ETV Bharat / bharat

ಸುರಕ್ಷಿತ ಲೈಂಗಿಕ ಕ್ರಿಯೆ ಬಗ್ಗೆ ಒಂದಿಷ್ಟು.. ತಪ್ಪುಕಲ್ಪನೆಗಳೇಕೆ, ಉಸಿರಾಟದಷ್ಟೇ ಇದು ನೈಸರ್ಗಿಕ ಕ್ರಿಯೆ..

author img

By

Published : Mar 28, 2021, 5:59 PM IST

ಮಹಿಳೆ ಅಥವಾ ಪುರುಷನಿಗೆ ಎಸ್‌ಟಿಐ ಅಥವಾ ಇನ್ನಾವುದೇ ಸೋಂಕಿನ ಲಕ್ಷಣಗಳು ಇಲ್ಲದಿದ್ದರೆ, ಲೈಂಗಿಕ ಸಂಭೋಗದ ಸಮಯದಲ್ಲಿ ಕಾಂಡೋಮ್‌ಗಳ ಬಳಕೆ ಕಡ್ಡಾಯವಲ್ಲ. ಆದರೂ ಕೂಡ ಕೆಲವೊಮ್ಮೆ ಯಾವುದೇ ರೋಗಲಕ್ಷಣಗಳನ್ನು ಕಾಣಸಿಕೊಳ್ಳದಿದ್ದರೂ ಸಹ ಸೋಂಕಿಗೆ ಒಳಗಾಗಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಸೋಂಕಿನ ಆರಂಭಿಕ ಹಂತಗಳಲ್ಲಿ ಸಾಮಾನ್ಯವಾಗಿ ರೋಗಲಕ್ಷಣಗಳು ಕಂಡು ಬರುವುದಿಲ್ಲ..

Safe Sexual Practices : Misconceptions And Facts
ಸುರಕ್ಷಿತ ಲೈಂಗಿಕ ಕ್ರಿಯೆಬಗ್ಗೆ ನಿಮಗೆಷ್ಟು ಗೊತ್ತು?

ಭೂಮಿ ಮೇಲಿರುವ ಎಲ್ಲಾ ಜೀವಿಗಳಿಗೂ ಲೈಂಗಿಕಕ್ರಿಯೆ ನೈಸರ್ಗಿಕ. ಇದು ಅತಿಯಾದರೂ ವಿಷ, ಕಡಿಮೆಯಾದರೂ ಸಂಕಷ್ಟ. ಎಲ್ಲವೂ ನಿಯಮಿತವಾಗಿದ್ದರೆ ಅದರಲ್ಲೂ ಮನುಷ್ಯನ ವಿಷಯಕ್ಕೆ ಬಂದರೆ ನಿಯಮಿತ ಲೈಂಗಿಕ ಕ್ರಿಯೆ ಅನ್ನೋದು ತುಂಬಾನೆ ಸಹಕಾರಿ.

ಈ ಸಂಬಂಧ ಚರ್ಚೆ ನಡೆಸುವಾಗಲೆಲ್ಲಾ ಯಾವಾಗಲೂ ಕಾಡುವ ಪ್ರಶ್ನೆ ಅಂದರೆ ಸುರಕ್ಷಿತ ಲೈಂಗಿಕ ಅಭ್ಯಾಸಗಳಿಂದ ಅನೇಕ ಸಮಸ್ಯೆಗಳು ಮತ್ತು ರೋಗಗಳಿಂದ ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದು. ಸುರಕ್ಷಿತ ಲೈಂಗಿಕತೆ ಅಭ್ಯಾಸ ಮಾಡಲು ನಾವು ಎಲ್ಲಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಜೊತೆಗೆ ಅಸಡ್ಡೆಯನ್ನೂ ಹೊಂದಿದ್ದೇವೆ.

ಈ ಬಗ್ಗೆ ತಿಳಿದಿರಬೇಕಾದ ಅಂಶವೆಂದರೆ ಜಾಗರೂಕತೆಯಿಂದ ಇರಬೇಕಾದದ್ದಾಗಿದೆ. ಮಹಿಳೆಯರು ಮಾತ್ರವಲ್ಲ ಪ್ರಮುಖವಾಗಿ ಪುರುಷರೂ ಕೂಡ. ಸುರಕ್ಷಿತ ಲೈಂಗಿಕ ಅಭ್ಯಾಸಗಳು ಮತ್ತು ಸಂಬಂಧಿತ ತಪ್ಪುಗ್ರಹಿಕೆಗಳು ಹಾಗೂ ಸಂಗತಿಗಳನ್ನು ನಾವು ನಿಮಗೆ ಈ ಮುಖಾಂತರ ತಿಳಿಸಿ ಕೊಡಲಿದ್ದೇವೆ.

ಸರಿಯಾಗಿ ಕಾಂಡೋಮ್ ಬಳಕೆ, ತಪ್ಪಾದ ವಿಲೇವಾರಿ : ಸುರಕ್ಷಿತ ಲೈಂಗಿಕತೆಗಾಗಿ ಅದರಲ್ಲೂ ಗರ್ಭನಿರೋಧಕದ ಪ್ರಮುಖ ಅಸ್ತ್ರ ಎಂದು ಕಾಂಡೋಮ್​ನ ಪರಿಗಣಿಸಲಾಗುತ್ತದೆ. ಇದು ಅನಗತ್ಯ ಗರ್ಭಧಾರಣೆಯನ್ನು ತಡೆಯುವುದಲ್ಲದೆ, ಲೈಂಗಿಕವಾಗಿ ಹರಡುವ ಅನೇಕ ಕಾಯಿಲೆಗಳಿಂದ ರಕ್ಷಿಸುತ್ತದೆ. ಆದಾಗ್ಯೂ, ಕಾಂಡೋಮ್‌ನ ಸರಿಯಾಗಿ ಬಳಸದಿರುವುದರಿಂದ ಖುಣಾತ್ಮಕ ಪರಿಣಾಮಗಳನ್ನು ಬೀರುತ್ತದೆ.

ಪುರುಷರು ಸಂಪೂರ್ಣ ಲೈಂಗಿಕತೆಗೆ ಸಿದ್ಧರಾದಾಗ ಮಾತ್ರ ಕಾಂಡೋಮ್ ಬಳಸಬೇಕೆಂದು ವಿಜ್ಞಾನಿಗಳು ಹೇಳುತ್ತಾರೆ. ಹಾಗೆಯೇ ಕಾಂಡೋಮ್ ಧರಿಸುವ ಮೊದಲು, ಅದರೊಳಗೆ ಗಾಳಿ ಇಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ಹಾಗೆ ಸಂಭೋಗಿಸಿದ ನಂತರ ಕಾಂಡೋಮ್​ನ ಸರಿಯಾಗಿ ವಿಲೇವಾರಿ ಮಾಡಬೇಕು.

ಕಾಂಡೋಮ್ ಬಳಸುವ ಮೊದಲು ಅದರ ಪ್ಯಾಕೇಟ್​ ಮೇಲೆ ಬರೆಯಲಾಗುವ ಲೇಬಲ್‌ನ ಎಚ್ಚರಿಕೆಯಿಂದ ಓದಿಕೊಳ್ಳಬೇಕು. ಖರೀದಿಸುವ ಮೊದಲು ಅದರ ಮುಕ್ತಾಯ ದಿನಾಂಕ ಪರಿಶೀಲಿಸಿಸಬೇಕು. ಅವಧಿ ಮೀರಿದರೆ ಕಾಂಡೋಮ್‌ಗಳು ಸಾಮಾನ್ಯವಾಗಿ ಒಣಗುತ್ತವೆ ಮತ್ತು ಜಿಗುಟಾಗಿರುತ್ತವೆ. ಅವುಗಳ ಬಳಕೆಯು ಸಂತಾನೋತ್ಪತ್ತಿ ಅಂಗಗಳಿಗೆ ಹಾನಿಯನ್ನುಂಟು ಮಾಡುತ್ತದೆ.

ಜನನ ನಿಯಂತ್ರಣ ಮಾತ್ರೆಗಳು : ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮಾತ್ರವಲ್ಲ, ಪುರುಷರೂ ಸಹ ಜನನ ನಿಯಂತ್ರಣ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಎಸ್‌ಟಿಐ (ಲೈಂಗಿಕವಾಗಿ ಹರಡುವ ಸೋಂಕುಗಳು)ಹೊಂದುವ ಸಾಧ್ಯತೆಗಳು ಕಡಿಮೆಯಾಗುತ್ತವೆ ಎಂದು ನಂಬುತ್ತಾರೆ. ಆದರೆ, ಎಸ್‌ಟಿಐನಿಂದ ದೂರವಿರಲು ಉತ್ತಮ ಮಾರ್ಗವೆಂದರೆ ಸೋಂಕಿತ ವ್ಯಕ್ತಿಯೊಂದಿಗೆ ಲೈಂಗಿಕ ಸಂಬಂಧವನ್ನು ಸಂಪೂರ್ಣ ನಿಲ್ಲಿಸುವುದು.

ಲೈಂಗಿಕ ಸಮಯದಲ್ಲಿ ಗರ್ಭಧಾರಣೆಯನ್ನು ತಪ್ಪಿಸುವ ಉದ್ದೇಶವಾಗಿರಲಿ ಅಥವಾ ಮೌಖಿಕ ಲೈಂಗಿಕ ಸಮಯದಲ್ಲಿ ಹಲ್ಲುಗಳ ಸೋಂಕಿನಿಂದ ರಕ್ಷಿಸಲು ಹಲ್ಲಿನ ಅಣೆಕಟ್ಟು ಆಗಿರಲಿ ಇವೆಲ್ಲವೂ ಎಸ್‌ಟಿಐ ಹರಡುವ ಅಪಾಯಕಡಿಮೆ ಮಾಡುತ್ತವೆ. ಆದರೆ, ಲೈಂಗಿಕವಾಗಿ ಹರಡುವ ಸೋಂಕುಗಳು ಮತ್ತು ರೋಗಗಳಿಂದ 100% ಸುರಕ್ಷತೆ ಒದಗಿಸುವುದಿಲ್ಲ.

ಗರ್ಭಧಾರಣೆಯನ್ನು ತಪ್ಪಿಸಲು ಗುದ ಸಂಭೋಗ ಎಷ್ಟು ಸರಿ? : ಗುದ ಸಂಭೋಗದಲ್ಲಿ ಗರ್ಭಧಾರಣೆಯ ಸಾಧ್ಯತೆಯಿಲ್ಲ ಎಂದು ಅನೇಕ ಜನರು ಭಾವಿಸುತ್ತಾರೆ. ಆದರೆ, ಇದು ಸಂಪೂರ್ಣನಿಜವಲ್ಲ ಎಂದು ತಿಳಿದಿರಬೇಕು. ಗುದ ಸಂಭೋಗವು ಗರ್ಭಧಾರಣೆಯ ಅಪಾಯ ಕಡಿಮೆ ಮಾಡುತ್ತದೆ ಎಂಬುದು ನಿಜ. ಆದರೆ, ಕೆಲವೊಮ್ಮೆ ಅಜಾಗರೂಕತೆಯಿಂದ ಗುದ ಸಂಭೋಗದ ನಂತರ ವೀರ್ಯವು ಯೋನಿಯನ್ನೂ ತಲುಪಬಹುದು.

ಹಾಗೆಯೇ ಗುದ ಸಂಭೋಗವು ಲೈಂಗಿಕವಾಗಿ ಹರಡುವ ಸೋಂಕನ್ನು ತಡೆಯುತ್ತದೆ ಎಂದು ಅನೇಕರು ನಂಬುತ್ತಾರೆ. ಇದು ನಿಜವಲ್ಲ. ವಾಸ್ತವವಾಗಿ, ಗುದನಾಳದ ಅಂಗಾಂಶದ ತೆಳುವಾದ ಪದರವು ಸಂಭೋಗದ ಸಮಯದಲ್ಲಿ ಹರಿದುಹೋದರೆ ಸೋಂಕನ್ನು ಹರಡಬಹುದಾದ ಸಾಧ್ಯತೆ ಇದೆ. ಆದ್ದರಿಂದ ಗುದ ಸಂಭೋಗದ ಸಮಯದಲ್ಲಿ ಕಾಂಡೋಮ್​​ಗಳನ್ನು ಬಳಸುವುದು ಬಹಳ ಮುಖ್ಯ.

ಮುಟ್ಟಿನ ಸಮಯದಲ್ಲಿ ಲೈಂಗಿಕ ಕ್ರಿಯೆ : ಮಹಿಳೆಯರು ಮುಟ್ಟಾಗುವ ಸಮಯದಲ್ಲಿ ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸುವುದು ಬಹಳ ಮುಖ್ಯ. ಈ ಅವಧಿಯಲ್ಲಿ ಸೋಂಕಿನ ಅಪಾಯ ತುಂಬಾ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಇಬ್ಬರಲ್ಲಿ ಯಾರಾದರೂ ಒಬ್ಬರು ಗರ್ಭನಿರೋಧಕವನ್ನು ಕಡ್ಡಾಯವಾಗಿ ಬಳಸಬೇಕು.

ಯೋನಿಯ ಪಿಹೆಚ್ ಮಟ್ಟವು ಸಾಮಾನ್ಯವಾಗಿ 3.8 ರಿಂದ 4.5ರವರೆಗೆ ಇರುತ್ತದೆ. ಆದರೆ, ಮುಟ್ಟಿನ ಸಮಯದಲ್ಲಿ ಯೋನಿಯ ಪಿಹೆಚ್ ಮಟ್ಟವು ಹೆಚ್ಚಿರುತ್ತದೆ.ಇದು ಯೀಸ್ಟ್ ಹೆಚ್ಚಿದ ಕಾರಣ ಸೋಂಕಿನ ಅಪಾಯವನ್ನೂ ಹೆಚ್ಚಿಸುತ್ತದೆ.

ಮುಟ್ಟಿನ ಸಮಯದಲ್ಲಿ ದೈಹಿಕ ಸಂಬಂಧವನ್ನು ನಡೆಸುವುದರಿಂದ ಗರ್ಭಧಾರಣೆಯ ಅಪಾಯ ಕಡಿಮೆ ಮಾಡಬಹುದು ಎಂದು ವೈದ್ಯರು ಹೇಳುತ್ತಾರೆ. ಯಾಕೆಂದರೆ, ಈ ಸಮಯದಲ್ಲಿ ಮಹಿಳೆಯರು ಅಂಡೋತ್ಪತ್ತಿಯಿಂದ ಹಲವಾರು ದಿನಗಳು ದೂರವಿರುತ್ತಾರೆ. ಆದರೆ, ಮಹಿಳೆಯ ಖುತುಚಕ್ರವು ಕಡಿಮೆ ಅವಧಿ ಹೊಂದಿದ್ದರೆ, ಚಕ್ರದ ಕೊನೆಯ ಕೆಲವು ದಿನಗಳಲ್ಲಿ ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸುವುದು ಹೆಣ್ಣು ಗರ್ಭಧಾರಣೆಯ ಸಾಧ್ಯತೆ ಹೆಚ್ಚಿಸುತ್ತದೆ.

ಮೊದಲ ಬಾರಿಗೆ ನಡೆಸುವ ಲೈಂಗಿಕ ಸಂಭೋಗವು ಗರ್ಭಾವಸ್ಥೆಯಲ್ಲಿ ಫಲಿತಾಂಶ ನೀಡಲ್ಲ : ಮೊದಲ ಬಾರಿಗೆ ಲೈಂಗಿಕ ಸಂಭೋಗದಲ್ಲಿದ್ದರೆ ಅವರು ಯಾವುದೇ ರಕ್ಷಣಾತ್ಮಕ ಕ್ರಮಗಳನ್ನು ಅನುಸರಿಸದಿದ್ದರೂ ಸಹ ಗರ್ಭಧಾರಣೆಯ ಸಾಧ್ಯತೆಗಳು ಬಹುತೇಕ ಶೂನ್ಯವಾಗಿರುತ್ತದೆ ಎಂಬ ಸಾಮಾನ್ಯ ತಪ್ಪು ಕಲ್ಪನೆ ಜನರಲ್ಲಿದೆ.

ಇದು ನಿಜವಲ್ಲ. ಮಹಿಳೆ ಮೊದಲ ಬಾರಿಗೆ ಲೈಂಗಿಕ ಸಂಬಂಧ ಹೊಂದುತ್ತಿದ್ದಾಳೆ ಎಂದರೆ ಅಥವಾ ಹಲವಾರು ಬಾರಿ ಹೊಂದಿದ್ದರೂ ಕೂಡ ಪುರುಷನ ವೀರ್ಯವು ಮಹಿಳೆಯ ಯೋನಿಯೊಳಗೆ ಪ್ರವೇಶಿಸಿದೆ ಎಂದಾದರೆ ಗರ್ಭಧಾರಣೆಯ ಸಾಧ್ಯತೆ ಯಾವಾಗಲೂ ಹೆಚ್ಚಿರುತ್ತದೆ. ಅಲ್ಲದೆ, ಮೊದಲ ಬಾರಿಗೆ ಲೈಂಗಿಕ ಸಂಭೋಗದಲ್ಲಿದ್ದರೆ ಕಾಂಡೋಮ್ ಬಳಸುವುದು ಅತೀ ಮುಖ್ಯ. ಯಾಕೆಂದರೆ, ದೇಹದಲ್ಲಿ ವಿವಿಧ ರೀತಿಯ ಸೋಂಕುಗಳು ಬರುವ ಅಪಾಯ ಹೆಚ್ಚಿರುತ್ತದೆ.

ಹಿಂತೆಗೆದುಕೊಳ್ಳುವ ವಿಧಾನ : ಗರ್ಭಧಾರಣೆ ತಪ್ಪಿಸಲು ಅನೇಕ ಪುರುಷರು ಸ್ಖಲನದ ಮೊದಲು ಶಿಶ್ನವನ್ನು ಯೋನಿಯಿಂದ ವಾಪಸ್​ ತೆಗೆದುಕೊಳ್ಳುತ್ತಾರೆ. ಇದರ ಹಿಂದಿನ ಮೂಲ ಆಲೋಚನೆಯೆಂದರೆ ವೀರ್ಯವು ಮಹಿಳೆಯ ಜನನಾಂಗದೊಂದಿಗೆ ಸೇರುವುದಿಲ್ಲ ಎಂದು. ಗರ್ಭಧರಿಸಲು ಸಾಧ್ಯವಾಗುವುದಿಲ್ಲ ಎಂದು. ಇದು ನಿಜವಿರಬಹುದು. ಆದರೆ,ಇದು ಸುಲಭದ ಮಾರ್ಗವಲ್ಲ. ಯಾಕೆಂದರೆ, ಪರಾಕಾಷ್ಠೆಯ ಸಮಯದಲ್ಲಿ ಅದನ್ನು ಹೊರತೆಗೆಯುವುದು ಅಷ್ಟೊಂದು ಸುಲಭವಲ್ಲ.

ಇದಕ್ಕೆ ಬಲವಾದ ಇಚ್ಛಾಶಕ್ತಿ. ಪುರುಷನು ತನ್ನ ಸ್ಖಲನವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ ವೀರ್ಯವು ಮಹಿಳೆಯ ಯೋನಿಯೊಳಗೆ ಪ್ರವೇಶಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುವುದರ ಜೊತೆಗೆ ಎಸ್‌ಟಿಐ ಅಪಾಯವನ್ನೂ ಹೆಚ್ಚಿಸುತ್ತದೆ.

ನಿಮಗೆ ಎಸ್‌ಟಿಐ ಇಲ್ಲದಿದ್ದರೆ ಕಾಂಡೋಮ್ ಅಗತ್ಯವಿಲ್ಲ : ಮಹಿಳೆ ಅಥವಾ ಪುರುಷನಿಗೆ ಎಸ್‌ಟಿಐ ಅಥವಾ ಇನ್ನಾವುದೇ ಸೋಂಕಿನ ಲಕ್ಷಣಗಳು ಇಲ್ಲದಿದ್ದರೆ, ಲೈಂಗಿಕ ಸಂಭೋಗದ ಸಮಯದಲ್ಲಿ ಕಾಂಡೋಮ್‌ಗಳ ಬಳಕೆ ಕಡ್ಡಾಯವಲ್ಲ. ಆದರೂ ಕೂಡ ಕೆಲವೊಮ್ಮೆ ಯಾವುದೇ ರೋಗಲಕ್ಷಣಗಳನ್ನು ಕಾಣಸಿಕೊಳ್ಳದಿದ್ದರೂ ಸಹ ಸೋಂಕಿಗೆ ಒಳಗಾಗಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಸೋಂಕಿನ ಆರಂಭಿಕ ಹಂತಗಳಲ್ಲಿ ಸಾಮಾನ್ಯವಾಗಿ ರೋಗಲಕ್ಷಣಗಳು ಕಂಡು ಬರುವುದಿಲ್ಲ. ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸುವುದು ಸಂಗಾತಿಗೆ ಸೋಂಕು ಹರಡುವ ಅಪಾಯವನ್ನೂ ಹೆಚ್ಚಿಸುತ್ತದೆ.

ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ವ್ಯಾಯಾಮ ಬೇಡವೇ?: ಸಂಗಾತಿಯೊಂದಿಗೆ ನಿಯಮಿತವಾಗಿ ಲೈಂಗಿಕ ಸಂಭೋಗ ನಡೆಸುತ್ತಿದ್ದರೆ ವ್ಯಾಯಾಮ ಅಥವಾ ಇನ್ಯಾವುದೇ ದೇಹ ದಂಡಿಸುವ ಕಸರತ್ತಿನ ಅಗತ್ಯವಿಲ್ಲ ಎಂದು ಹೇಳಲಾಗುತ್ತದೆ. ಲೈಂಗಿಕತೆಯು ಕ್ಯಾಲೊರಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಸಂಭೋಗದ ಸಮಯದಲ್ಲಿ ಹೃದಯ ಬಡಿತವನ್ನು ಹೆಚ್ಚಿಸುತ್ತದೆ.

ಈ ಮುಖಾಂತರ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಆದರೆ, ಇದು ನಿಯಮಿತ ವ್ಯಾಯಾಮ ದಿನಚರಿ ನೀಡುವಷ್ಟು ಶಕ್ತಿಯನ್ನು ಇದರಿಂದ ಪಡೆದುಕೊಳ್ಳಲಾಗುವುದಿಲ್ಲ. ಸರಿಯಾದ ತಾಲೀಮು ಮಾಡುವುದರಿಂದ ಅದು ದೇಹಕ್ಕೆ ಅದರದೇ ಆದ ಪ್ರಯೋಜನಗಳನ್ನು ನೀಡಲಿದೆ. ಈ ಹಿನ್ನೆಲೆ ಕೇವಲ ಲೈಂಗಿಕ ಕ್ರಿಯೆಯಿಂದ ತಾಲೀಮು ಸಂಬಂಧ ಎಲ್ಲವನ್ನೂ ಸಾಧಿಸಲು ಸಾಧ್ಯವಾಗುದಿಲ್ಲ.

ಜನನಾಂಗ ಶುಚಿ ಅಗತ್ಯ : ಬಹು ಪಾಲುದಾರರೊಂದಿಗೆ ಅಸುರಕ್ಷಿತ ಲೈಂಗಿಕತೆ ಅಥವಾ ಲೈಂಗಿಕತೆಯನ್ನು ಹೊಂದಿರುವ ಜನರಲ್ಲಿ ಎಸ್‌ಟಿಐ ರೋಗಗಳು ಹೆಚ್ಚಾಗುವ ಅಪಾಯವಿದೆ. ಆದ್ದರಿಂದ, ತಮ್ಮ ಲೈಂಗಿಕ ಜೀವನದಲ್ಲಿ ಹೆಚ್ಚು ಸಕ್ರಿಯವಾಗಿರುವ ಜನರು ತಮ್ಮ ಜನನಾಂಗಗಳನ್ನುಶುಚಿಗೊಳಿಸಿಕೊಳ್ಳುತ್ತಿರಬೇಕು. ಹಾಗೆಯೇ, ಎಸ್‌ಟಿಐ ಸಂಬಂಧ ನಿಯಮಿತವಾಗಿ ವೈದ್ಯರನ್ನು ಭೇಟಿ ಮಾಡಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.