ಕೋಲ್ಕತ್ತಾ(ಪಶ್ಚಿಮ ಬಂಗಾಳ): ಮನಸಿದ್ದರೆ ಮಾರ್ಗ ಎಂಬ ಗಾದೆಗೆ ತನ್ನ ಇಚ್ಛೆ, ತಾಳ್ಮೆಯಿಂದ ಇಲ್ಲೊಬ್ಬ ಯುವಕ ಸಾಕ್ಷಿಯಾಗಿದ್ದಾರೆ. ಹೌದು, ಬಾಘಾ ಜತಿನ್ ಸಾಮ್ರಾಟ್ ಮೌಲಿಕ್ ಎಂಬುವರು ಮನುಕುಲಕ್ಕೆ ನೀರಿನ ಮಹತ್ವ ತಿಳಿಸುವ ಸಲುವಾಗಿ ದೇಶ ಮತ್ತು ವಿದೇಶಗಳನ್ನು ಬರೀ ಬೈಸಿಕಲ್ ನಲ್ಲೇ ಪ್ರಯಾಣಿಸಿದ್ದಾರೆ.
2016 ರಲ್ಲಿ, ಅವರು ತಮ್ಮ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸವನ್ನು ತ್ಯಜಿಸುವ ಮೂಲಕ ಮನುಕುಲಕ್ಕೆ ನೀರಿನ ಮಹತ್ವದ ಬಗ್ಗೆ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಏಕಾಂಗಿಯಾಗಿ ನಿರ್ಧರಿಸಿದರು. ಮತ್ತು ಇದಕ್ಕೆ ಆರಿಸಿಕೊಂಡ ಏಕೈಕ ಮಾರ್ಗವೆಂದರೆ ಬೈಸಿಕಲ್. ಸಾಮ್ರಾಟ್ ಮೌಲಿಕ್ ದೇಶ ಮತ್ತು ವಿದೇಶಗಳಲ್ಲಿನ ಎಲ್ಲಾ ದೂರದ ಮತ್ತು ದುರ್ಗಮ ಸ್ಥಳಗಳನ್ನು ಸೈಕ್ಲಿಂಗ್ ಮೂಲಕ ಸಾಗಿದ್ದಾರೆ.
ಅಚ್ಚರಿಯಾದರೂ ಇದು ಸತ್ಯ. ಸಾಮ್ರಾಟ್ರವರು ಥೈಲ್ಯಾಂಡ್, ರಷ್ಯಾ, ಶ್ರೀಲಂಕಾ ಮತ್ತು ಇತ್ತೀಚೆಗೆ ಬಾಂಗ್ಲಾದೇಶಕ್ಕೂ ಕೂಡ ತಮ್ಮ ಬೈಸಿಕಲ್ನಲ್ಲೇ ತೆರಳಿದ್ದಾರೆ. ಅವರು ಲಡಾಕ್‌ನಿಂದ ಕನ್ಯಾಕುಮಾರಿಗೆ ಸೈಕಲ್‌ನಲ್ಲಿ ಪ್ರಯಾಣಿಸಿದ್ದಲ್ಲದೆ, ಮತ್ತೊಂದೆಡೆ ಮೌಲಿಕ್ ನೀರನ್ನು ಉಳಿಸುವ ಸಲುವಾಗಿ ಜನರಿಗೆ ಸಾಮಾಜಿಕ ಸಂದೇಶವನ್ನು ತಲುಪಿಸಲು ಗಂಗೋತ್ರಿಯಿಂದ ಗಂಗಾ, ಪದ್ಮ, ಮೇಘನಾ ಮತ್ತು ಬಂಗಾಳ ಕೊಲ್ಲಿಗೆ ಕೂಡ ಸಾಗಿದ್ದರು. ಇಲ್ಲಿಯವರೆಗೆ ಒಟ್ಟು ಸೈಕ್ಲಿಸ್ಟ್ ಸಾಮ್ರಾಟ್ 15,000 ಕಿಲೋಮೀಟರ್ ಕ್ರಮಿಸಿದ್ದಾರೆ. ದಾರಿಯುದ್ದಕ್ಕು ಎಲ್ಲಾ ರೀತಿಯ ವಿಚಿತ್ರ ಅನುಭವಗಳನ್ನು ಕೂಡ ಸಂಗ್ರಹಿಸಿದ್ದಾರೆ. ಹಾಗಾಗಿ ಇವರು 'ರಿವರ್ ಸೈಕ್ಲಿಸ್ಟ್' ಎಂದೇ ಖ್ಯಾತಿ ಪಡೆದಿದ್ದಾರೆ.
'ನನಗೆ ಬಾಲ್ಯದಿಂದಲೂ ಸೈಕಲ್ ತುಳಿಯಬೇಕು ಎಂಬ ಕನಸಿತ್ತು. ಯಾಕೆಂದರೆ ಒಂದೆಡೆ ಸೈಕಲ್ ಪರಿಸರ ಸ್ನೇಹಿ ವಾಹನ. ಇನ್ನೊಂದೆಡೆ ಸೈಕಲ್ ತುಳಿಯುವ ಮೂಲಕ ಎಲ್ಲಿ ಬೇಕಾದರೂ ತಲುಪಬಹುದು ಎಂದು ತನ್ನ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ. ಅವರಿಗೆ ತನ್ನ ಈ ಪಯಣದ ಸಮಯದಲ್ಲಿ ಜಲಮಾಲಿನ್ಯದ ಪರಿಸ್ಥಿತಿಯನ್ನು ಕಂಡು ಅವರು ದಿಗ್ಭ್ರಮೆಗೊಂಡರಂತೆ. ಏಕೆಂದರೆ ಯಾವುದೇ ದೇಶದ ಜಲಮೂಲ ಕಲುಷಿತಗೊಂಡರೆ ಅದು ಆ ದೇಶಕ್ಕೆ ಮಾತ್ರ ಸಮಸ್ಯೆಯಾಗುವುದಿಲ್ಲ. ಆ ನೀರಿನ ಹರಿವಿನಿಂದಾಗಿ ಉಳಿದ ಜಲಮೂಲಗಳು ಕಲುಷಿತಗೊಳ್ಳುತ್ತವೆ' ಎನ್ನುತ್ತಾರೆ ಮೌಲಿಕ್.
'ಈ ರೀತಿಯ ಪ್ರವಾಸದಿಂದ ನಾವು ವಿವಿಧ ಸ್ಥಳಗಳಲ್ಲಿ ಜನರೊಂದಿಗೆ ಬೆರೆಯುದರೊಂದಿಗೆ ಅವರ ದೈನಂದಿನ ಜೀವನವನ್ನು ಅರಿಯಬಹುದು. ಜೊತೆಗೆ ಅವರ ಜೀವನ ಪ್ರಯಾಣವನ್ನು ಗಮನಿಸಿ ಮತ್ತು ಅವರಿಂದ ಏನನ್ನಾದರೂ ಕಲಿಯಲು ಪ್ರಯತ್ನಿಸಿದೆ. ಈ ಶಿಕ್ಷಣದೊಂದಿಗೆ, ನಾನು ಬೇರೆ ಸ್ಥಳಕ್ಕೆ ಹೋಗಿ ಅಲ್ಲಿನ ಜನರಿಗೆ ಆ ಸಂದೇಶವನ್ನು ತಲುಪಿಸುತ್ತೇನೆ ಮತ್ತು ಅವರಿಂದ ಏನನ್ನಾದರು ಹೊಸತನ್ನು ಕಲಿಯುತ್ತೇನೆ. ಈ ರೀತಿಯಾಗಿ ನಾನು ನದಿ ಮತ್ತು ಜನರ ನಡುವೆ ಸೇತುವೆಯನ್ನು ನಿರ್ಮಿಸಲು ಪ್ರಯತ್ನಿಸುತ್ತೇನೆ, ಮತ್ತು ನಾನು ನೋಡುವ ನೀರಿನ ಮಹತ್ವದ ಕನಸನ್ನು 1000 ಜನರಲ್ಲಿ ಹರಡುವಲ್ಲಿ ಯಶಸ್ವಿಯಾದರೆ ಒಂದು ದಿನ ಇಡೀ ಪ್ರಪಂಚದ ಬಣ್ಣವು ಖಂಡಿತವಾಗಿಯೂ ಮತ್ತೆ ನೀಲಿ ಬಣ್ಣವಾಗುವುದನ್ನು ನಾನು ನಂಬುತ್ತೇನೆ' ಎಂದು ಸಾಮ್ರಾಟ್ ಮೌಲಿಕ್ ತಿಳಿಸಿದ್ದಾರೆ.
ಇದನ್ನೂ ಓದಿ: ರಂಗೋಲಿಯಲ್ಲಿ ಮೂಡಿಬಂದ ಸಾಯಿಬಾಬಾ.. ವಿಶ್ವ ದಾಖಲೆ ಬರೆದ ಪುಟ್ಟ ರಂಗೋಲಿ