ನವದೆಹಲಿ: ಚುನಾವಣಾ ಬಾಂಡ್ಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ಬಿಐ)ನ ಕೆಲವು ನಿಗದಿತ ಬ್ಯಾಂಕ್ಗಳ ಮೂಲಕ ಬಾಂಡ್ಗಳನ್ನು ನಗದು ಆಗಿ ಪರಿವರ್ತನೆ ಮಾಡಿಕೊಳ್ಳಬಹುದಾಗಿದೆ.
ಈ ವರ್ಷದ ಅಕ್ಟೋಬರ್ 1ರಿಂದ ಅಕ್ಟೋಬರ್ 10ರವರೆಗೆ ಅವಕಾಶ ಕೆಲವು ಬ್ಯಾಂಕ್ಗಳಲ್ಲಿ ಚುನಾವಣಾ ಬಾಂಡ್ಗಳನ್ನು ಮಾರಾಟ ಮಾಡಬಹುದಾಗಿದೆ. ರಾಜಕೀಯ ಪಕ್ಷಗಳು ತಮಗೆ ಬಂದಿರುವ ಚುನಾವಣಾ ಬಾಂಡ್ಗಳನ್ನು ಈ ದಿನಾಂಕದೊಳಗೆ ಮಾರಾಟ ಮಾಡಬಹುದಾಗಿದೆ.
2018ರಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದ್ದು, ರಾಜಕೀಯ ಪಕ್ಷಗಳಿಗೆ ನೇರವಾಗಿ ಹಣ, ದೇಣಿಗೆ ನೀಡುವುದನ್ನು ತಪ್ಪಿಸಲು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ವ್ಯಕ್ತಿಗಳು ಬಾಂಡ್ಗಳ ಮೂಲಕ ದೇಣಿಗೆ ನೀಡಬಹುದಾಗಿತ್ತು.
ಈವರೆಗೆ 2018ರಿಂದ ಬಾಂಡ್ಗಳನ್ನು ವಿತರಿಸಲಾಗಿದ್ದು, ಸುಮಾರು17 ಹಂತಗಳಲ್ಲಿ ಮಾರಾಟ ಪ್ರಕ್ರಿಯೆಯೂ ನಡೆದಿದೆ. ಇದು 18ನೇ ಹಂತವಾಗಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೇವಲ 29 ಬ್ರಾಂಚ್ಗಳಲ್ಲಿ ಅವಕಾಶ ನೀಡಲಾಗಿದೆ.
ಚುನಾವಣಾ ಬಾಂಡ್ ಅನ್ನು ಡೆಪಾಸಿಟ್ ಮಾಡಿದ ರಾಜಕೀಯ ಪಕ್ಷದ ಖಾತೆಗೆ ಅಂದಿನ ದಿನವೇ ಹಣ ಜಮೆಯಾಗುತ್ತದೆ ಎಂದು ಕೇಂದ್ರ ಸರ್ಕಾರದ ಹಣಕಾಸು ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಕಾರಾಗೃಹ ಸಂಘರ್ಷ: ನೂರು ದಾಟಿದ ಸಾವಿನ ಸಂಖ್ಯೆ, ಪೈಪ್ಲೈನ್ನಲ್ಲೂ ಹೆಣಗಳ ರಾಶಿ