ETV Bharat / bharat

ಲೇಖಕ ಸಲ್ಮಾನ್ ರಶ್ದಿ ಅವರ ಹೊಸ ಕಾದಂಬರಿ ವಿಕ್ಟರಿ ಸಿಟಿ ಬಿಡುಗಡೆ..ಅಭಿಮಾನಿಗಳು ಖುಷ್​​ - ಬೂಕರ್ ಪ್ರಶಸ್ತಿ

ಲೇಖಕ ಸಲ್ಮಾನ್ ರಶ್ದಿಯ ಹೊಸ ಕಾದಂಬರಿ ವಿಕ್ಟರಿ ಸಿಟಿ ಬಿಡುಗಡೆ - ಇದು ರಶ್ದಿ ಅವರ 15ನೇ ಕಾದಂಬರಿಯಾಗಿದೆ.

Salman Rushdie releases new novel
ಲೇಖಕ ಸಲ್ಮಾನ್ ರಶ್ದಿಯ ಹೊಸ ಕಾದಂಬರಿ ವಿಕ್ಟರಿ ಸಿಟಿ ಬಿಡುಗಡೆ
author img

By

Published : Feb 6, 2023, 10:41 PM IST

ಕೊಲ್ಕತ್ತಾ(ಪಶ್ಚಿಮ ಬಂಗಾಳ): ಅಮೆರಿಕದಲ್ಲಿ ಚಾಕುವಿನಿಂದ ಇರಿತಕ್ಕೊಳಗಾದ ಆರು ತಿಂಗಳ ನಂತರ ಚೇತರಿಸಿಕೊಂಡಿರುವ ಲೇಖಕ ಸಲ್ಮಾನ್ ರಶ್ದಿ ತಮ್ಮ ಹೊಸ ಕಾದಂಬರಿ ವಿಕ್ಟರಿ ಸಿಟಿ ಅನ್ನು ಬಿಡುಗಡೆ ಮಾಡಿದರು, ಈ ಪುಸ್ತಕ 14ನೇ ಶತಮಾನದ ಮಹಿಳೆಯ ಮಹಾಕಾವ್ಯ ಕಥೆಯಾಗಿದ್ದು. ಇದು ರಶ್ದಿ ಅವರ 15 ನೇ ಕಾದಂಬರಿಯಾಗಿದೆ, ಈ ಪುಸ್ತಕವನ್ನು ಅವರು ತಮ್ಮ ಮೇಲೆ ದಾಳಿ ನಡೆಯುವುದಕ್ಕೂ ಮೊದಲು ಬರೆದಿದ್ದರು. ಇದು ಮೂಲತಃ ಸಂಸ್ಕೃತದಲ್ಲಿ ಬರೆಯಲಾದ ಐತಿಹಾಸಿಕ ಮಹಾಕಾವ್ಯದ ಅನುವಾದ ಎಂದು ಅವರು ಹೇಳಿದ್ದಾರೆ.

ಇದು 14 ನೇ ಶತಮಾನದಲ್ಲಿ ವಿಕ್ಟರಿ ಸಿಟಿ 'ಬಿಸ್ನಾಗ' ರಚಿಸಲು ಮಾಂತ್ರಿಕ ಶಕ್ತಿಯನ್ನು ಪಡೆದ ಅನಾಥ ಹುಡುಗಿ ಪಂಪಾ ಕಂಪನಾ ಅವರ ಕಥೆಯಾಗಿದೆ. ಇನ್ನೂ ಈ ಕಾದಂಬರಿಯು "ಪದಗಳು ಮಾತ್ರ ವಿಜೇತರು" ಎಂಬ ಸಾಲುಗಳೊಂದಿಗೆ ಮುಕ್ತಾಯವಾಗುತ್ತದೆ.

ನ್ಯೂಯಾರ್ಕ್‌ನ ಚೌಟೌಕ್ವಾದಲ್ಲಿ ಉಪನ್ಯಾಸ ನೀಡಲು ಹೊರಟಿದ್ದಾಗ ದಾಳಿ: ಅವರ ದೈಹಿಕ ಸ್ಥಿತಿಯಿಂದಾಗಿ, ರಶ್ದಿ ತಮ್ಮ ಹೊಸ ಕಾದಂಬರಿಯನ್ನು ಪ್ರಚಾರ ಮಾಡಲು ಸಾಧ್ಯವಾಗಿರಲಿಲ್ಲ, ಆದರೆ, ಅವರು ಈಗ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರು ಪುಸ್ತಕವನ್ನು ವೈಯಕ್ತಿಕವಾಗಿ ಪ್ರಚಾರ ಮಾಡುತ್ತಿಲ್ಲ. ಆದರೆ, ಟ್ವಿಟರ್ ಮೂಲಕ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆಗಸ್ಟ್ 12, 2022 ರಂದು ನ್ಯೂಯಾರ್ಕ್‌ನ ಚೌಟೌಕ್ವಾದಲ್ಲಿ ಉಪನ್ಯಾಸ ನೀಡಲು ಹೊರಟಿದ್ದಾಗ 75 ವರ್ಷದ ಲೇಖಕ ಸಲ್ಮಾನ್ ರಶ್ದಿ ಮೇಲೆ ದಾಳಿ ನಡೆದಿತ್ತು.

ಲೇಖಕ ಸಲ್ಮಾನ್​​ ರಶ್ದಿ ಮೇಲೆ ದಾಳಿ ಮಾಡಿದ್ದ ದಾಳಿಕೋರ ಹಾದಿ ಮಾತರ್ (24) ಎಂಬಾತನನ್ನು ತಕ್ಷಣ ಬಂಧಿಸಲಾಗಿತ್ತು. ಈ ದಾಳಿಯಲ್ಲಿ ಲೇಖಕ ಸಲ್ಮಾನ್ ರಶ್ದಿಯವರ ಕಣ್ಣು ಮತ್ತು ತೋಳಿಗೆ ಹಾನಿಯಾಗಿತ್ತು. ಅವರನ್ನು ದೀರ್ಘಕಾಲದವರೆಗೆ ವೆಂಟಿಲೇಟರ್ ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗಿತ್ತು. ಈ ದಾಳಿಯು ಇಡೀ ದೇಶವನ್ನು ಆಘಾತಕ್ಕೀಡು ಮಾಡಿತ್ತು. ಆದರೆ ಇರಾನ್ ಮತ್ತು ಪಾಕಿಸ್ತಾನದಂತಹ ಮುಸ್ಲಿಂ ದೇಶಗಳಲ್ಲಿನ ತೀವ್ರಗಾಮಿಗಳು ಇದನ್ನು ಸ್ವಾಗತಿಸಿದ್ದವು. ರಶ್ದಿ 1947 ರಲ್ಲಿ ಮುಂಬೈನಲ್ಲಿ ಜನಿಸಿದ್ದರು ಮತ್ತು ಅವರ ಮೊದಲ ಕಾದಂಬರಿ 'ಗ್ರಿಮಸ್' 1975 ರಲ್ಲಿ ಪ್ರಕಟಗೊಂಡಿತ್ತು. ಆರು ವರ್ಷಗಳ ನಂತರ, ಅವರ ಬೆಸ್ಟ್ ಸೆಲ್ಲರ್ ಚಿತ್ರ 'ಮಿಡ್ ನೈಟ್ಸ್ ಚಿಲ್ಡ್ರನ್' ಬೂಕರ್ ಪ್ರಶಸ್ತಿಗೆ ಭಾಜನವಾಗಿತ್ತು. 1980 ರ ದಶಕದಲ್ಲಿ ಅವರ ಕಾದಂಬರಿ 'ದಿ ಸೈಟಾನಿಕ್ ವರ್ಸಸ್' ' ಪ್ರಕಟವಾದ ನಂತರ ಇರಾನ್‌ನ ಅಯತೊಲ್ಲಾ ಖೊಮೇನಿ ಅವರಿಂದ ಕೊಲೆ ಬೆದರಿಕೆಗಳು ಬಂದಿದ್ದವು. ನಂತರ ಅವರು ಕೆಲವು ವರ್ಷಗಳ ಕಾಲ ದೇಶಭ್ರಷ್ಟರು ಕೂಡಾ ಆಗಿದ್ದರು.

ಸಲ್ಮಾನ್ ರಶ್ದಿ ಆವರ ಹೊಸ ಪುಸ್ತಕ ಬಿಡುಗಡೆಯಿಂದ ಅಭಿಮಾನಿಗಳು ಸಂತಸಗೊಂಡಿದ್ದಾರೆ, ಅವರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಅವರು ಇನ್ನೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಸಲ್ಮಾನ್ ಶೀಘ್ರ ಚೇತರಿಸಿಕೊಳ್ಳಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗದಿದ್ದರೂ. ಟ್ವಿಟ್ಟರ್ ಮೂಲಕ ಅಭಿಮಾನಿಗಳೊಂದಿಗೆ ರಶ್ದಿ ಸದಾ ಸಂಪರ್ಕದಲ್ಲಿದ್ದಾರೆ.

ಇದನ್ನೂ ಓದಿ:ರಾಷ್ಟ್ರಕ್ಕಾಗಿ ಆಡುವುದು ಮತ್ತೆ ಮಹತ್ವ ಪಡೆದುಕೊಳ್ಳಲಿದೆ.. ಕೆಲವೇ ಲೀಗ್​​ಗಳು ಮಾತ್ರವೇ​ ಉಳಿಯಲಿವೆ: ಗಂಗೂಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.