ಮುಂಬೈ: ನಟಿಯಾರಾದ ಸನ್ಯಾ ಮಲ್ಹೋತ್ರಾ ಮತ್ತು ಅಮಿರಾ ದಸ್ತೂರ್ ಕೋವಿಡ್ -19 ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ.
ಮಲ್ಹೋತ್ರಾ, 'ದಂಗಲ್', 'ಬಾದೈ ಹೋ' ಲುಡೋ ಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದಾರೆ. ಇನ್ಸ್ಟಾಗ್ರಾಂ ಸ್ಟೋರಿ ಶೇರ್ ಮಾಡಿ ಸ್ವತಃ ವ್ಯಾಕ್ಸಿನೇಷನ್ ಬಗ್ಗೆ ಮಾಹಿತಿ ನೀಡಿದ್ದಾರೆ.
28 ರ ಹರೆಯದ ದಸ್ತೂರ್ ಅವರು ಗುರುವಾರ ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಲಸಿಕೆ ಹಾಕಿದ ದಿನ ನಾನು ಚೆನ್ನಾಗಿದ್ದೆ. ಆದರೆ, ಮರು ದಿನ ಬೆಳಗ್ಗೆ ಜ್ವರ ಇತ್ತು. ಮಾತ್ರೆ ತೆಗೆದುಕೊಂಡು ನಿದ್ರೆಗೆ ಜಾರಿದೆ. ಎಲ್ಲರೂ ಲಸಿಕೆ ಪಡೆಯಿರಿ ಏನೂ ತೊಂದರೆ ಇಲ್ಲ ಎಂದಿದ್ದಾರೆ.
ಇಂದು ಮಹಾರಾಷ್ಟ್ರದಲ್ಲಿ ಹೊಸದಾಗಿ 20,740 ಮಂದಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 56,92,920 ಕ್ಕೆ ಏರಿಕೆಯಾಗಿದೆ. ಇಂದು ಕೊರೊನಾಗೆ 424 ಜನ ಉಸಿರು ಚೆಲ್ಲಿದ್ದಾರೆ. ಇದರಿಂದ ಕೊರೊನಾಗೆ ಬಲಿಯಾದವರ ಸಂಖ್ಯೆ 93,198 ಕ್ಕೆ ಏರಿದೆ.
ಒಮ್ಮೆ ಈ ವಿಡಿಯೋ ನೋಡಿ: ಗ್ರಾಮಕ್ಕೆ ರಸ್ತೆ ಸಂಪರ್ಕ ಇಲ್ಲದಿದ್ದರೂ, ಜನರಿಗೆ ಸಿಕ್ತು ಲಸಿಕೆ..!