ತೆ ಮಾಡಲಾಯಿತು. ಬಳಿಕ ತನಿಖೆ ನಡೆಸಿದಾಗ ಆತ ಮಧ್ಯಪ್ರದೇಶದಲ್ಲಿ ಇರುವುದು ಪತ್ತೆಯಾಗಿದೆ. ತಕ್ಷಣವೇ ಮುಂಬೈ ಎಟಿಎಸ್​ ಪೊಲೀಸರು ಮಧ್ಯಪ್ರದೇಶ ಪೊಲೀಸರಿಗೆ ಮಾಹಿತಿ ನೀಡಿದರು.

ಇಂದೋರ್​ನ ಚಂದನ್​ ನಗರದ ಗ್ರೀನ್ ಪಾರ್ಕ್ ಕಾಲೋನಿಯಲ್ಲಿರುವ ಫಾತಿಮಾ ಅಪಾರ್ಟ್‌ಮೆಂಟ್‌ನ ನಿವಾಸಿ ಎಂಬ ಸುಳಿವು ದೊರೆತಿದೆ ಎಂದು ಗುಪ್ತಚರ ಇಲಾಖೆಯ ಡಿಸಿಪಿ ರಜತ್ ಸಕ್ಲೇಚಾರಿಗೆ ಮಾಹಿತಿ ರವಾನಿಸಲಾಗಿತ್ತು. ಇದರ ಆಧಾರದ ಮೇಲೆ ಚಂದನ್ ನಗರ ಠಾಣೆಯ ಪೊಲೀಸರು ಮೊದಲು ಸರ್ಫರಾಜ್​ನ ಪೋಷಕರನ್ನು ವಶಕ್ಕೆ ಪಡೆದಿದ್ದರು. ತಡರಾತ್ರಿ ಸರ್ಫರಾಜ್​ ತಾನೇ ಠಾಣೆಗೆ ಬಂದು ಹಾಜರಾಗಿದ್ದ.

ಮೂರು ಭಾಷೆ ಮಾತನಾಡುವ ಸರ್ಫರಾಜ್​: ಸರ್ಫರಾಜ್​ ಮೆಮನ್​ ಹಿಂದಿ, ಇಂಗ್ಲಿಷ್​ ಅಲ್ಲದೇ, ಚೈನೀಸ್ ಭಾಷೆಯನ್ನೂ ಕೂಡ ಮಾತನಾಡಬಲ್ಲ. ನಾಲ್ವರನ್ನು ವಿವಾಹವಾಗಿರುವ ಅಂತಾರಾಷ್ಟ್ರೀಯ ಉಗ್ರ ಸಂಘಟನೆಯಾದ ಐಎಸ್‌ಐ ಸದಸ್ಯ ಎಂಬ ವದಂತಿ ಹಬ್ಬಿತ್ತು. ಆದರೆ, ನಾನು ಭಯೋತ್ಪಾದಕನಲ್ಲ. ಕೆಲಸದ ನಿಮಿತ್ತ ಕಳೆದ ಕೆಲವು ವರ್ಷಗಳಿಂದ ಚೀನಾ ಮತ್ತು ಹಾಂಕಾಂಗ್‌ನಲ್ಲಿ ನೆಲೆಸಿದ್ದೆ ಎಂದು ಮೆಮನ್​ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದ. ಭಾರೀ ಆತಂಕ ಮೂಡಿಸಿದ್ದ ಡೇಂಜರಸ್​ ಮ್ಯಾನ್​ ಪ್ರಕರಣ ಕೊನೆಗೂ ಅಂತ್ಯಕಂಡಿದೆ.

ಓದಿ: ಓದು ಕೇವಲ 5ನೇ ತರಗತಿ, 3 ದೇಶಗಳಲ್ಲಿ 4 ಮದುವೆ! ಇದು ಶಂಕಿತ ಉಗ್ರನ ಹಿಸ್ಟರಿ

Last Updated : Mar 1, 2023, 12:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.