ETV Bharat / bharat

ಜವಾಹರಲಾಲ್ ನೆಹರುಗೂ ಇಡಿ ಸಮನ್ಸ್​​ ಜಾರಿಯಾದರೂ ಅಚ್ಚರಿಯಿಲ್ಲ: ಸಂಜಯ್​ ರಾವತ್​ - ಸ್ಮಾರಕದ ಮೇಲೂ ನೋಟಿಸ್ ಅಂಟಿಸಬಹದು

ನ್ಯಾಷನಲ್​ ಹೆರಾಲ್ಡ್​ ಪತ್ರಿಕೆಯನ್ನು ಹಣಕಾಸಿಗಾಗಿ ಆರಂಭಿಸಿದ್ದಲ್ಲ. ಆದರೆ, ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು ಸೋನಿಯಾ ಗಾಂಧಿ, ರಾಹುಲ್​ ಗಾಂಧಿಗೆ ಸಮನ್ಸ್​ ಜಾರಿ ಮಾಡಿದೆ ಎಂದು ಶಿವಸೇನಾ ರಾಜ್ಯಸಭಾ ಸದಸ್ಯ ಸಂಜಯ್​ ರಾವತ್ ಬೇಸರ ವ್ಯಕ್ತಪಡಿಸಿದ್ದಾರೆ.

Sanjay Raut says it wouldn't be surprising if ED issues summons against former PM Nehru in National Herald case
ಶಿವಸೇನಾ ರಾಜ್ಯಸಭೆ ಸದಸ್ಯ ಸಂಜಯ್​ ರಾವುತ್​​
author img

By

Published : Jun 5, 2022, 10:01 PM IST

Updated : Jun 5, 2022, 10:45 PM IST

ಮುಂಬೈ (ಮಹಾರಾಷ್ಟ್ರ) : ನ್ಯಾಷನಲ್​ ಹೆರಾಲ್ಡ್​ ಪ್ರಕರಣದಲ್ಲಿ ಮಾಜಿ ಪ್ರಧಾನಿ ದಿ. ಜವಾಹರಲಾಲ್​ ನೆಹರು ಅವರಿಗೂ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್​ ಜಾರಿ ಮಾಡಿದರೂ ಅಚ್ಚರಿಯಿಲ್ಲ. ಅಲ್ಲದೇ, ಅವರ ಸ್ಮಾರಕದ ಮೇಲೂ ನೋಟಿಸ್ ಅಂಟಿಸಬಹದು ಎಂದು ಶಿವಸೇನಾ ರಾಜ್ಯಸಭೆ ಸದಸ್ಯ ಸಂಜಯ್​ ರಾವತ್​​ ವ್ಯಂಗ್ಯವಾಡಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನ್ಯಾಷನಲ್​ ಹೆರಾಲ್ಡ್​ ಪತ್ರಿಕೆಯು ಜವಾಹರಲಾಲ್​ ನೆಹರು ಅವರಿಂದ ಸೃಷ್ಟಿಯಾಗಿದ್ದ ಆಸ್ತ್ರಯೇ ಹೊರತು, ಅದು ಆಸ್ತಿಯಲ್ಲ. ಈಗ ರಾಜಕೀಯದಲ್ಲಿರುವ ಇದನ್ನು ಯಾವಾಗ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ತಾವು ಬರೆದ ಅಂಕಣದಲ್ಲಿ ಪ್ರಶ್ನಿಸಿದ್ದಾರೆ.

1937ರಲ್ಲಿ ನ್ಯಾಷನಲ್​ ಹೆರಾಲ್ಡ್​ ಪತ್ರಿಕೆಯನ್ನು ನೆಹರು ಆರಂಭಿಸಿದ್ದರು. ಆಗ ಮಹಾತ್ಮ ಗಾಂಧಿ, ಸರ್ದಾರ್​ ವಲ್ಲಭಭಾಯ್​ ಪಟೇಲ್​ ಹಾಗೂ ಸ್ವತಃ ನೆಹರು ಇದರ ಆಧಾರಸ್ತಂಭವಾಗಿದ್ದರು. ಈ ಪತ್ರಿಕೆಯ ನಿಖರ ವರದಿಗಾರಿಕೆಯಿಂದ ಬ್ರಿಟಿಷರು ಭಯ ಬಿದ್ದಿದ್ದರು ಹಾಗೂ 1942ರಿಂದ 1945ರವರೆಗೆ ನಿಷೇಧ ಹೇರಿದ್ದರು. ಈ ಪತ್ರಿಕೆಯನ್ನು ಹಣಕಾಸಿಗಾಗಿ ಆರಂಭಿಸಿದ್ದಲ್ಲ. ಆದರೆ, ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು ಕಾಂಗ್ರೆಸ್​ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿಗೆ ಸಮನ್ಸ್​ ಜಾರಿ ಮಾಡಿದೆ ಎಂದು ತಮ್ಮ ಅಂಕಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ಪತ್ರಿಕೆಯ ನಷ್ಟಕ್ಕೆ ಸಿಲುಕಿದಾಗ ನೆಹರು ನಮ್ಮ 'ಆನಂದ ಭವನ' ನಿವಾಸ ಮಾರಾಟಕ್ಕೂ ಮುಂದಾಗಿದ್ದರು. ಈ ಬಗ್ಗೆ ನ್ಯಾಷನಲ್​ ಹೆರಾಲ್ಡ್​ ಪತ್ರಿಕೆ ಆರಂಭಿಸುವಾಗ ನೆಹರು ಜೊತೆಗಿದ್ದ ಪಿ.ಡಿ. ಟಂಡನ್ ಬರೆದ ಪುಸ್ತಕದಲ್ಲಿ ಉಲ್ಲೇಖವಿದೆ. ಸಾಮ್ನಾ ಮತ್ತು ನ್ಯಾಷನಲ್​ ಹೆರಾಲ್ಡ್​ ಪತ್ರಿಕೆಯು ಎರಡೂ ಆಸ್ತಿಗಳಲ್ಲ. ಇವು ನಮ್ಮ ವಿಚಾರಗಳು ಮತ್ತು ತತ್ವಗಳನ್ನು ಪಸರಿಸುತ್ತಿವೆ ಎಂದು ರಾವತ್​ ಹೇಳಿದ್ದಾರೆ.

ಇದನ್ನೂ ಓದಿ: ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್​ ಕಮರಿಗೆ ಬಿದ್ದು ಭಾರಿ ದುರಂತ..​ 28 ಜನರಲ್ಲಿ 15 ಮಂದಿ ಶವ ಪತ್ತೆ

Last Updated : Jun 5, 2022, 10:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.