ETV Bharat / bharat

ಅಧಿಕಾರಿಗಳಿಂದ ವೋಟಿಂಗ್ ಮಷಿನ್ ಟ್ಯಾಂಪರಿಂಗ್​, ಅಭ್ಯರ್ಥಿಗಳಿಗೆ ಮಾಹಿತಿ ನೀಡದೇ ಸಾಗಾಟ: ಅಖಿಲೇಶ್ - ಯುಪಿಎ ಚುನಾವಣೆ

ಉತ್ತರ ಪ್ರದೇಶ ಚುನಾವಣಾ ಫಲಿತಾಂಶ ಬಹಿರಂಗಗೊಳ್ಳಲು ಕೇವಲ ಎರಡು ದಿನ ಮಾತ್ರ ಬಾಕಿ ಉಳಿದಿದೆ. ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್,​​ ವಾರಣಾಸಿ ಜಿಲ್ಲಾಧಿಕಾರಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

Samajwadi Chief Akhilesh Yadav
Samajwadi Chief Akhilesh Yadav
author img

By

Published : Mar 8, 2022, 7:54 PM IST

ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಈಗಾಗಲೇ ಮುಕ್ತಾಯಗೊಂಡಿದ್ದು, ಮಾರ್ಚ್​ 10ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ. ಇದರ ಮಧ್ಯೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್​​ ಗಂಭೀರ ಆರೋಪ ಮಾಡಿದ್ದಾರೆ.

ವಾರಣಾಸಿ ಜಿಲ್ಲಾಧಿಕಾರಿ ಸ್ಥಳೀಯ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಮಾಹಿತಿ ನೀಡದೇ ಇವಿಎಂಗಳ ಸಾಗಾಟ ಮಾಡ್ತಿದ್ದು, ಚುನಾವಣಾ ಆಯೋಗ ಇದರ ಬಗ್ಗೆ ಪರಿಶೀಲನೆ ನಡೆಸಬೇಕು ಎಂದರು.

ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಬಿಜೆಪಿ ಗೆಲ್ಲುತ್ತದೆಂಬ ಗೊಂದಲ ಸೃಷ್ಟಿಯಾಗಿದೆ. ಇದು ಊಹಾಪೋಹ ಮಾತ್ರ. ಇದು ಪ್ರಜಾಪ್ರಭುತ್ವದ ಕೊನೆಯ ಹೋರಾಟ. ಅಭ್ಯರ್ಥಿಗಳಿಗೆ ಮಾಹಿತಿ ನೀಡದೇ ಇವಿಎಂಗಳ ಸಾಗಾಟ ಮಾಡಲಾಗುತ್ತಿದ್ದು, ಇವಿಎಂಗಳ ಟ್ಯಾಂಪರಿಂಗ್ ಮಾಡಲಾಗ್ತಿದೆ. ಅಯೋಧ್ಯೆಯಲ್ಲಿ ಸಮಾಜವಾದಿ ಪಕ್ಷ ಗೆಲ್ಲುವು ಸಾಧಿಸಲಿದೆ. ಹೀಗಾಗಿ ಬಿಜೆಪಿಗೆ ಭಯ ಶುರುವಾಗಿದ್ದು, ಚುನಾವಣಾಧಿಕಾರಿಗಳ ಸಹಾಯದಿಂದ ಇಇಎಂಗಳ ಟ್ಯಾಂಪರಿಂಗ್​ನಲ್ಲಿ ಭಾಗಿಯಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಇದನ್ನೂ ಓದಿರಿ: 'ಪುರುಷರಿಗಿಂತ ನಾವೇನು ಕಮ್ಮಿ ಇಲ್ಲ..' ಶಸ್ತ್ರಾಸ್ತ್ರ ಹಿಡಿದ ಉಕ್ರೇನ್ ಮಹಿಳೆಯರು

403 ಉತ್ತರ ಪ್ರದೇಶ ವಿಧಾನಸಭೆ ಕ್ಷೇತ್ರಗಳಿಗೆ ಒಟ್ಟು 7 ಹಂತಗಳಲ್ಲಿ ಮತದಾನವಾಗಿದ್ದು, ನಾಡಿದ್ದು ಫಲಿತಾಂಶ ಬಹಿರಂಗಗೊಳ್ಳಲಿದೆ. ಅಧಿಕಾರ ನಡೆಸುತ್ತಿರುವ ಬಿಜೆಪಿ ಹಾಗೂ ಸಮಾಜವಾದಿ ಪಕ್ಷದ ನಡುವೆ ನೇರ ಪೈಪೋಟಿ ಏರ್ಪಟ್ಟಿದ್ದು, ಕಾಂಗ್ರೆಸ್​ ಕೂಡ ಕಣದಲ್ಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.